ಶಿವಮೊಗ್ಗ : ಬೆಕ್ಕಿನಕಲ್ಮಠಕ್ಕೆ ಬಿವೈವಿ ಭೇಟಿ, ಸ್ವಾಮೀಜಿ ಆಶೀರ್ವಚನ ಪಡೆದ ವಿಜಯೇಂದ್ರ! ಕಾರಣವೇನು?

ಹಂಚಿಕೊಳ್ಳಿ
WhatsApp Facebook X Telegram
B.Y. Vijayendra
B.Y. Vijayendra

B.Y. Vijayendra ಶಿವಮೊಗ್ಗ : ಇಂದು ರಾಜ್ಯಾದ್ಯಂತ ಗುರುಪೂರ್ಣಿಮೆಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದೆ. ಅದರಂತೆ, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಗುರುಪೂರ್ಣಿಮೆಯ ಹಿನ್ನೆಲೆಯಲ್ಲಿ ಶಿವಮೊಗ್ಗದ ಬೆಕ್ಕಿನಕಲ್ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಶಿವಮೊಗ್ಗ: ಯುವಕರ ಭವಿಷ್ಯದ ಜೊತೆ ಬಿಜೆಪಿ ಆಟವಾಡುತ್ತಿದೆ : ಮಧು ಬಂಗಾರಪ್ಪ ವಾಗ್ದಾಳಿ

ಈ ಸಂದರ್ಭದಲ್ಲಿ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ನಮಸ್ಕರಿಸಿ, ಗುರುಪೂರ್ಣಿಮೆಯ ವಿಶೇಷ ಆಶೀರ್ವಾದ ಪಡೆದುಕೊಂಡರು. ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬಿ.ವೈ. ವಿಜಯೇಂದ್ರ ಅವರೊಂದಿಗೆ ಉಪಸ್ಥಿತರಿದ್ದು ಶ್ರೀಗಳ ದರ್ಶನ ಪಡೆದರು. ಮಠಕ್ಕೆ ಭೇಟಿ ನೀಡಿದ ವೇಳೆ ಶ್ರೀಗಳು ಬಿ.ವೈ.ವಿ. ಅವರಿಗೆ ಆಶೀರ್ವಚನ ನೀಡಿ ಶುಭ ಹಾರೈಸಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor