ಸಿ ಎಂ ಪದಕಕ್ಕೆ ಭಾಜನರಾದ ಇಬ್ಬರು ತೀರ್ಥಹಳ್ಳಿ ಪೊಲೀಸರು

ಹಂಚಿಕೊಳ್ಳಿ
WhatsApp Facebook X Telegram
ಸಿ ಎಂ ಪದಕಕ್ಕೆ ಭಾಜನರಾದ ಇಬ್ಬರು ತೀರ್ಥಹಳ್ಳಿ ಪೊಲೀಸರು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 31, 2025

ತೀರ್ಥಹಳ್ಳಿಯ ಇಬ್ಬರು ಪೊಲೀಸ್‌ ಅಧಿಕಾರಿಗಳಿಗೆ 2024 ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ. ತೀರ್ಥಹಳ್ಳಿಯ ಡಿ ವೈ ಎಸ್‌ ಪಿ  ಅರವಿಂದ್‌ ಎನ್‌ ಕಲಗಚ್ಚಿ ಹಾಗೂ ಮಾಳೂರು ಠಾಣೆಯ ಸಿಪಿಐ ಶ್ರೀಧರ್‌ ಪ್ರಶಸ್ತಿಗೆ ಭಾಜನರಾದ ಪೊಲೀಸರು.

ಕಳೆದ ಮೂರು ವರ್ಷಗಳಿಂದ ವಿವಿದೆಡೆ ಡಿ ವೈ ಎಸ್‌ ಪಿಯಾಗಿ ಕಾರ್ಯನಿರ್ವಹಿಸಿದ್ದ  ಅರವಿಂದ್‌ ಎನ್‌ ಕಲಗಚ್ಚಿ ಕಳೆದ ಫೆಬ್ರವರಿಯಂದು ತೀರ್ಥಹಳ್ಳಿಗೆ ವರ್ಗಾವಣೆ ಗೊಂಡಿದ್ದರು. ಸರಳ ವ್ಯಕ್ತಿತ್ವದ ಅಧಿಕಾರಿಯಾಗಿದ್ದರು.  ಹಾಗೆಯೇ ಮಾಳೂರು ವೃತ್ತ ನಿರೀಕ್ಷಕರಾಗಿರುವ ಶ್ರೀಧರ್ ರವರು ಬಂದೋಬಸ್ತ್ ಮುಂತಾದ ಕಠಿಣ ಸಂದರ್ಭದಲ್ಲಿಯೂ ಸಿಬ್ಬಂದಿಗಳ ಮಾನಸಿಕ ಸ್ಥೈ ರ್ಯವನ್ನು ಹೆಚ್ಚಿಸುವ ನಿಪುಣತೆಯನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ ಇವರ ಅವಧಿಯಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಆಗಿವೆ. ಹಾಗಾಗಿ ಇವರಿಬ್ಬರು ಕಾರ್ಯವೈಕರಿಯನ್ನು ಗುರುತಿಸಿ ಈ ಪದಕವನ್ನು ನೀಡಲಾಗಿದೆ.

SUMMARY | Two police officers from Thirthahalli have been awarded the Chief Minister’s Medal for the year 2024.

KEYWORDS | police officers, Chief Minister Medal, Thirthahalli,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor