Car Accident ಶಿವಮೊಗ್ಗ: ಟಾಟಾ ಸಫಾರಿ ಕಾರಿಗೆ ಹ್ಯುಂಡೈ ಗ್ರಾಂಡ್ ಐ-10 ಕಾರು ಡಿಕ್ಕಿ ಹೊಡೆದ ಪರಿಣಾಮ, ಹ್ಯುಂಡೈ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಮಂಡಗದ್ದೆ ಪಕ್ಷಿಧಾಮದ ಬಳಿ ಸಂಭವಿಸಿದೆ. ಶಿವಮೊಗ್ಗ: ಸೈಬರ್ ವಂಚನೆಗೆ ಒಳಗಾಗಿದ್ದ ಶಿಕಾರಿಪುರದ ಯುವಕನಿಗೆ 5.23 ಲಕ್ಷ ವಾಪಸ್ ಕೊಡಿಸಿದ ಪೊಲೀಸರು ನಿನ್ನೆ ಸಂಜೆ 4:30 ರ ಸುಮಾರಿಗೆ ಟಾಟಾ ಸಫಾರಿ…
Car Accident ಶಿವಮೊಗ್ಗ: ಟಾಟಾ ಸಫಾರಿ ಕಾರಿಗೆ ಹ್ಯುಂಡೈ ಗ್ರಾಂಡ್ ಐ-10 ಕಾರು ಡಿಕ್ಕಿ ಹೊಡೆದ ಪರಿಣಾಮ, ಹ್ಯುಂಡೈ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಮಂಡಗದ್ದೆ ಪಕ್ಷಿಧಾಮದ ಬಳಿ ಸಂಭವಿಸಿದೆ.
ಶಿವಮೊಗ್ಗ: ಸೈಬರ್ ವಂಚನೆಗೆ ಒಳಗಾಗಿದ್ದ ಶಿಕಾರಿಪುರದ ಯುವಕನಿಗೆ 5.23 ಲಕ್ಷ ವಾಪಸ್ ಕೊಡಿಸಿದ ಪೊಲೀಸರು
ನಿನ್ನೆ ಸಂಜೆ 4:30 ರ ಸುಮಾರಿಗೆ ಟಾಟಾ ಸಫಾರಿ ಕಾರು ಕುಂದಾಪುರದಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಅದೇ ವೇಳೆಗೆ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಗ್ರಾಂಡ್ ಐ-10 ಕಾರು ಚಾಲಕನ ನಿಯಂತ್ರಣ ತಪ್ಪಿ ಟಾಟಾ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಹ್ಯುಂಡೈ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಮಾಳೂರು ಪೊಲೀಸರು ಆಗಮಿಸಿ ಮಹಜರು ನಡೆಸಿದ್ದಾರೆ.
