ಮನೆಯಿಂದ ಬರುತ್ತಿದ್ದ ವಾಸನೆ ಸಹಿಸದೆ ಪೊಲೀಸರಿಗೆ ಕರೆ ಮಾಡಿದ ಸ್ಥಳೀಯರು! ಜಯನಗರ ಲಿಮಿಟ್ಸ್​ನ ಮನೆಯಲ್ಲಿತ್ತು ಅಜ್ಜಿ & ನಾಯಿಯ ಶವ

ಹಂಚಿಕೊಳ್ಳಿ
WhatsApp Facebook X Telegram
Elderly Woman and Pet Dog Found Dead in Decomposed State in Shivamogga

Elderly Woman /ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ರವೀಂದ್ರ ನಗರದ 1ನೇ ಅಡ್ಡರಸ್ತೆಯ ನಿವಾಸವೊಂದರಲ್ಲಿ ವಾಸವಿದ್ದ ವೃದ್ಧೆ ಹಾಗೂ ಅವರ ಸಾಕು ನಾಯಿಯ ಮೃತದೇಹ ಮನೆಯಲ್ಲಿಯೇ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದ್ದು, ಅದರ ವಾಸನೆ ಹರಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿಚಾರ ವರದಿಯಾಗಿದ್ದು, ಮೃತರನ್ನು 60 ವರ್ಷ ವಯಸ್ಸಿನ ಪ್ರಭಾವತಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಒಬ್ಬರೇ ವಾಸವಿದ್ದ ಪ್ರಭಾವತಿ ಸುಮಾರು 10 ದಿನಗಳ ಹಿಂದೆಯೇ ಸಾವನ್ನಪ್ಪಿರ ಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೆ ಮಾಲೀಕರಿಲ್ಲದೆ ನಾಯಿಯು ಅಲ್ಲಿಯೇ ಅಸುನೀಗಿದೆ ಎನ್ನಲಾಗುತ್ತಿದೆ. ಆದಾಗ್ಯು ಇದೊಂದು ಸಹಜ ಸಾವೇ ಅಥವಾ ಕ್ರೈಂ ಕೃತ್ಯವೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.

ಪ್ರಭಾವತಿ ಜನವಾರ್ತೆ ಪತ್ರಿಕೆಯ ಮಾಲೀಕರಾಗಿದ್ದ ದಿವಂಗತ ನಾಗರಾಜ ಅವರ ಪತ್ನಿ. ಇವರಿಗೆ ಇಬ್ಬರು ಪುತ್ರಿಯರಿದ್ದು, ಓರ್ವ ಪುತ್ರಿ ಶಿವಮೊಗ್ಗ ನಗರದಲ್ಲಿಯೇ ವಾಸವಿದ್ದರೆ, ಮತ್ತೊಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ..ಸ್ಥಳೀಯರು ಹೇಳುವ ಪ್ರಕಾರ, ವಾಸನೆಯಿಂದ ಸಂಶಯ ಮೂಡಿ ಪೊಲೀಸರಿಗೆ ಕರೆಮಾಡಲಾಗಿತ್ತು. ಪೊಲೀಸರು ಬಂದ ಮೇಲೆ ವಿಷಯ ಗೊತ್ತಾಗಿದೆ. ಇನ್ನೂ ಕೆಲದಿನಗಳ ಹಿಂದೆ ಕ್ಯಾಂಟೀನ್​ಗೆ ಬಂದು ತಿಂಡಿ ತೆಗೆದುಕೊಂಡು ಹೋಗಿದ್ದ ಪ್ರಭಾವತಿ ಮತ್ತೆ ಹೊರಗಡೆ ಕಾಣಿಸಿದ್ದು ನೆನೆಪಿಲ್ಲ ಎನ್ನುತ್ತಾರೆ ಸ್ಥಳೀಯರೊಬ್ಬರು. ಸದ್ಯ ಮಹಜರ್ ನಡೆಸಿರುವ ಪೊಲೀಸರು ಯುಡಿಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Whatsapp / https://chat.whatsapp.com/JrsZ8He4nN600n0r3tJItz

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor