SHIVAMOGGA NEWS TODAY

ಸೈಬರ್​ ಬುಲ್ಲಿಯಿಂಗ್​ ಬಗ್ಗೆ ಶಿವಮೊಗ್ಗ ಎಸ್​ಪಿ ಪೋಸ್ಟ್! ಡಿಜಿಟಲ್ ಕಿರುಕುಳದ ಬಗ್ಗೆ ನಿಮಗೆ ಗೊತ್ತಾ!

ajjimane ganesh ನವೀಕರಣ: 17 ಮಾರ್ಚ್ 2026, 7:40 ಅಪರಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

cyber bullying offences / ಶಿವಮೊಗ್ಗ /ಮಲೆನಾಡು ಟುಡೆ ಸುದ್ದಿ / ಸೈಬರ್​ ಬುಲ್ಲಿಯಿಂಗ್​ ಅಂದರೆ ನಿಮಗೆ ಗೊತ್ತಾ? ಇದೊಂದು ಅಪರಾಧ ಅನ್ನೋದು ನಿಮಗೆ ತಿಳಿದಿದ್ಯಾ? ಇಲ್ಲಿದೆ ಓದಿ ಇದರ ಬಗೆಗಿನ ಮಾಹಿತಿ. ಡಿಜಿಟಲ್ ವೇದಿಕೆ ಅಂದರೆ ಸರಳವಾಗಿ ಸೋಶಿಯಲ್ ಮೀಡಿಯಾ ಪ್ಲಾಟ್​ಫಾರಮ್​ ಬಳಸಿಕೊಂಡು ಯಾರನ್ನಾದರೂ ಅಪಮಾನಿಸುವುದು ಅಥವಾ ಕಿರುಕುಳ ನೀಡುವುದನ್ನು ಸೈಬರ್ ಬುಲ್ಲಿಯಿಂಗ್ ಎಂದು ಕರೆಯಲಾಗುತ್ತದೆ. 

Malenadu Today Shivamogga
what is cyber bullying offences do u know

21 ವರ್ಷದ ಯುವಕನಿಗೆ 20 ವರ್ಷ ಜೈಲು, 50 ಸಾವಿರ ದಂಡ! ಶಿವಮೊಗ್ಗ ಕೋರ್ಟ್ ಆದೇಶ

ಇನ್ನೊಬ್ಬರಿಗೆ ವಾಟ್ಸಾಪ್​ ಮೂಲಕ ಅವಮಾನಕರ ಕಾಮೆಂಟ್ ಗಳನ್ನು ಮಾಡುವುದು, ಅವಮಾನಕರ ರೀತಿಯ ಪೋಸ್ಟ್ ಗಳನ್ನು  ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವುದು, ನಕಲಿ ಖಾತೆಯಿಂದ ಕಿರುಕುಳ ನೀಡುವುದು, ಬೆದರಿಕೆ ಸಂದೇಶಗಳನ್ನು ರವಾನಿಸುವುದು ಹಾಗೂ ವದಂತಿ ಅಥವಾ ಸುಳ್ಳು ಸುದ್ದಿಗಳನ್ನು ಹರಡುವುದು ಈ ಸೈಬರ್ ಬುಲ್ಲಿಯಿಂಗ್ ವ್ಯಾಪ್ತಿಯ ಉದಾಹರಣೆಗಳಾಗಿವೆ. 

ಇಂತಹ ಕೃತ್ಯಗಳಲ್ಲಿ ಭಾಗಿಯಾಗುವುದು ಇನ್ಫಾರ್ಮೇಷನ್ ಟೆಕ್ನಾಲಜಿ ಆಕ್ಟ್ ರೀತ್ಯಾ ಕಠಿಣ ಶಿಕ್ಷಾರ್ಹ ಅಪರಾಧವಾಗಿದೆ. ಈ ಕಾಯ್ದೆಯನ್ವಯ ಅಪರಾಧಿಗಳಿಗೆ ಜೈಲು ವಾಸ ಹಾಗೂ ದಂಡ ಎರಡನ್ನೂ ವಿಧಿಸುವ ಅವಕಾಶವಿದೆ. ಹಾಗೆ ಈ ರೀತಿಯ ಸಮಸ್ಯೆಗೆ ಒಳಗಾದವರು ಪೊಲೀಸರು ನೆರವು ಪಡೆದುಕೊಳ್ಳಬಹುದು. ಈ ಬಗ್ಗೆ  112 ಪೊಲೀಸರಿಗೆ ಕರೆ ಮಾಡಿದರೂ ಸಾಕು, ತಕ್ಷಣವೇ ನೊಂದವರಿಗೆ ರಕ್ಷಣೆ ಸಿಗುತ್ತದೆ. 

what is cyber bullying offences do u know
what is cyber bullying offences do u know

ಸದ್ಯ ಈ ಬಗ್ಗೆ ಅಂದರೆ  ಡಿಜಿಟಲ್ ಪ್ಲಾಟ್​ಫಾರಮ್​ ದುರ್ಬಳಕೆಯ ಮೂಲಕ ನಡೆಯುತ್ತಿರುವ ಸೈಬರ್ ಬುಲ್ಲಿಯಿಂಗ್ ಕೃತ್ಯಗಳ ವಿರುದ್ಧ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ಹಾಗೂ ಜಾಗೃತಿಯನ್ನು ಮೂಡಿಸಿದೆ. ಈ ಬಗ್ಗೆ  ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಐಪಿಎಸ್ ಅವರು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಅಕೌಂಟ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಜಾಗೃತಿ ಮೂಡಿಸಿದ್ದಾರೆ.

ಹವಾಮಾನ ಮುನ್ಸೂಚನೆ! ಶಿವಮೊಗ್ಗ : ಇನ್ನೈದು ದಿನ ಗುಡುಗು, ಗಾಳಿ, ಮಳೆ!

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

What are the severe legal consequences and punishments under the Information Technology Act for those committing cyber bullying offences in Shivamogga?
END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ