COURT LIVE

ಅಪ್ಪನ ಸ್ವಯಾರ್ಜಿತ ಆಸ್ತಿ ಮಗನದ್ದು ಮಾತ್ರ, ಮೊಮ್ಮಕ್ಕಳಿಗೆ ಹಕ್ಕಿಲ್ಲ! ಹೈಕೋರ್ಟ್​ ತೀರ್ಪು ಹಲವರಿಗೆ ನಿರಾಳ!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Grandfathers Property / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೌಟುಂಬಿಕ ಆಸ್ತಿ ಹಂಚಿಕೆ ವಿಚಾರದಲ್ಲಿ ಇದೀಗ ಹೈಕೋರ್ಟ್ ಪ್ರಕರಣವೊಂದರ ನಿಮಿತ್ತ ನೀಡಿರುವ ತೀರ್ಪು ಸಂಚಲನ ಮೂಡಿಸುತ್ತಿದೆ. ಇದೇನು ನಿಂದಲ್ಲ, ನಮ್ಮ ತಾತಂದು, ಈ ಆಸ್ತಿಯಲ್ಲಿ ಮೊಮ್ಮಗನಿಗೂ ಹಕ್ಕಿದೆ ಅಂತಾ ಊರ ಕಾನೂನು ಮಾತನಾಡುತ್ತಿದ್ದವರಿಗೆ ಹೈಕೋರ್ಟ್ ತೀರ್ಪು ತಂದೆಯ ಆಸ್ತಿ ಮಗನಿಗೆ ಹಕ್ಕು, ಅದು ವೈಯಕ್ತಿಕ ಪಿತ್ರಾರ್ಜಿತ ಅಲ್ಲ ಎಂದಿದೆ.

Whatsapp / https://chat.whatsapp.com/JrsZ8He4nN600n0r3tJItz

Grandfathers Property / ಹೈಕೋರ್ಟ್​ ನೀಡಿದ ತೀರ್ಪನಲ್ಲಿದೆ ಈ ಪ್ರಮುಖಾಂಶ

ತಾತನು ತನ್ನ ಜೀವಿತಾವಧಿಯಲ್ಲಿ ಸ್ವಂತ ದುಡಿಮೆಯಿಂದ ಸಂಪಾದಿಸಿದ ಆಸ್ತಿಯು, ಆತನ ಮರಣದ ನಂತರ ಅಥವಾ ಕೌಟುಂಬಿಕ ವಿಭಜನೆಯ ನಂತರ ಆತನ ಮಗನಿಗೆ (ಅಂದರೆ ತಂದೆಗೆ) ಸೇರಿದರೆ, ಅದು ಆ ತಂದೆಯ ಸ್ವಂತ ಅಥವಾ ವೈಯಕ್ತಿಕ ಆಸ್ತಿಯಾಗುತ್ತದೆಯೇ ಹೊರತು, ಅದನ್ನು ‘ಹಿಂದೂ ಅವಿಭಕ್ತ ಕುಟುಂಬದ’ (HUF) ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ, ಈ ರೀತಿ ತಂದೆಯ ಪಾಲಿಗೆ ಬಂದಿರುವ ವೈಯಕ್ತಿಕ ಆಸ್ತಿಯಲ್ಲಿ ಪಾಲು ಕೇಳಲು ಮೊಮ್ಮಕ್ಕಳಿಗೆ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಡಿ.ಕೆ. ಸಿಂಗ್ ಅವರ ನೇತೃತ್ವದ ವಿಭಾಗೀಯ ಪೀಠವು ಈ ಐತಿಹಾಸಿಕ ಆದೇಶವನ್ನು ಹೊರಡಿಸಿದೆ.

ಅರ್ಜಿದಾರರಾದ ಉಷಾ ಅವರು ಉಲ್ಲೇಖಿಸಿರುವ ವಿವಾದಿತ ಆಸ್ತಿಗಳನ್ನು ಆಕೆಯ ತಾತ, ಅಂದರೆ ಆಕೆಯ ತಂದೆಯ ತಂದೆ ತನ್ನ ಸ್ವಂತ ದುಡಿಮೆಯಿಂದ ಸಂಪಾದಿಸಿದ್ದರು ಎಂಬುದು ನ್ಯಾಯಾಲಯಕ್ಕೆ ಸಲ್ಲಿಸಲಾದ ದಾಖಲೆಗಳಿಂದ ಸ್ಪಷ್ಟವಾಗಿ ಸಾಬೀತಾಗಿದೆ. ಈ ಆಸ್ತಿಯನ್ನು ಅವರ ತಾತ ಹಾಗೂ ಅವರ ಮಕ್ಕಳು ಪರಸ್ಪರ ಕೌಟುಂಬಿಕ ಒಪ್ಪಂದದ ಮೂಲಕ ಹಂಚಿಕೆ ಮಾಡಿಕೊಂಡಿದ್ದರು. ನ್ಯಾಯಾಲಯದ ಆದೇಶದ ಪ್ರಕಾರ, ತಾತನ ಸ್ವಯಾರ್ಜಿತ ಆಸ್ತಿಯು ಭಾಗವಾಗಿ ತಂದೆಯ ಪಾಲಿಗೆ ಬಂದಾಗ, ಅದು ಆ ತಂದೆಯ ಸಂಪೂರ್ಣ ವೈಯಕ್ತಿಕ ಆಸ್ತಿಯಾಗಿ ಬದಲಾಗುತ್ತದೆ. ಆದರೆ, ಅದನ್ನು ಹಿಂದೂ ಕಾಯ್ದೆಯಡಿ ಬರುವ ಪಿತ್ರಾರ್ಜಿತ ಅಥವಾ ಜಂಟಿ ಕುಟುಂಬದ ಆಸ್ತಿ ಎಂದು ವ್ಯಾಖ್ಯಾನಿಸಲು ಬರುವುದಿಲ್ಲ. ಈ ತರ್ಕದ ಆಧಾರದ ಮೇಲೆ, ತಂದೆಗೆ ತನ್ನ ವೈಯಕ್ತಿಕ ಆಸ್ತಿಯನ್ನು ತನ್ನ ಇಚ್ಛೆಯಂತೆ ಯಾರಿಗಾದರೂ ವಿಲೇವಾರಿ ಮಾಡುವ, ಮಾರಾಟ ಮಾಡುವ ಅಥವಾ ದಾನ ನೀಡುವ ಸಂಪೂರ್ಣ ಕಾನೂನಾತ್ಮಕ ಹಕ್ಕಿರುತ್ತದೆ ಎಂದು ಕೋರ್ಟ್ ಹೇಳಿದೆ.

ಪ್ರಕರಣದ ಹಿನ್ನೆಲೆಯನ್ನು ಗಮನಿಸುವುದಾದರೆ, ಉಷಾ ಎನ್. ಸ್ವಾಮಿ ಅವರು 1979 ರಲ್ಲಿ ವೃತ್ತಿಯಲ್ಲಿ ವೈದ್ಯರಾಗಿರುವ ಜವರಯ್ಯ ಎನ್. ಸ್ವಾಮಿ ಎಂಬುವವರನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಆಕೆ ತನ್ನ ಪತಿಯೊಂದಿಗೆ ಅಮೆರಿಕದಲ್ಲಿಯೇ ವಾಸಿಸುತ್ತಿದ್ದಾರೆ.. ಈ ನಡುವೆ, ಭಾರತದಲ್ಲಿದ್ದ ಆಕೆಯ ತಂದೆ, ಕುಟುಂಬಕ್ಕೆ ಸೇರಿದ್ದ ಹೊಸೂರು ಬಳಿಯ 10 ಎಕರೆ ಜಮೀನನ್ನು ಉಷಾ ಅವರ ಗಮನಕ್ಕೆ ತಾರದೇ ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದರು. ಆಸ್ತಿ ಮಾರಾಟದಿಂದ ಬಂದ ಹಣದಲ್ಲಿ ಕಲ್ಲುಗಣಿಗಾರಿಕೆ ಉದ್ಯಮವನ್ನು ನಡೆಸಿ ಅಪಾರ ಲಾಭ ಗಳಿಸಿದ್ದರು ಹಾಗೂ ಈ ಲಾಭಾಂಶದ ಹಣವನ್ನು ಬಳಸಿ ಇತರ ಅನೇಕ ಬೇನಾಮಿ ಆಸ್ತಿಗಳನ್ನು ಕೂಡ ಖರೀದಿಸಿದ್ದರು. ತಂದೆ ಮಾರಾಟ ಮಾಡಿರುವ ಮೂಲ ಆಸ್ತಿಯು ಪೂರ್ವಜರಿಂದ ಬಂದ ಜಂಟಿ ಕುಟುಂಬದ ಆಸ್ತಿಯಾಗಿದ್ದು, ಅದರಲ್ಲಿ ಮಗಳಾದ ತಮಗೂ ಸಮಾನ ಪಾಲು ಸಿಗಬೇಕು, ಮತ್ತು ಬ್ಯಾಂಕ್ ಖಾತೆಗಳಲ್ಲಿರುವ ಹಣದಲ್ಲಿಯೂ ತಾನು ಭಾಗ ಪಡೆಯುವುದಕ್ಕೆ ಕಾನೂನುಬದ್ಧ ಅಧಿಕಾರ ಹೊಂದಿದ್ದೇನೆ ಎಂದು ವಾದಿಸಿದ್ದರು.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ