ಭದ್ರಾವತಿ: ಜಾನುವಾರು ಮತ್ತು ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್

ಹಂಚಿಕೊಳ್ಳಿ
WhatsApp Facebook X Telegram
Bhadravati Police Arrest Notorious Thief
Bhadravati Police Arrest Notorious Thief

ಭದ್ರಾವತಿ: ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ಎಸಗುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ದ್ವಿಚಕ್ರ ವಾಹನಗಳು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಕಾರ್ಯಾಚರಣೆಯ ಮೂಲಕ ಒಟ್ಟು 11 ಕ್ರಿಮಿನಲ್ ಪ್ರಕರಣಗಳನ್ನು ಭೇದಿಸಲಾಗಿದೆ. 

ಶಿವಮೊಗ್ಗ ಮೃಗಾಲಯದಲ್ಲಿ ನೀರಾನೆ ದಾಳಿ: ಬೆಂಗಳೂರು ಮೂಲದ ಪಶುವೈದ್ಯಾಧಿಕಾರಿ ಸಾವು !ನಡೆದಿದ್ದೇನು!

ಘಟನೆ ವಿವರ

ಕಳೆದ ಸೆಪ್ಟೆಂಬರ್ 24, 2025 ರಂದು ಭದ್ರಾವತಿಯ ಹೊಸಸಿದ್ದಾಪುರ ಗ್ರಾಮದ ರಂಜಿತ್ ಎಂಬುವವರ ಕೊಟ್ಟಿಗೆಯಿಂದ ಎರಡು ಹಸುಗಳು ಹಾಗೂ ಒಂದು ಕರುವನ್ನು ಕಳ್ಳರು ಕಳ್ಳತನ ಮಾಡಿದ್ದರು. ಈ ಬಗ್ಗೆ ದಾಖಲಾಗಿದ್ದ ದೂರಿನ ಅನ್ವಯ ಬಿ.ಎನ್.ಎಸ್ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಾಗಿ ಬಲೆ ಬೀಸಿದ್ದರು. 

ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ಭದ್ರಾವತಿ ಡಿವೈಎಸ್‌ಪಿ ಪ್ರಕಾಶ್ ರಾಥೋಡ್ ಹಾಗೂ ಸಿಪಿಐ ನಾಗಮ್ಮ ಅವರ ಮೇಲ್ವಿಚಾರಣೆಯಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ನ್ಯೂಟೌನ್ ಪಿಎಸ್ಐ ರಮೇಶ್ ಟಿ. ಮತ್ತು ಪಿಎಸ್ಐ ಕವಿತಾ ನೇತೃತ್ವದ ಈ ತಂಡವು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿತ್ತು.

ಕಾರ್ಯಾಚರಣೆಯ ವೇಳೆ ಭದ್ರಾವತಿಯ ಅಪ್ಪರ್ ಹುತ್ತಾ ನಿವಾಸಿ ದಿಲೀಪ ಅಲಿಯಾಸ್ ಕರಿಯ (20) ಎಂಬಾತನನ್ನು ಬಂಧಿಸಲಾಗಿದೆ. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಈತ 5 ಜಾನುವಾರು ಕಳ್ಳತನ, 4 ಬೈಕ್ ಕಳ್ಳತನ, ಕೊಲೆ ಯತ್ನ ಹಾಗೂ ಹಲ್ಲೆ ಪ್ರಕರಣ ಸೇರಿದಂತೆ ಒಟ್ಟು 11 ಕೃತ್ಯಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಆರೋಪಿಯಿಂದ ಸುಮಾರು 95,500 ರೂಪಾಯಿ ಮೌಲ್ಯದ 4 ದ್ವಿಚಕ್ರ ವಾಹನಗಳು ಹಾಗೂ 20,500 ರೂಪಾಯಿ ನಗದು ಸೇರಿದಂತೆ ಒಟ್ಟು 1,16,000 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

Bhadravati Police Arrest Notorious Thief

Bhadravati Police Arrest Notorious Thief
Bhadravati Police Arrest Notorious Thief
shivamogga car decor sun control house
shivamogga car decor sun control house

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor