5 ಸಾವಿರ ಬಾಡಿಗೆ ಕೇಳಿ ಹಲ್ಲೆ ಮಾಡಿದ ಆಟೋ ಚಾಲಕ : ಬಾಡಿಗೆಗೆ ಕರೆದಿದ್ದೇ ತಪ್ಪಾಯ್ತಾ..?

ಹಂಚಿಕೊಳ್ಳಿ
WhatsApp Facebook X Telegram
Shivamogga Cricket Betting ಶಿRacket Busted in Shivamogga
Shivamogga Cricket Betting Shivamogga Gym Trainer Attacked Vinobanagar Police JNNCE Hostel Student Arrested i Construction House Robbery Missing Passenger Auto Case Filed After One Year Delay heft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga

ಶಿವಮೊಗ್ಗ: ಶಿವಮೊಗ್ಗದಲ್ಲಿ ಆಟೋ ಬಾಡಿಗೆಯ ವಿಚಾರವಾಗಿ ವಾಗ್ವಾದ ನಡೆದು, ನಂತರ ಆಟೋ ಚಾಲಕನೊಬ್ಬ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕ್​ನಲ್ಲಿ ಕಟ್ಟಾಯ್ತು 1.8 ಲಕ್ಷ ಹಣ : ಸ್ಪಂದಿಸದ ಬ್ಯಾಂಕ್​ಗೆ ಕೋರ್ಟ್​ ವಿಧಿಸಿದ ದಂಡವೆಷ್ಟು ಗೊತ್ತಾ.

Shivamogga auto Driver ಏನಿದು ಘಟನೆ?

ಶಿವಮೊಗ್ಗದ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ನಡೆದ ಸೀಮಂತ ಕಾರ್ಯಕ್ರಮಕ್ಕೆ ಬಂದಿದ್ದ ಸಂಬಂಧಿಕರನ್ನು ರೈಲ್ವೇ ನಿಲ್ದಾಣಕ್ಕೆ ಕರೆದುಕೊಂಡು ಹೋಗಲು ಆಟೋವನ್ನು ಕರೆದಿದ್ದರು. ಆಟೋ ಚಾಲಕ ಬಂದಾಗ, ದೂರುದಾರರು ರೈಲ್ವೇ ನಿಲ್ದಾಣಕ್ಕೆ ಬಾಡಿಗೆ ಎಷ್ಟು ಎಂದು ಕೇಳಿದ್ದಾರೆ. ಈ ವೇಳೆ ಆಟೋ ಚಾಲಕ  5,000 ಆಗುತ್ತದೆ, ನಿನಗೆ ಕೊಡಲು ಯೋಗ್ಯತೆ ಇದೆಯೇ ಎಂದು ಕೇಳಿ ಉದ್ಧಟತನದಿಂದ ಮಾತನಾಡಿದ್ದಾನೆ ಎನ್ನಲಾಗಿದೆ. ಇದರಿಂದ ಬೇಸರಗೊಂಡ ದೂರುದಾರರು, ಆ ಚಾಲಕನ ಆಟೋ ಬೇಡವೆಂದು ಹೇಳಿ, ತಮ್ಮ ಸಂಬಂಧಿಕರನ್ನು ಬೇರೆ ಆಟೋದಲ್ಲಿ ಕಳುಹಿಸಿಕೊಟ್ಟಿದ್ದಾರೆ. ಆದರೆ, ಸುಮ್ಮನಾಗದ ಮೊದಲ ಆಟೋ ಚಾಲಕನು ಸಂಬಂಧಿಕರು ಹೋಗುತ್ತಿದ್ದ ಆಟೋವನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಅಲ್ಲಿ ನಿಮ್ಮ ಹುಡುಗ ಎಲ್ಲಿ ಎಂದು ಕೇಳಿ, ಆತನನ್ನು ಸಾಯಿಸಿ ಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆಟೋ ಚಾಲಕ ಮಾರನೇ ದಿನ ದೂರುದಾರರ ಮನೆಗೆ ಬಂದಿದ್ದಾನೆ. ಅಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿನ್ನನ್ನು ಬಿಡುವುದಿಲ್ಲ ಎಂದು ಪುನಃ ಜೀವ ಬೆದರಿಕೆ ಹಾಕಿದ್ದಾನೆ. ಈ ಸಂದರ್ಭದಲ್ಲಿ ಆತ ಆಟೋದ ಕಿಕ್ಕರ್ ತೆಗೆದು ದೂರುದಾರರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

Shivamogga auto Driver Assaults Customer

Shivamogga auto Driver Shivamogga news Family Attacked After Birthday Celebration in apmc shivamogga
Shivamogga auto Driver Shivamogga news Family Attacked After Birthday Celebration in apmc shivamogga
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor