SHIVAMOGGA AIRPORT ನಲ್ಲಿ ಲ್ಯಾಂಡ್ ಆಗಲಿದೆ ಇನ್ನೊಂದು ವಿಮಾನ! ಯಾವುದದು?

This Article Written by / Malenadu Today / ಸೆಪ್ಟೆಂಬರ್ 13, 2023

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS  

ಶಿವಮೊಗ್ಗ AIRPORT  ನಲ್ಲಿ ಈಗಾಗಲೆ ಇಂಡಿಗೋ ಸಂಸ್ಥೆಯ ಶಿವಮೊಗ್ಗ-ಬೆಂಗಳೂರು- ಬೆಂಗಳೂರು -ಶಿವಮೊಗ್ಗ ವಿಮಾನ ಹಾರಾಟ ನಡೆಸ್ತಿದೆ. ಇದರ ನಡುವೆ ಬೆಂಗಳೂರು-ವಿಜಯವಾಡ ವಿಮಾನ ಶಿವಮೊಗ್ಗದಲ್ಲಿ ಇಳಿದು ಪ್ರಯಾಣಿಕರನ್ನು ಕರೆದೊಯ್ಯಲಿದೆ ಎಂಬ ಸುದ್ದಿಯೊಂದು ಸಿಕ್ಕಿದೆ.

 

ಬೆಂಗಳೂರಿನಿಂದ ವಿಜಯವಾಡಕ್ಕೆ ಹೋಗುವ ವಿಮಾನವೂ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿದು ವಿಜಯವಾಡ ತೆರಳಲಿದೆಯಂತೆ. ಈ ಸಂಬಂಧ ಈಗಾಗಲೇ ಸಂಬಂಧ ಪಟ್ಟ ಸಂಸ್ಥೆಗಳ ಜೊತೆಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.  

ಈ ಹಿಂದೆಯೇ ಸಂಸದ ರಾಘವೇಂದ್ರ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿವಿಧ ರಾಜ್ಯಗಳ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಪ್ರಯತ್ನ ಆರಂಭಿಸಿದ್ದರು. ಅದರ ಮುಂದುವರಿದ ಭಾಗವಾಗಿ ಶಿವಮೊಗ್ಗಕ್ಕೆ ಸದ್ಯದಲ್ಲಿಯೇ ಮತ್ತೊಂದು ಪ್ಲೈಟ್ ಆಗಮಿಸುವ ಸಾಧ್ಯತೆ ಇದೆ,,  


ಇನ್ನಷ್ಟು ಸುದ್ದಿಗಳು 

 


 

ಮುಂದಿನ ಸುದ್ದಿ ಒದಿ

Leave a Comment