ಭೂಮಿ ಮಂಜೂರು ಮಾಡಿಸಿಕೊಡಿ ಎಂದು ತಾಲ್ಲೂಕು ಕಚೇರಿಯಲ್ಲಿ ದುಂಬಾಲು ಬಿದ್ದವರಿಗೆ ಶಾಕ್! ಹೀಗೂ ಮಾಡ್ತಾರೆ ವೀಕ್ಷಕರೇ!

ಹಂಚಿಕೊಳ್ಳಿ
WhatsApp Facebook X Telegram
shivamogga police image
ಪತ್ನಿಯ ಜೊತೆ ಮಾತನಾಡಿದ್ದಕ್ಕೆ ಅಟೆಂಪ್ಟು ಮರ್ಡರ್ ಕೇಸ್ : ಕಾರು ಡಿಕ್ಕಿ ಹೊಡೆಸಿ ಕೊಲೆ ಯತ್ನ!

Fake Land Documents Created / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸಿಟಿ ಬೆಳದಂತೆ ಯಾರ ಸೈಟಿಗೆ ಇನ್ನಾರ್ಯದ್ದೋ ದಾಖಲೆ ಸೃಷ್ಟಿಯಾಗುವ ಬೆಂಗಳೂರಿನ ಛಾಳಿ ಶಿವಮೊಗ್ಗಕ್ಕೂ ಬಂದು ತುಂಬಾ ದಿನಗಳೇ ಆಯ್ತು. ಇದೊಂದು ಮಾಫಿಯಾವಾಗಿಯೇ ಬೆಳೆದು ನಿಂತಿದ್ದು, ಇಲಾಖೆಯ ಅವ್ಯವಸ್ಥೆ, ಪ್ರಭಾವಿಗಳ ಶಿಫಾರಸು, ಬಡ್ಡಿಂಗ್ ರೌಡಿಗಳ ತೋಳ್ಬಲದದಿಂದಾಗಿ, ಭೂಮಿ ಕದ್ದ ದುಡ್ಡು, ಅಪರಾಧ ಕೃತ್ಯಗಳಿಗೂ ಫಂಡ್​ ಆಗುತ್ತವೆ ಅನ್ನುವುದು ಸುಳ್ಳಾಗಿ ಉಳಿದಿಲ್ಲ. ಈವಿಚಾರದ ಚರ್ಚೆಯ ನಡುವೆ, ಸಿಟಿಯಲ್ಲೊಂದು ಭೂದಾಖಲೆ ನಕಲಿ ಮಾಡಿದ ಆರೋಪ ಕೇಳಿಬಂದಿದೆ.

ಶಿವಮೊಗ್ಗ ತಾಲ್ಲೂಕು ಕಚೇರಿ ಸಿಬ್ಬಂದಿ ನಕಲಿ ಭೂ ದಾಖಲೆ ಸೃಷ್ಟಿಸಿ ಭೂಮಿ ಮಂಜೂರು ಮಾಡಿಸಿಕೊಳ್ಳುವ ಪ್ರಯತ್ನವನ್ನು ತಡೆದಿದ್ದಾರೆ. ಅಲ್ಲದೆ ಈ ಸಂಬಂಧ ಇಬ್ಬರ ವಿರುದ್ಧ ಜಯನಗರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ಕೂಡ ದಾಖಲಾಗಿದೆ.

ಶಿವಮೊಗ್ಗ ತಾಲ್ಲೂಕು ಕಚೇರಿಯ ಅಭಿಲೇಖಾಲಯ ಶಾಖೆಯ ಡಾಟಾ ಎಂಟ್ರಿ ಆಪರೇಟರ್ ಪುನೀತ್ ಹೆಚ್.ಎಸ್. ಅವರು ಈ ವಂಚನೆಯ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಒಟ್ಟು ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ. ಆರೋಪಿಗಳು ಗೋವಿಂದಾಪುರ ಹಾಗೂ ಗೋಪಿಶೆಟ್ಟಿಕೊಪ್ಪ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಿಗೆ ಸಂಬಂಧಿಸಿದಂತೆ, ನಕಲಿ ಫಾರಂ-121 ಮೆಮೊರಾಂಡಂ, ಸರ್ವೆ ನಕಾಶೆ ಹಾಗೂ ತಹಶೀಲ್ದಾರ್ ಮತ್ತು ಕಂದಾಯ ನಿರೀಕ್ಷಕರ ನಕಲಿ ಸಹಿ ಹಾಗೂ ಸೀಲು ಇರುವ ಸಾಗುವಳಿ ಚೀಟಿಗಳನ್ನು ನೀಡಿ ಅವುಗಳನ್ನು ಭೂ ಸುರಕ್ಷ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವಂತೆ ಒತ್ತಾಯಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಕೆಲಸ ಮಾಡಿಕೊಟ್ಟರೆ ಹಣ ಕೊಡುವ ಆಮಿಷವೊನ್ನು ಒಡ್ಡಿದ್ದರಂತೆ.

Whatsapp / https://chat.whatsapp.com/JrsZ8He4nN600n0r3tJItz

ಆದರೆ ಈ ಬಗ್ಗೆ ಸಂಶಯ ಮೂಡಿದ್ದರಿಂದ ದಾಖಲೆಗಳನ್ನು ಮೇಲಾಧಿಕಾರಿಗಳಾದ ವಿಷಯ ನಿರ್ವಾಹಕ ಅಭಿನಂದನ್ ಹಾಗೂ ಶಿರಸ್ತೇದಾರ್ ವಿನಯ್ ಅವರ ಬಳಿ ಪರಿಶೀಲಿಸಿದಾಗ, ಅವು ನಕಲಿ ಎಂಬುದು ಗೊತ್ತಾಗಿದೆ. ಹಾಗಾಗಿ ನಕಲಿ ದಾಖಲೆ ಸೃಷ್ಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಕೋರಿ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಸದ್ಯ ಎಫ್​ಐಆರ್ ದರ್ಜ್ ಆಗಿ ತನಿಖೆ ನಡೆಯುತ್ತಿದೆ.

Whatsapp / https://chat.whatsapp.com/JrsZ8He4nN600n0r3tJItz

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor