ರಿಷಬ್ ಶೆಟ್ಟಿ ಹೊಸ ಸಿನಿಮಾ ರಹಸ್ಯ: ಹೊಂಬಾಳೆ ಫಿಲ್ಮ್ಸ್ ಜೊತೆಗಿನ ಸಂಬಂಧಕ್ಕೆ ಬ್ರೇಕ್?

ಹಂಚಿಕೊಳ್ಳಿ
WhatsApp Facebook X Telegram
Rishab Shetty Unfollows Hombale Films?
Rishab Shetty Unfollows Hombale Films?

Rishab Shetty ಕಾಂತಾರ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಡಿವೈನ್ ಸ್ಟಾರ್ರಿಷಬ್ ಶೆಟ್ಟಿ, ಈಗ ಹೊಸದೊಂದು ಸುದ್ದಿಯ ಮೂಲಕ ಕುತೂಹಲ ಕೆರಳಿಸಿದ್ದಾರೆ. ಇತ್ತೀಚೆಗೆ ಯುಗಾದಿ ಹಬ್ಬದ ಪ್ರಯುಕ್ತ ಬಿಳಿ ಬೋರ್ಡ್ ಮೇಲೆ ಅಧ್ಯಾಯ 2 ಇಲ್ಲಿಂದ ಶುರು ಎಂದು ಬರೆದು ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದ್ದಾರೆ. ಈ ಹೊಸ ಪೋಸ್ಟರ್ ರಿಷಬ್ ಅವರ ಮುಂದಿನ ನಿರ್ದೇಶನದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಶಿವಮೊಗ್ಗ: ಕಾರು ತೊಳೆಯುವಾಗ ಪಕ್ಕದ ಮನೆಯ ಗೋಡೆಗೆ ಹಾರಿತು ನೀರು, ಆಮೇಲೆ ಆಗಿದ್ದೇ ಬೇರೆ

ಈ ಹಿಂದೆ ರಿಷಬ್ ಅವರು ಕಾಂತಾರ ಸರಣಿಯ ಮುಂದಿನ ಭಾಗದ ಬಗ್ಗೆ ಸುಳಿವು ನೀಡಿದ್ದರು. ಆದರೆ, ಈಗಿನ ಟ್ವಿಸ್ಟ್ ಏನೆಂದರೆ ಈ ಹೊಸ ಅಧ್ಯಾಯ 2 ಇಲ್ಲಿಂದ ಶುರು ಎಂಬ  ಹೆಸರಿಲ್ಲದ ಚಿತ್ರವನ್ನು ರಿಷಬ್ ಶೆಟ್ಟಿ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಹಿಂದೆ ಕಾಂತಾರ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಬದಲಿಗೆ, ರಿಷಬ್ ಅವರೇ ಸ್ವತಃ ನಿರ್ಮಾಣಕ್ಕೆ ಇಳಿದಿರುವುದು ಗಾಂಧಿನಗರದಲ್ಲಿ ಹೊಸ ಗಾಳಿಸುದ್ದಿಗಳಿಗೆ ಕಾರಣವಾಗಿದೆ.

ಅತ್ಯಂತ ಗಮನಾರ್ಹ ಸಂಗತಿಯೆಂದರೆ, ರಿಷಬ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯನ್ನು ಅನ್‌ಫಾಲೋ ಮಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಅವರು “ನನ್ನ ಸ್ವಂತ ಪ್ರೊಡಕ್ಷನ್ ಹೌಸ್ ಅನ್ನು ಬೆಳೆಸುವ ಅಗತ್ಯವಿದೆ” ಎಂದು ಹೇಳಿಕೆ ನೀಡಿದ್ದು, ಈ ಮೂಲಕ ಹೊಂಬಾಳೆ ಮತ್ತು ಶೆಟ್ಟರ ನಡುವೆ ಬಿರುಕು ಮೂಡಿದೆಯೇ ಎಂಬ ಅನುಮಾನ ಕಾಡುತ್ತಿದೆ. ಇದು ಕಾಂತಾರ ಚಾಪ್ಟರ್ 2 ಆಗಿರಬಹುದೇ ಅಥವಾ ಅವರು ಈ ಹಿಂದೆ ಘೋಷಿಸಿದ್ದ ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು-2 ಆಗಿರಬಹುದೇ ಎಂಬುದು ಸದ್ಯಕ್ಕೆ ನಿಗೂಢವಾಗಿದೆ.

Rishab Shetty Unfollows Hombale Films?

Rishab Shetty Unfollows Hombale Films?
Rishab Shetty Unfollows Hombale Films?
shivamogga car decor sun control house
shivamogga car decor sun control house

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor