SHIVAMOGGA NEWS TODAY

ಸಫಾರಿ ವನ್ಯಜೀವಿ ವೈದ್ಯರ ಹುದ್ದೆಗೆ ರಾಜೀನಾಮೆ ನೀಡಿದ್ದರೂ, ಹೊಸ ವೈದ್ಯರನ್ನು ನೇಮಿಸಿಕೊಳ್ಳದಿರುವುದೇಕೆ ಇಡಿ?

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Shivamogga Zoo ಶಿವಮೊಗ್ಗ : ತ್ಯಾವರೆಕೊಪ್ಪ ಹುಲಿಸಿಂಹಧಾಮ ಸದಾ ಒಂದಿಲ್ಲೊಂದು ವಿವಾದದಿಂದಲೇ ಸುದ್ದಿಯಾಗುತ್ತಿದೆ. ವನ್ಯಜೀವಿ ವೈದ್ಯೆ ಡಾಕ್ಟರ್ ಸುಮೀಕ್ಷಾ ರೆಡ್ಡಿ ನೀರಾನೆಗೆ ಬಲಿಯಾದ ನಂತರ ಸಫಾರಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸಾಭೀತಾಗತೊಡಗಿದೆ. 2025 ರ ನವಂಬರ್ ನಲ್ಲಿಯೇ ವನ್ಯಜೀವಿ ವೈದ್ಯ ಡಾಕ್ಟರ್ ಮುರುಳಿ ಸಫಾರಿಯ ವ್ಯವಸ್ಥೆಗೆ ಬೇಸೆತ್ತು ರಾಜೀನಾಮೆ ನೀಡಿದ್ದಾರೆ. 

ಸೈಬರ್​ ಬುಲ್ಲಿಯಿಂಗ್​ ಬಗ್ಗೆ ಶಿವಮೊಗ್ಗ ಎಸ್​ಪಿ ಪೋಸ್ಟ್! ಡಿಜಿಟಲ್ ಕಿರುಕುಳದ ಬಗ್ಗೆ ನಿಮಗೆ ಗೊತ್ತಾ!

ಅವರ ರಾಜಿನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಬೇರೆಯ ವೈದ್ಯರನ್ನು ಸಫಾರಿಯ ಇಡಿ ಅಮರಾಕ್ಷರ್ ರವರು ನೇಮಿಸಿಕೊಳ್ಳಬೇಕಿತ್ತು. ವನ್ಯಜೀವಿ ವೈದ್ಯರಿಲ್ಲದೆ ನವಂಬರ್ ನಿಂದ ಮಾರ್ಚ್ ಅಂತ್ಯದವರೆಗೆ ಸಫಾರಿಯನ್ನು ಮುನ್ನೆಡೆಸಿದ ವೈದ್ಯರು ಯಾರು ಎಂಬುದು ಪ್ರಶ್ನೆಯಾಗಿದೆ. ವೈದ್ಯರಿಲ್ಲದ ಸಂದರ್ಭದಲ್ಲಿಯೇ ಸಫಾರಿಗೆ ನೀರಾನೆ ಬಿಳಿ ಹುಲಿಗಳ ಆಗಮನವಾಗಿದೆ. ಈ ವನ್ಯಪ್ರಾಣಿಗಳ ಕ್ವಾರಂಟೈನ್, ಆರೋಗ್ಯ ಲಾಲನೆ ಪಾಲನೆಯಲ್ಲಿ ವನ್ಯಜೀವಿ ವೈದ್ಯರ ಪಾತ್ರ ಮಹತ್ತರದ್ದಾಗಿರುತ್ತದೆ. ಆದರೆ ಇಲ್ಲಿ ಆ ವ್ಯತ್ಯಾಸಗಳಿಂದಲೇ ಸಫಾರಿಯ ವನ್ಯಜೀವಿಗಳಿಗೆ ಆರೋಗ್ಯದಲ್ಲಿ ಏರುಪೇರಾದರೂ, ನುರಿತ ವೈದ್ಯರಿಲ್ಲದ ಕಾರಣಕ್ಕೆ ಆಗ ತಾನೆ ಬಂದಿದ್ದ ಯುವವೈದ್ಯೆ ಸಾವಿಗೀಡಬೇಕಾಗಿದೆ. 

ಈ ಸಾವಿಗೆ ಹೊಣೆಯಾರು ಎಂದು ಕೆದಕುತ್ತಾ ಹೋದರೆ ವ್ಯವಸ್ಥೆಯ ಲೋಪ ನೇರವಾಗಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರನ್ನೇ ಬೊಟ್ಟು ಮಾಡಿ ತೋರಿಸುತ್ತದೆ.

ನಾನು ನವಂಬರ್ ನಲ್ಲಿಯೇ ರಾಜಿನಾಮೆ ನೀಡಿದ್ದೇನೆ. ನನಗೂ ಸಮೀಕ್ಷಾ ರೆಡ್ಡಿಯ ಸಾವಿನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಡ್ಡಿಮುರಿದಂತೆ ಮಾದ್ಯಮಗಳ ಮುಂದೆ ಹೇಳಿಕೆ ನೀಡಿರುವ ಡಾಕ್ಟರ್ ಮುರುಳಿ, ಸಫಾರಿಯ ವ್ಯವಸ್ಥೆ ಬಗ್ಗೆ ಪರೋಕ್ಷವಾಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಸಫಾರಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಇದು ಸಾರಿ ಹೇಳುತ್ತದೆ. ಸಫಾರಿಯಲ್ಲಿ ವನ್ಯ ಪ್ರಾಣಿ ಪಕ್ಷಿಗಳಿಗೆ ನಿಯಮಿತವಾಗಿ ನಿಗದಿತವಾಗಿ ಆಹಾರವನ್ನು ಕ್ರಮಬದ್ಧವಾಗಿ ನೀಡಲಾಗುತ್ತಿಲ್ಲ. ಹುಲಿ ಸಿಂಹ ಚಿರತೆ ನೀರಾನೆಯಂತ ಪ್ರಾಣಿಗಳಿಗೆ ಕಡಿಮೆ ಪ್ರಮಾಣದಲ್ಲಿ ಆಹಾರ ಪೂರೈಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮೊದಲು ತ್ಯಾವರೆಕೊಪ್ಪ ಹುಲಿಸಿಂಹಧಾಮ ಮತ್ತು ಮಾದ್ಯಮಗಳ ನಡುವೆ ಒಂದು ಭಾಂದವ್ಯವಿತ್ತು. ಈಗ ಸಫಾರಿ ಕಾಡಿನ ರಹಸ್ಯವಾಗಿದೆ. ಅಲ್ಲಿ ಏನೇ ನಡೆದರೂ ಹೊರ ಪ್ರಪಂಚಕ್ಕೆ ಮಾಹಿತಿಯೇ ಲಭ್ಯವಾಗುವುದಿಲ್ಲ. ಕಳೆದ ತಿಂಗಳು ಕರಡಿ ಮರಿಯೊಂದು ಸಾವನ್ನಪ್ಪಿದ ಸುದ್ದಿ ಗಾಳಿಯಲ್ಲಿಯೇ ತೂರಿ ಹೋಗಿದೆ ಎನ್ನಲಾಗುತ್ತಿದೆ. ಇದರ ಸತ್ಯವನ್ನು ಸಫಾರಿಯ ಇಡಿ ಅಮರಾಕ್ಷರ್ ಸ್ಪಷ್ಟಪಡಿಸಬೇಕಿದೆ..

Shivamogga Zoo Why Did ED Delay Vet Appointment

Shivamogga Zoo Why Did ED Delay Vet Appointment
Shivamogga Zoo Why Did ED Delay Vet Appointment
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.