ಗುರುಪೂರ್ಣಿಮೆ ವಿಶೇಷ: ಶಿವಮೊಗ್ಗದ ದುರ್ಗಿಗುಡಿ ರಾಯರ ಮಠದಲ್ಲಿ ವಿಶೇಷ ಪೂಜೆ!

ಹಂಚಿಕೊಳ್ಳಿ
WhatsApp Facebook X Telegram
Rayara Aradhana Grand 355th Fest at Durgigudi Mutt
Rayara Aradhana Grand 355th Fest at Durgigudi Mutt

Guru Purnima ಶಿವಮೊಗ್ಗ : ರಾಜ್ಯಾದ್ಯಂತ ಇಂದು ಗುರುಪೂರ್ಣಿಮೆಯನ್ನು ಬಹಳ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ರಾಘವೇಂದ್ರ ಸ್ವಾಮಿಗಳ ಮಠಗಳಲ್ಲಿ ಇಂದು ಶ್ರೀಗಳಿಗೆ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ನಗರದ ದುರ್ಗಿಗುಡಿಯಲ್ಲಿರುವಂತಹ ರಾಘವೇಂದ್ರ ಸ್ವಾಮಿಯ ಮಠದಲ್ಲಿಯೂ ಸಹ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.

ಶಿವಮೊಗ್ಗ : ಖಾಸಗಿ ಹೋಟೆಲ್​ನಲ್ಲಿ ಉದ್ಯಮಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ?

ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬೆಳಿಗ್ಗೆಯಿಂದಲೇ ನಾನಾ ಕಡೆಗಳಿಂದ ಭಕ್ತರು ಆಗಮಿಸಿದ್ದರು. ಬೆಳಿಗ್ಗೆಯಿಂದಲೇ ಬಿಳಿ ಪರದೆ ಕಟ್ಟಿ ಸ್ವಾಮಿಗೆ ವಿವಿಧ ಹೂವು ಹಾಗೂ ತುಳಸಿ ಮಾಲೆಯಿಂದ ಅಲಂಕಾರ ಮಾಡಲಾಗಿತ್ತು. ನಂತರ ಪರದೆ ತೆಗೆದು ಸ್ವಾಮಿಗೆ ಮಂಗಳಾರತಿಯನ್ನು ಮಾಡಲಾಯಿತು. ಮಂಗಳಾರತಿ ವೇಳೆಯಲ್ಲಿ ಸ್ವಾಮಿಯ ದರ್ಶನವನ್ನು ಪಡೆಯಲು ಕೊಂಚ ನೂಕುನುಗ್ಗಲು ಉಂಟಾಯಿತು. ಹಾಗೆಯೇ ಮಂತ್ರಾಕ್ಷತೆಯನ್ನು ಪಡೆಯಲು ಬಹಳ ಉದ್ದದ ಸರತಿ ಸಾಲೇ ನಿಂತಿತ್ತು.

ಪೂಜೆಯ ನಂತರ ಆಗಮಿಸಿದ್ದ ಎಲ್ಲಾ ಭಕ್ತಾದಿಗಳಿಗೆ ಮಹಾಮಂಗಳಾರತಿ  ಹಾಗೂ ತೀರ್ಥಪ್ರಸಾದ  ವಿನಿಯೋಗ ಮಾಡಲಾಯಿತು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor