ಡಿಕೆ ಶಿವಕುಮಾರ್ ಪಿಎ ಅಂತಾ ಹೇಳಿ 15 ಲಕ್ಷ ತಗೊಂಡ ಗಣೇಶ ಅರೆಸ್ಟ್! ಡಿಟೇಲ್ಸ್​ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram
dk shivamogga fake PA Arrested Tunganagar police
dk shivamogga fake PA Arrested Tunganagar police

Tunganagar police / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಡಿ.ಕೆ. ಶಿವಕುಮಾರ್ ಅವರ ಪಿ.ಎ.ಅಂತಾ ಸುಳ್ಳು ಹೇಳಿ ವಂಚಿಸಿದ್ದ ವ್ಯಕ್ತಿ ವಿರುದ್ಧ ಇಲ್ಲೆ ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ಎಫ್​ಐಆರ್ ಆಗಿತ್ತು. ಇದೀಗ ಆರೋಪಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ.

ಘಟನೆಯ ಹಿನ್ನೆಲೆಯನ್ನು ಹೇಳಬೇಕೆಂದರೆ, ರಿಕ್ರಿಯೇಷನ್ ಕ್ಲಬ್ ಲೈಸೆನ್ಸ್ ಕೊಡಿಸುವುದಾಗಿ ನಂಬಿಸಿ 15 ಲಕ್ಷ ರೂಪಾಯಿ ವಂಚನೆ ಎಸಗಿದ ಆರೋಪ ಈ ಪ್ರಕರಣದಲ್ಲಿದೆ. ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ಈ ಬಗ್ಗೆ ಶಿವಮೊಗ್ಗದ ಕೆಎಚ್‌ಬಿ ಕಾಲೋನಿಯ ನಿವಾಸಿ ದೂರು ಕೊಟ್ಟಿದ್ರು. ಅದರಂತೆ ಭಾರತೀಯ ನ್ಯಾಯ ಸಂಹಿತೆ ಕಲಂ 318(4) ಅಡಿಯಲ್ಲಿ ಕೇಸ್ ಆಗಿತ್ತು

ಇದೀಗ ಪೊಲೀಸರು ಆರೋಪಿ ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್ ಎಂಬಾತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈತ ಫೋನ್‌ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ಆನಂತರ ನಾಪತ್ತೆಯಾಗಿದ್ದ. ಇದೀಗ ಪೊಲೀಸರು ಸ್ಟೇಷನ್​ಗೆ ಕರೆದುಕೊಂಡು ಬಂದಿದ್ದಾರೆ. ಈತ ಕೇವಲ ಇದೊಂದೆ ಪ್ರಕರಣದಲ್ಲಿ ಆರೋಪಿಯೇ ಅಥವಾ ಮತ್ತೆಲ್ಲಾದ್ರೂ ಈತ ವಂಚನೆ ಎಸಗಿದ್ದಾನಾ ಅಂತಾ ಸದ್ಯ ಪೊಲೀಸರು ತಲಾಶ್ ಮಾಡುತ್ತಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor