ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದ ಬ್ಯಾಂಕ್ ಮ್ಯಾನೇಜರನ್ನ ರಾಬರಿ ಮಾಡಿದ ದಾರಿಹೋಕರು!

SHIVAMOGGA  |  Jan 6, 2024  |   ಹೊಸವರ್ಷದ ಆರಂಭದಲ್ಲಿಯೇ ಶಿವಮೊಗ್ಗದಲ್ಲೊಂದು ದರೋಡೆ ಪ್ರಕರಣ ದಾಖಲಾಗಿದೆ.  ಬೆಂಗಳೂರಿನಿಂದ ತಮ್ಮ ತಾಯಿಯವರನ್ನ ನೋಡಲು ಬಂದಿದ್ದ ಬ್ಯಾಂಕ್ ಮ್ಯಾನೇಜರ್​ ಒಬ್ಬರನ್ನ ಅಡ್ಡಗಟ್ಟಿ ರಾಬರಿ ಮಾಡಿದ ಸಂಬಂಧ Act & Section: IPC 1860 (U/s-394) ಅಡಿಯಲ್ಲಿ ತುಂಗಾ ನಗರ ಪೊಲೀಸ್ ಸ್ಟೇಷನ್ (Tunga Nagar Police Station) ನಲ್ಲಿ ಕೇಸ್ ದಾಖಲಾಗಿದೆ. 

Tunga Nagar Police Station

ಇಲ್ಲಿನ ಲಗಾನ್ ಕಲ್ಯಾಣ ಮಂದಿರದ ರೋಡ್​ನಲ್ಲಿ ಈ ಘಟನೆ ನಡೆದಿದೆ. ಬೆಳಗ್ಗಿನ ಜಾವ ಘಟನೆ ನಡೆದಿದ್ದರಿಂದ ಈ ಬಗ್ಗೆ ಹೆಚ್ಚಾಗಿ ವಿಚಾರ ಗೊತ್ತಾಗಿರಲಿಲ್ಲ. ಇದೀಗ ಪೊಲೀಸ್ ಕಂಪ್ಲೆಂಟ್ ಆಗಿದ್ದು ಪೊಲೀಸರು ಆರೋಪಿಗಳನ್ನ ಹಿಡಿಯಬೇಕಿದೆ. 

READ :  Arecanut Rate?  ಎಲ್ಲೆಲ್ಲಿ ಎಷ್ಟಿದೆ ಅಡಿಕೆ ದರ ? ಪೂರ್ತಿ ವಿವರ?

ಲಗಾನ್ ಕಲ್ಯಾಣ ಮಂದಿರ ಶಿವಮೊಗ್ಗ/ Lagana Kalyana Mandir Shivamogga’

ಬೆಂಗಳೂರು  ಬಸವನಗುಡಿಯಲ್ಲಿರುವ ಬ್ಯಾಂಕ್​ವೊಂದರ ಮ್ಯಾನೇಜರ್ ಒಬ್ಬರು, ಶಿವಮೊಗ್ಗದಲ್ಲಿರುವ ತಮ್ಮ ತಾಯಿಯನ್ನ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಿದ್ದರು. ಅವರನ್ನ ಡಿಸ್ಚಾರ್ಜ್​ ಮಾಡಿಕೊಂಡು ಬರುವ ಸಲುವಾಗಿ ಮ್ಯಾನೇಜರ್ ಬೆಂಗಳೂರಿನಿಂದ ನೈಟ್ ಬಸ್​ ಹತ್ತಿಕೊಂಡು ಶಿವಮೊಗ್ಗಕ್ಕೆ ಬಂದಿದ್ದಾರೆ. ಬಸ್​ ನಿಲ್ದಾಣದಿಂದ ಮಹೇಂದ್ರ ಶೋರೂಂನವರೆಗೂ ಆಟೋದಲ್ಲಿ ಬಂದ ಮ್ಯಾನೇಜರ್ ಅಲ್ಲಿಂದ ಲಗಾನ್ ಮಂದಿರ ರೋಡ್​​ನಲ್ಲಿ ನಡೆದುಕೊಂಡು ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ತಮ್ಮ ಮನೆಗೆ  ಹೊರಟಿದ್ದಾರೆ. 

ಶಿಕಾರಿಪುರಕ್ಕೆ ಹೇಗೆ ಹೋಗಬೇಕು?

ಈ ನಡುವೆ ಬೈಕ್​ನಲ್ಲಿ ಬಂದ ಇಬ್ಬರು ಮ್ಯಾನೇಜರ್​ ಬಳಿಯಲ್ಲಿ ಶಿಕಾರಿಪುರಕ್ಕೆ ಹೇಗೆ ಹೋಗಬೇಕು ಎಂದು ಅಡ್ರೆಸ್​ ಕೇಳಿದ್ದಾರೆ. ಏನೋ ದಾರಿತಪ್ಪಿರಬಹುದು ಎಂದುಕೊಂಡು ಮ್ಯಾನೇಜರ್ ದಾರಿ ತೋರಿದ್ದಾರೆ. ಅವರು ತೋರಿದ ದಿಕ್ಕಿಗೆ ಹೋದ ಆರೋಪಿಗಳು ಮತ್ತೆ ವಾಪಸ್ ಬಂದು ಮಾರಕಾಸ್ತ್ರ ತೋರಿಸಿ ಮ್ಯಾನೇಜರ್​ ಕೈಯಲ್ಲಿದ್ದ ಬ್ಯಾಗ್ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಮ್ಯಾನೇಜರ್​ ಬೆಂಗಳೂರಿನಿಂದ ಬರುವಾಗ 35 ಸಾವಿರ ರೂಪಾಯಿ ತಾಯಿಯ ಡಿಸ್ಚಾರ್ಜ್​ಗಾಗಿ ಹಿಡಿದುಕೊಂಡು ಬಂದಿದ್ದರು. ಆ ಹಣ ಹಾಗೂ ಮೊಬೈಲ್ ನ್ನ ಆರೋಪಿಗಳು ರಾಬರಿ ಮಾಡಿಕೊಂಡು ಪರಾರಿಯಾಗಿದ್ದಾರೆ. ಸದ್ಯ ಈ ಸಂಬಂಧ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

 

Leave a Comment