ಸತ್ತ ಕೋಳಿ! ಸಿಕ್ಕಿತು 25 ಸಾವಿರ ಪರಿಹಾರ! ಕಾಯಿಲೆ ಹಿಡಿದ ಕಥೆ ಓದಿ

This Article Written by / ajjimane ganesh / ಜನವರಿ 8, 2026

Thirthahalli Shimoga Drug Bust Road Rage Shivamogga Shimoga Bhadravathi Shikaripura Police Sharavathi Project Protest Shocking Incident Road Accident Accused Arrested in Shikaripura Dowry Harassment Police Constable recruitment 2026 Shivamogga Job Fair Court Orders Shimoga Traffic Fine Jayanagar Police Shimoga Youth Arrested Thieves Caught Cyber Frauds Unidentified Man Walk-in Interview Sakrebyle Elephant Camp closed Sakrebyl Shimoga Youth Arrested Thieves Caught Cyber Frauds Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed

ಶಿವಮೊಗ್ಗ  : ಕಾಯಿಲೆ ಹಿಡಿದ ಕೋಳಿಮರಿ ಸಪ್ಲೆ ಮಾಡಿದ ಕಾರಣಕ್ಕೆ ಸಂಸ್ಥೆಯೊಂದಕ್ಕೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ಹಾಕಿದೆ. ಅನಾರೋಗ್ಯಕರ ಕೋಳಿಮರಿಗಳನ್ನು ಪೂರೈಸಿ ಗ್ರಾಹಕರಿಗೆ ನಷ್ಟ ಉಂಟುಮಾಡಿದ್ದ  ಕಾರಣಕ್ಕಾಗಿ ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ, ಬೆಂಗಳೂರಿನ ಕೋಮರ್ಲ ಹ್ಯಾಚರಿಸ್ ಸಂಸ್ಥೆಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು  ಸೂಚಿಸಿದೆ. 

ಶಿವಮೊಗ್ಗ: ಅನಾರೋಗ್ಯಕರ ಕೋಳಿಮರಿ ಪೂರೈಕೆ ಮಾಡಿದ ಸಂಸ್ಥೆಗೆ ಗ್ರಾಹಕ ಆಯೋಗದಿಂದ ದಂಡ Shimoga Consumer Commission Fines Bangalore Hatchery for Supplying Unhealthy Chicks
ಶಿವಮೊಗ್ಗ: ಅನಾರೋಗ್ಯಕರ ಕೋಳಿಮರಿ ಪೂರೈಕೆ ಮಾಡಿದ ಸಂಸ್ಥೆಗೆ ಗ್ರಾಹಕ ಆಯೋಗದಿಂದ ದಂಡ Shimoga Consumer Commission Fines Bangalore Hatchery for Supplying Unhealthy Chicks

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶದಲ್ಲಿ ಏನಿದೆ/Unhealthy Chicks

ಶಿವಮೊಗ್ಗದ ನಿವಾಸಿ ತಬಸ್ಸುಮ್ ಸುಲ್ತಾನ್​ ಎಂಬವರು 2024 ರ ಡಿಸೆಂಬರ್ 1 ರಂದು  ಬೆಂಗಳೂರಿನ ಸಂಸ್ಥೆಯಿಂದ ಒಟ್ಟು 4896 ಬ್ರಾಯ್ಲರ್ ಕೋಳಿಮರಿಗಳನ್ನು 1,63,200 ರೂಪಾಯಿ ಪಾವತಿಸಿ ಖರೀದಿಸಿದ್ದರು. ಡಿಸೆಂಬರ್ 25 ರಂದು ಕೋಳಿಮರಿಗಳನ್ನು ಪೂರೈಕೆ ಮಾಡಿದ ಸಂದರ್ಭದಲ್ಲಿಯೇ ಸುಮಾರು 145 ಮರಿಗಳು ಮೃತಪಟ್ಟಿದ್ದವು. ಈ ಬಗ್ಗೆ ಸಂಸ್ಥೆಯ ಗಮನಕ್ಕೆ ತಂದಾಗ ಸತ್ತ ಮರಿಗಳ ವೆಚ್ಚವನ್ನು ಮರುಪಾವತಿಸುವುದಾಗಿ ತಿಳಿಸಿದ್ದರಂತೆ.  ಇನ್ನೂ ಕೋಳಿ ಮರಿಗಳನ್ನ ಪೂರೈಸಿದ ಬಳಿಕ ಅವುಗಳು ಔಷಧೋಪಚಾರಗಳನ್ನು ನೀಡಿದರೂ ಸಾವನ್ನಪ್ಪಿವೆ. ಮೂರು ವಾರಗಳ ಅವಧಿಯಲ್ಲಿ  ಸುಮಾರು 900 ಕೋಳಿಮರಿಗಳು ಮೃತಪಟ್ಟಿದ್ದವು. ಇದಲ್ಲದೆ ಬದುಕುಳಿದ ಮರಿಗಳ ಪೈಕಿ 250 ಮರಿಗಳು ನಿರೀಕ್ಷಿತ ತೂಕವನ್ನು ಹೊಂದಿರಲಿಲ್ಲ ಎಂಬುದು ದೂರುದಾರರ ಆರೋಪ. ಇನ್ನೂ ಈ ವಿಚಾರದಲ್ಲಿ ಕೇವಲ 360 ಮರಿಗಳಿಗೆ ಸಂಬಂಧಿಸಿದಂತೆ 12,240 ರೂಪಾಯಿಗಳನ್ನು ಮಾತ್ರ ಸಂಸ್ಥೆ ಮರುಪಾವತಿ ಮಾಡಿತ್ತು. ಆನಂತರ ಸಂಸ್ಥೆಯವರು ಅವರ ಫೋನ್ ನಂಬರ್ ಅನ್ನು ಬ್ಲಾಕ್ ಮಾಡುವ ಮೂಲಕ ಬೇಜವಾಬ್ದಾರಿತನ ಪ್ರದರ್ಶಿಸಿದ್ದರು. ಇದರಿಂದ ಬೇಸತ್ತ ಗ್ರಾಹಕರು ಸಂಸ್ಥೆಯ ಸೇವಾ ನ್ಯೂನತೆಯ ವಿರುದ್ಧ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.

ಶಿವಮೊಗ್ಗ: ಅನಾರೋಗ್ಯಕರ ಕೋಳಿಮರಿ ಪೂರೈಕೆ ಮಾಡಿದ ಸಂಸ್ಥೆಗೆ ಗ್ರಾಹಕ ಆಯೋಗದಿಂದ ದಂಡ Shimoga Consumer Commission Fines Bangalore Hatchery for Supplying Unhealthy Chicks

ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಕ ಅವರನ್ನೊಳಗೊಂಡ ಪೀಠವು ಉಭಯ ಕಡೆಯ ವಾದ ಪ್ರತಿವಾದಗಳನ್ನು ಆಲಿಸಿತು. ಗ್ರಾಹಕರಿಗೆ ಉಂಟಾದ ನಷ್ಟಕ್ಕೆ ಸಂಸ್ಥೆಯೇ ಹೊಣೆ ಎಂದು ತೀರ್ಪು ನೀಡಿದೆ. ದೂರುದಾರರಿಗೆ ವಾರ್ಷಿಕ ಶೇಕಡಾ 9 ರಷ್ಟು ಬಡ್ಡಿಯೊಂದಿಗೆ 25,000 ರೂಪಾಯಿಗಳ ಪರಿಹಾರ ಮೊತ್ತವನ್ನು ಆದೇಶ ಹೊರಬಿದ್ದ 45 ದಿನಗಳ ಒಳಗೆ ಪಾವತಿಸಬೇಕು ಎಂದು ಸೂಚಿಸಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಹಣ ಪಾವತಿಸದಿದ್ದರೆ ಬಡ್ಡಿ ದರವನ್ನು ಶೇಕಡಾ 12 ಕ್ಕೆ ಏರಿಸಲಾಗುವುದು ಎಂದು ಎಚ್ಚರಿಸಿದೆ. ಇದರೊಂದಿಗೆ ದೂರು ದಾಖಲಿಸಲು ತಗುಲಿದ ವೆಚ್ಚವಾಗಿ 10,000 ರೂಪಾಯಿಗಳನ್ನು ದೂರುದಾರರಿಗೆ ನೀಡುವಂತೆ ಸಂಸ್ಥೆಗೆ ಆದೇಶ ನೀಡಿದೆ.

ಶಿವಮೊಗ್ಗ: ಅನಾರೋಗ್ಯಕರ ಕೋಳಿಮರಿ ಪೂರೈಕೆ ಮಾಡಿದ ಸಂಸ್ಥೆಗೆ ಗ್ರಾಹಕ ಆಯೋಗದಿಂದ ದಂಡ Shimoga Consumer Commission Fines Bangalore Hatchery for Supplying Unhealthy Chicks
ಶಿವಮೊಗ್ಗ: ಅನಾರೋಗ್ಯಕರ ಕೋಳಿಮರಿ ಪೂರೈಕೆ ಮಾಡಿದ ಸಂಸ್ಥೆಗೆ ಗ್ರಾಹಕ ಆಯೋಗದಿಂದ ದಂಡ Shimoga Consumer Commission Fines Bangalore Hatchery for Supplying Unhealthy Chicks

ಶಿವಮೊಗ್ಗ: ಅನಾರೋಗ್ಯಕರ ಕೋಳಿಮರಿ ಪೂರೈಕೆ ಮಾಡಿದ ಸಂಸ್ಥೆಗೆ ಗ್ರಾಹಕ ಆಯೋಗದಿಂದ ದಂಡ Shimoga Consumer Commission Fines Bangalore Hatchery for Supplying Unhealthy Chicks

ಗ್ರಾಹಕ ಆಯೋಗ ಆದೇಶ, ಶಿವಮೊಗ್ಗ ಸುದ್ದಿ, ಕೋಳಿಮರಿ ಸಾವು, ಕೋಮರ್ಲ ಹ್ಯಾಚರಿಸ್, Consumer Forum Order, Shimoga News, Poultry Farming Loss, Komarla Hatcheries,

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

ಮುಂದಿನ ಸುದ್ದಿ ಒದಿ