ತೀರ್ಥಹಳ್ಳಿ: ಸಾವಿರಾರು ರೂಪಾಯಿ ಮೌಲ್ಯದ ಬೀದಿ ದೀಪ, ನೇಮ್​ ಬೋರ್ಡ್​ ಕಳ್ಳತನ

ಹಂಚಿಕೊಳ್ಳಿ
WhatsApp Facebook X Telegram
Solar Pole and Street Light Stolen

ತೀರ್ಥಹಳ್ಳಿ :  ತಾಲೂಕಿನ ವಿರುಪಾಪುರ ಗ್ರಾಮದ ವ್ಯಾಪ್ತಿಯಲ್ಲಿ, ಗ್ರಾಮ ಪಂಚಾಯತ್ ವತಿಯಿಂದ ಅಳವಡಿಸಲಾಗಿದ್ದ ಸೋಲಾರ್ ಉಪಕರಣಗಳು ಕಳುವಾಗಿವೆ. ಗುಡ್ಡೇಪಾಲ್ ಸರ್ಕಲ್‌ನಲ್ಲಿ ಅಳವಡಿಸಲಾಗಿದ್ದ ಸುಮಾರು 30 ಸಾವಿರ ರೂಪಾಯಿ ಮೌಲ್ಯದ ಕಬ್ಬಿಣದ ಸೋಲಾರ್ ಕಂಬ ಹಾಗೂ ಅದಕ್ಕೆ ಅಳವಡಿಸಿದ್ದ ದೀಪವನ್ನು ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. 

ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೆಯಿತು ಇ-ಪೇಪರ್​ ಓದಿ

ಈ ಕಳ್ಳತನದ ಘಟನೆಯು ಮಾರ್ಚ್ 13 ರಿಂದ ಮಾರ್ಚ್ 16 ರ ಅವಧಿಯಲ್ಲಿ ನಡೆದಿದ್ದು, ಕಳ್ಳರು ಹರಿತವಾದ ಬ್ಲೇಡ್ ಅಥವಾ ಉಪಕರಣ ಬಳಸಿ ಕಂಬವನ್ನು ಕಟ್ ಮಾಡಿ ತೆಗೆದುಕೊಂಡು ಹೋಗಿರುವುದು ಕಂಡುಬಂದಿದೆ. ಇದರ ಬೆನ್ನಲ್ಲೇ ವಿರುಪಾಪುರ ಗ್ರಾಮದ ಹುಲಿಮನೆ ಬಳಿ ಇದ್ದ ನೇರಲೆ ಗ್ರಾಮ ಎಂಬ  ನೇಮ್​ ಬೋರ್ಡ್​ನ್ನು ಸಹ ಮಾರ್ಚ್ 16 ಮತ್ತು 17 ರ ನಡುವಿನ ಅವಧಿಯಲ್ಲಿ ಕಳವು ಮಾಡಲಾಗಿದೆ. 

ಈ ಹಿನ್ನೆಲೆ ತ್ರಿಯಂಬಕಾಪುರ ಗ್ರಾಮ ಪಂಚಾಯಿತಿಯ PDO ಮಾಳೂರು ಪೊಲೀಸ್ ದೂರನ್ನು ದಾಖಲಿಸಿದ್ದಾರೆ.

 Solar Pole and Street Light Stolen
Solar Pole and Street Light Stolen
shivamogga car decor sun control house
shivamogga car decor sun control house


Solar Pole and Street Light Stolen

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor