ನಿಂತ ಜಾಗದಲ್ಲೆ , ಜಸ್ಟ್ ಫೋನ್ ಕಾಲ್​ನಲ್ಲಿ ಸಮಸ್ಯೆ ಕ್ಲಿಯರ್ ಮಾಡಿದ ಶಾರದಾ ಪೂರ್ಯಾನಾಯ್ಕ್!

ಹಂಚಿಕೊಳ್ಳಿ
WhatsApp Facebook X Telegram
MLA Sharada Puryanaik clear the problem in just one phone call
MLA Sharada Puryanaik clear the problem in just one phone call

MLA Sharada Puryanaik / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕ್ ಆಗಾಗ ತಮ್ಮದೆ ವಿಶಿಷ್ಟವಾದ ನಡೆಗಳಿಂದ ವಿಶೇಷ ಎಂದು ಎನಿಸಿಕೊಳ್ಳುತ್ತಾರೆ. ಪ್ರತಿನಿತ್ಯಾ ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿಕೊಡುವ ಅವರು, ಜನರ ಸಮಸ್ಯೆಗಳನ್ನು ನಿಂತ ಜಾಗದಲ್ಲಿಯೇ ಪರಿಹರಿಸುತ್ತಿರುತ್ತಾರೆ. ಈ ಬಗ್ಗೆ ಹಲವು ಉದಾಹರಣೆಗಳಿವೆ. ಇದಕ್ಕೆ ಪೂರಕವಾಗಿ ಇದೀಗ ಇನ್ನೊಂದು ಕೆಲಸದಲ್ಲಿ ಅವರು ಜಸ್ಟ್ ಫೋನ್​ ಕಾಲ್ ಮೂಲಕ , ಸ್ಥಳೀಯರು ಹೇಳಿದ ಸಮಸ್ಯೆಯನ್ನು ಬಗೆಹರಿಸಿದ್ದಾರೆ.

ಗ್ರಾಮಾಂತರ ವ್ಯಾಪ್ತಿಗೆ ಬರುವ ಮಲ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರನ್ನು ಹುದ್ದೆಯಿಂದ ಬಿಡುಗಡೆ ಮಾಡದೆ, ಅವರನ್ನೇ ಮುಂದುವರಿಸುವಲ್ಲಿ ಶಾಸಕರು ಕೆಲಸ ಮಾಡಿದ್ದಾರೆ. ಮಲ್ಲಾಪುರ ಗ್ರಾಮದ ಜನರು ಇದಕ್ಕೆ ಸಾಕ್ಷಿಯಾಗಿದ್ದು, ಶಾಸಕಿ ಶಾರದಾ ಪೂರ್ಯನಾಯ್ಕ್ ಅವರ ಸೋಶಿಯಲ್ ಮೀಡಿಯಾದಲ್ಲಿ ಈ ಸಂಬಂಧ ವಿಡಿಯೋವೊಂದು ಪೋಸ್ಟ್ ಮಾಡಲಾಗಿದೆ. ಅಷ್ಟೆಅಲ್ಲದೆ ಶಾಸಕಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಶಾಲೆಯ ಆವರಣದಲ್ಲಿ ಗ್ರಾಮಸ್ಥರು ಈ ಸಂಬಂಧ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಈ ವೇಳೆ ಅಲ್ಲಿಯೇ ಸಮಸ್ಯೆ ಬಗೆಹರಿಸುವದಾಗಿ ಹೇಳಿದ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು ಬಿಇಒಗೆ ಕರೆ ಮಾಡಿದ್ರು , ಮಲ್ಲಾಪುರ ಸರ್ಕಾರಿ ಶಾಲೆಯಲ್ಲಿ 50 ಮಕ್ಕಳಿಗೆ ಒಬ್ಬರೇ ಟೀಚರ್ ಇದ್ದಾರೆ. ಈಗ ಈ ಊರಿಗೆ ಒಬ್ಬರು ಗೆಸ್ಟ್ ಟೀಚರ್ ಬಂದಿದ್ದಾರೆ. ಇನ್ನೊಬ್ಬ ಟೀಚರ್​ನ್ನು ರಿಟೈರ್ಡ್ ಆದ ಮೇಲೆ ಜುಲೈನಲ್ಲಿ ಕೊಡ್ತೀವಿ ಅಂತ ಹೇಳ್ತಿದ್ದೀರಾ. ಹೀಗಾದ್ರೆ ಮಕ್ಕಳಿಗೆ ಪಾಠ ಮಾಡೋರು ಯಾರು? ಅಂತಾ ಪ್ರಶ್ನಿಸಿದ್ದಾರೆ. ಅಲ್ಲದೆ ಮಾತು ಮುಂದುವರಿಸಿ ಈಗಲೇ ಆ ಗೆಸ್ಟ್ ಟೀಚರ್ ಅನ್ನು ಕಂಟಿನ್ಯೂ ಮಾಡಬೇಕು. ಪರ್ಮನೆಂಟ್ ಶಿಕ್ಷಕರಿಲ್ಲದೆ ಮಕ್ಕಳಿಗೆ ತೊಂದರೆಯಾಗುತ್ತೆ. ಈ ಬಗ್ಗೆ ಮೀಟಿಂಗ್ ಕರೆದು ಎಲ್ಲರಿಗೂ ಕನ್ವಿನ್ಸ್ ಮಾಡಿ, ಈ ಗೆಸ್ಟ್ ಟೀಚರ್ ಅನ್ನು ಈಗಲೇ ಮುಂದುವರಿಸಲು ಆದೇಶ ನೀಡಿ ಎಂದು ಸೂಚನೆ ಕೊಟ್ಟಿದ್ದಾರೆ.

ಆನ್​ಸ್ಪಾಟ್​ ಕೈಕೊಂಡ ಕ್ರಮಕ್ಕೆ ಸ್ಥಳೀಯ ಗ್ರಾಮಸ್ಥರು ಶಾಸಕಿಗೆ ಧನ್ಯವಾದ ಹೇಳಿದ್ದಾರೆ. ಸದ್ಯ ಶಾರದಾ ಪೂರ್ಯಾನಾಯ್ಕ್​ರವರ ಅಣತಿಯಂತೆ ಅತಿಥಿ ಶಿಕ್ಷಕರನ್ನು ಮಲ್ಲಾಪುರ ಶಾಲೆಯಲ್ಲಿ ಮುಂದುವರಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor