ಬ್ಯಾಂಕ್​ನಲ್ಲಿ ಕಟ್ಟಾಯ್ತು 1.8 ಲಕ್ಷ ಹಣ : ಸ್ಪಂದಿಸದ ಬ್ಯಾಂಕ್​ಗೆ ಕೋರ್ಟ್​ ವಿಧಿಸಿದ ದಂಡವೆಷ್ಟು ಗೊತ್ತಾ.

prathapa thirthahalli
Prathapa thirthahalli - content producer

ಶಿವಮೊಗ್ಗ : ಅನಧಿಕೃತ ವ್ಯವಹಾರದಿಂದ ಗ್ರಾಹಕರ ಖಾತೆಯಿಂದ ಕಡಿತಗೊಂಡ ಹಣವನ್ನು ಮರುಪಾವತಿಸಲು ತಡ ಮಾಡಿ ಸರಿಯಾದ ಕ್ರಮ ಕೈಗೊಳ್ಳದ ಶಿವಮೊಗ್ಗದ ಬ್ಯಾಂಕ್ ಒಂದಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ, ಪರಿಹಾರ ನೀಡುವಂತೆ ಆದೇಶಿಸಿದೆ. 

Consumer Court fined a bank in Shivamogga
Consumer Court fined a bank in Shivamogga

ಶಿವಮೊಗ್ಗ : ಚಿತ್ರೀಕರಣದ ವೇಳೆ ಹೃದಯಾಘಾತದಿಂದ ನಿರ್ದೇಶಕ ಸಾವು

Consumer Court ಏನಿದು ಪ್ರಕರಣ

ಶಿವಮೊಗ್ಗದ ನಿವಾಸಿ ದೇವಾ ಪ್ರಸಾದ್ ಎಂಬುವವರು ಶಿವಮೊಗ್ಗದಲ್ಲಿರುವ ಬ್ಯಾಂಕ್‌ವೊಂದರಲ್ಲಿ ಬಹಳ ವರ್ಷಗಳಿಂದ ಖಾತೆ ಹೊಂದಿದ್ದರು. ಒಂದು ದಿನ ದೇವಾ ಪ್ರಸಾದ್ ಅವರ ಮೊಬೈಲ್‌ಗೆ ಬ್ಯಾಂಕ್‌ನಿಂದ ಒಟ್ಟು ₹1,85,500 ಹಣ ಅನಧಿಕೃತವಾಗಿ ಕಡಿತವಾಗಿರುವ ಬಗ್ಗೆ ಸಂದೇಶ ಬಂದಿದೆ. ಈ ವಿಷಯವನ್ನು ತಕ್ಷಣವೇ ಬ್ಯಾಂಕಿನ ಗಮನಕ್ಕೆ ತಂದ ದೂರುದಾರರು, ಇದು ಮೋಸದ ವ್ಯವಹಾರ ಎಂದು ವರದಿ ಮಾಡಿ, ಈ ಹಣ ಪಾವತಿಯನ್ನು ತಡೆ ಹಿಡಿಯುವಂತೆ ಮನವಿ ಮಾಡಿಕೊಂಡಿದ್ದರು.

Consumer Court ಆದರೆ, ಬ್ಯಾಂಕ್‌ನ ಅಧಿಕಾರಿಗಳು ಈ ಕುರಿತು ಯಾವುದೇ ಸೂಕ್ತ ಕ್ರಮವನ್ನು ಕೈಗೊಳ್ಳಲಿಲ್ಲ. ಇದರಿಂದ ಬೇಸರಗೊಂಡ ದೇವಾ ಪ್ರಸಾದ್ ಅವರು, ಮೊದಲು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ನಂತರವೂ ಬ್ಯಾಂಕ್ ಸೂಕ್ತ ಕ್ರಮ ಕೈಗೊಳ್ಳದಿದ್ದಾಗ, ನೋಟಿಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ/ಪ್ರತ್ಯುತ್ತರ ನೀಡದೇ, ಅನಧಿಕೃತವಾಗಿ ಕಡಿತಗೊಂಡ ಮೊತ್ತವನ್ನು ಖಾತೆಗೆ ಮರು ಜಮೆ ಮಾಡದೇ ಸೇವಾ ನ್ಯೂನತೆ ಎಸಗಿದೆ ಎಂದು ಆರೋಪಿಸಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠವು ದೂರುದಾರರು ಮತ್ತು ಎದುರುದಾರರು ಸಲ್ಲಿಸಿದ ಪ್ರಮಾಣಪತ್ರಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿ, ಉಭಯ ಪಕ್ಷಗಳ ವಾದ-ವಿವಾದಗಳನ್ನು ಆಲಿಸಿತು. ಆರ್‌ಬಿಐನ ಸುತ್ತೋಲೆ ದಿನಾಂಕ: 06/07/2017 ರಂತೆ, ಬ್ಯಾಂಕ್ ಮೋಸದಿಂದ ಕಟಾವಣೆಯಾದ ಮೊತ್ತದ ಕುರಿತು ಸರಿಯಾದ ಕ್ರಮವನ್ನು ಕೈಗೊಳ್ಳದಿರುವುದು ಹಾಗೂ ಮೊತ್ತವನ್ನು ಮರುಜಮೆ ಮಾಡದಿರುವುದು ಸ್ಪಷ್ಟವಾದ ಸೇವಾ ನ್ಯೂನತ’ ಎಂದು ಆಯೋಗವು ತೀರ್ಮಾನಿಸಿತು.

ದೂರನ್ನು ಪುರಸ್ಕರಿಸಿದ ಆಯೋಗವು, ಮೊದಲ ಮತ್ತು ಎರಡನೇ ಎದುರುದಾರ ಬ್ಯಾಂಕ್‌ಗಳು ದೂರುದಾರರಿಗೆ ಕಡಿತಗೊಂಡ ಸಂಪೂರ್ಣ ಮೊತ್ತ ₹1,85,500 ನ್ನು ಬಡ್ಡಿ ಸಹಿತವಾಗಿ ಪಾವತಿಸುವಂತೆ ಆದೇಶ ನೀಡಿದೆ. ಅದರಂತೆ, ಈ ಮೊತ್ತಕ್ಕೆ ದಿನಾಂಕ 24/05/2024 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ.9 ರ ಬಡ್ಡಿಯನ್ನು ಸೇರಿಸಿ 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ, ಪೂರ್ತಿ ಹಣ ಪಾವತಿಸುವವರೆಗೆ ವಾರ್ಷಿಕ ಶೇ.12 ರ ಬಡ್ಡಿಯನ್ನು ಸೇರಿಸಿ ನೀಡಬೇಕಾಗುತ್ತದೆ. ಇದರ ಜೊತೆಗೆ, ದೂರುದಾರರಿಗೆ ಆದ ಮಾನಸಿಕ ಹಿಂಸೆ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ 10,000 ಗಳನ್ನು ಸಹ 45 ದಿನಗಳ ಒಳಗೆ ಪಾವತಿಸಲು ಆಯೋಗವು ಆದೇಶಿಸಿದೆ.

Consumer Court fined a bank in Shivamogga

Consumer Court fined a bank in Shivamogga
Consumer Court fined a bank in Shivamogga
Share This Article