ಮಳೆಗೆ ಗಾಳಿಗೆ ಧರೆಗುರುಳಿದ ಮರ! ಒಮಿನಿ ಜಖಂ!

Tree falls on omini in Sringeri

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Tree falls on omini in Sringeri

KARNATAKA NEWS/ ONLINE / Malenadu today/ May 23, 2023 SHIVAMOGGA NEWS

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಮಳೆ ಗಾಳಿಯ ಅಬ್ಬರದಲ್ಲಿ ಮರವೊಂದು ಒಮಿನಿ ವಾಹನದ ಮೇಲೆ ಬಿದ್ದಿದೆ. ಮನೆ ಮುಂದಿನ ಬೇಲಿಯ ಬಳಿಯಲ್ಲಿ  ನಿಲ್ಲಿಸಿದ್ದ ಕಾರಿನ ಮೇಲೆ ದೊಡ್ಡಮರವೊಂದು ಬಿದ್ದಿದೆ. ಕುಂಚೇಬೈಲ್​ ಗ್ರಾಮದಲ್ಲಿ ನಡೆದ ಘಟನೆ ಇದಾಗಿದ್ದು, ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ.  ಇಲ್ಲಿನ ನಿವಾಸಿ ಪ್ರದೀಪ್ ಎಂಬವರಿಗೆ ಸೇರಿದ ಕಾರು ಇದಾಗಿದ್ದು ಊಟಕ್ಕೆ ಮನೆಗೆ ಬಂದ ವೇಳೆ ಘಟನೆ ನಡೆದಿದೆ.  

ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಬಿ.ವೈ ವಿಜಯೇಂದ್ರ! ಬಿಎಸ್​​ವೈ ಫೋನ್ ಮಾಡಿದ್ರು ಎಂದ ಮುಖ್ಯಮಂತ್ರಿ!

ಬೆಂಗಳೂರು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರ ಪುತ್ರ ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ರವರು ಇವತ್ತು ಸಿಎಂ ಸಿದ್ದರಾಮಯ್ಯ ರವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 

ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಯಲ್ಲಿ ಸ್ಪರ್ಧಿಸಿ ಗೆದ್ದು ಶಾಸಕರಾಗಿರಿವ ವಿಜಯೇಂದ್ರ  ಇಂದು ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮೊದಲು ಶಕ್ತಿಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿದರು.  ಬಳಿಕ  ಹುಚ್ಚರಾಯ ಸ್ವಾಮಿ ದೇವರ ಹೆಸರಿನಲ್ಲಿ ಪ್ರಮಾ ಣ ವಚನ ಸ್ವೀಕರಿಸಿದ ಅವರು,  ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರನ್ನು ಭೇಟಿ ಮಾಡಿದರು. 

ಇದೇ ವೇಳೆ ಸಿದ್ದರಾಮಯ್ಯ ಸಹ ವಿಜಯೇಂದ್ರ ಅವರಿಗೆ ಶುಭಾಶಯ ಕೋರಿದರು.ಅಲ್ಲದೆ  ನಿಮ್ಮ ತಂದೆ (ಬಿಎಸ್ ಯಡಿಯೂರಪ್ಪ) ಫೋನ್ ಮಾಡಿದ್ದರು ಎಂದು ವಿಜಯೇಂದ್ರರಿಗೆ ತಿಳಿಸಿದ್ದಾರೆ. ಇಬ್ಬರು ಕೆಲ ಹೊತ್ತು ಮಾತುಕತೆ ನಡೆಸಿದರು. 

 

 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor