SHIVAMOGGA NEWS TODAY

ನೀರಾನೆ ದಾಳಿ ವೈದ್ಯೆ ಸಾವು, ಸಫಾರಿ ಎಡಿ ಹಾಗೂ ವೈದ್ಯೆಯ ಮಾವ ಹೇಳಿದ್ದೇನು

Prathapa thirthahalli ನವೀಕರಣ: 20 ಮಾರ್ಚ್ 2026, 1:17 ಅಪರಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Doctor Death ಶಿವಮೊಗ್ಗ: ತ್ಯಾವರೆಕೊಪ್ಪ ಸಫಾರಿಯಲ್ಲಿ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಕಾರಣವಾದ ನೀರಾನೆ ದಾಳಿ ಬಗ್ಗೆ ಮೃಗಾಲಯದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಮರಾಕ್ಷರ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಶಿವಮೊಗ್ಗ: ಮನೆಗೆ ಕ್ಯೂರಿಂಗ್ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಗಾರೆ ಮೇಸ್ತ್ರಿ ಸಾವು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ದಿನಗಳಿಂದ ನೀರಾನೆಯು ನೀರಿನಲ್ಲಿಯೇ ಕುಳಿತಿತ್ತು. ನಿನ್ನೆ ರಾತ್ರಿ ಡಾ. ಸಮೀಕ್ಷಾ ಅವರು ಪಕ್ಷಿಯೊಂದಕ್ಕೆ ಚಿಕಿತ್ಸೆ ನೀಡಲು ಮೃಗಾಲಯಕ್ಕೆ ಬಂದಿದ್ದರು. ಆ ಸಮಯದಲ್ಲಿ ನೀರಾನೆಯ ದೇಹದ ಉಷ್ಣಾಂಶವನ್ನು ಪರೀಕ್ಷಿಸಲು ಮುಂದಾದಾಗ ಈ ದುರ್ಘಟನೆ ಸಂಭವಿಸಿದೆ ಎಂದು ವಿವರಿಸಿದರು.

ಮೃತ ಡಾ. ಸಮೀಕ್ಷಾ ಅವರು ಫೆಬ್ರವರಿ 1ರಂದು ಟ್ರೈನಿ ವೈದ್ಯೆಯಾಗಿ ಮೃಗಾಲಯಕ್ಕೆ ಸೇರ್ಪಡೆಗೊಂಡಿದ್ದರು. ರಾತ್ರಿ ವೇಳೆ ನೀರಾನೆ ಬಳಿ ಹೋಗುವಾಗ ಅಲ್ಲಿದ್ದ ಹಿರಿಯ ಪಶುವೈದ್ಯಾಧಿಕಾರಿಗಳು ಅವರಿಗೆ ಯಾವ ಸೂಚನೆ ನೀಡಿದ್ದರು ಎಂಬುದು ನಮಗೆ ತಿಳಿದಿರಲಿಲ್ಲ. ಈ ಬಗ್ಗೆ ನಾವು ಆಂತರಿಕವಾಗಿ ಚರ್ಚೆ ನಡೆಸುತ್ತೇವೆ ಮತ್ತು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಅಮರಾಕ್ಷರ್ ತಿಳಿಸಿದ್ದಾರೆ

ಮೃತರ ಸೋದರಮಾವ ರಾಜಶೇಖರ್ ಮಾತನಾಡಿ  ಡಾ. ಸಮೀಕ್ಷಾ ಅವರು ಫೆಬ್ರವರಿ 1ರಂದು ಅಪ್ರೆಂಟಿಸ್‌ಶಿಪ್‌ಗಾಗಿ ಮೃಗಾಲಯಕ್ಕೆ ಸೇರಿದ್ದರು. ಕೇವಲ ಒಂದೂವರೆ ತಿಂಗಳ ಸೇವಾವಧಿಯಲ್ಲಿದ್ದ ತರಬೇತಿ ನಿರತ ವೈದ್ಯೆಯನ್ನು ಇಂತಹ ಅಪಾಯಕಾರಿ ಪ್ರಾಣಿಯ ಬಳಿ ಒಂಟಿಯಾಗಿ ಕಳುಹಿಸಿದ್ದು ಯಾಕೆ ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ., ಅವಳು ಬೆಂಗಳೂರಿನ ಸಕಲವಾರ ಗ್ರಾಮದವಳು, ತಂದೆ-ತಾಯಿಗೆ ಒಬ್ಬಳೇ ಮಗಳು. ಸಣ್ಣ ಪಕ್ಷಿಗಳಾಗಿದ್ದರೆ ಪರವಾಗಿಲ್ಲ, ನೀರಾನೆಯಂತಹ ದೈತ್ಯ ಪ್ರಾಣಿಯ ಬಳಿ ಒಬ್ಬ ತರಬೇತಿ ಪಡೆಯುತ್ತಿರುವ ವೈದ್ಯೆಯನ್ನು ಮಾರ್ಗದರ್ಶಕರಿಲ್ಲದೆ ಬಿಟ್ಟಿದ್ದು ಸರಿಯಲ್ಲ, ಎಂದು ನೋವು ವ್ಯಕ್ತಪಡಿಸಿದ್ದಾರೆ.

Doctor Death Trainee Vet Killed in Shivamogga

Doctor Death Trainee Vet Killed in Shivamogga
Doctor Death Trainee Vet Killed in Shivamogga

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.