MALENADUTODAY.COM/ SHIVAMOGGA / KARNATAKA WEB NEWS
ಶಿವಮೊಗ್ಗದಲ್ಲಿ ರಾಜಕೀಯ ಬೆಳವಣಿಗೆಗಳ ನಡುವೆ ಲೋಕಾಯುಕ್ತ ಪೊಲೀಸರು ಲಂಚಪಡೆಯುತ್ತಿದ್ದಾಗಲೇ ಅಧಿಕಾರಿಯೊಬ್ಬರನ್ನು ಟ್ರ್ಯಾಪ್ ಮಾಡಿದ್ದಾರೆ.
ಯಾರು? ಏನು? ಎತ್ತ?
ವರ್ಷದ ಎರಡನೇ ಕೇಸ್ ಇದಾಗಿದ್ದು, ಈ ಸಂಬಂಧ ಲೋಕಾಯುಕ್ತ ಪೊಲೀಸರು u/s 7(a) PC ACT- 1988 ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ಯ ರೆವೆನ್ಯೂ ಇನ್ಸ್ಪೆಕ್ಟರ್ ಆರ್ ಮಂಜುನಾಥ್ ರನ್ನ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿದ್ದಾರೆ.
ಕಟ್ಟಡ ನಿರ್ಮಾಣಕ್ಕಾಗಿ ಲಂಚ
ಕಟ್ಟಡವೊಂದನ್ನ ಕಟ್ಟುವುದಕ್ಕಾಗಿ ಎನ್ಒಸಿ ನೀಡುವ ಸಂಬಂಧ ಆರ್ಐ ಮಂಜುನಾಥ್ ಲಂಚ ಕೇಳಿದ್ದರಂತೆ. ವಡ್ಡಿನಕೊಪ್ಪ ನಿವಾಸಿ ಹಾಲೇಶ್ ಕುಮಾರ್ ಎಂಬವರಿಂದ ಐದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಆರ್ ಐ ಮಂಜುನಾಥ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಕೈಃಗೆ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಇಲಾಖೆಯ ಪ್ರಕಟಣೆಯಲ್ಲಿ ಏನಿದೆ?
ಶ್ರೀ ಹಾಲೇಶ್ ಕುಮಾರ್ ಆರ್. ಬಿನ್ ರಂಗಸ್ವಾಮಿ ಆರ್, 47 ವರ್ಷ, ವ್ಯವಸಾಯ ವೃತ್ತಿ, ವಾಸ: |ನೇ ಕ್ರಾಸ್, ವಡ್ಡಿನಕೊಪ್ಪ, ಶಿವಮೊಗ್ಗ ಇವರು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ವಡ್ಡಿನಕೊಪ್ಪ ವಾರ್ಡ್ ನಂಬರ್ 14 ರಲ್ಲಿ ತನ್ನ ತಂದೆ ಶ್ರೀ ರಂಗಸ್ವಾಮಿ ಆರ್ ಬಿನ್ ರಂಗಪ್ಪ ರವರ ಹೆಸರಿನಲ್ಲಿ 39 106 ಒಟ್ಟು 4134 ಚದರ ಅಡಿ ವಿಸ್ತೀರ್ಣದ ಖಾಲಿ ನಿವೇಶನ ಇರುತ್ತದೆ. ಈ ನಿವೇಶನದಲ್ಲಿ ತಾನು ಹೊಸದಾಗಿ ಮನೆ ನಿರ್ಮಾಣ ಮಾಡುವ ಉದ್ದೇಶದಿಂದ ಶಿವಮೊಗ್ಗ ಮಹಾನಗರ ಪಾಲಿಕೆಗೆ ಕಟ್ಟಡ ಪರವಾನಿಗೆ ನೀಡಲು ದಿನಾಂಕ:22-02-2023 ರಂದು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ್ದು, ಪಿರಾದಿದಾರರು ತಮ್ಮ ವಾರ್ಡ್‌ನ ರಾಜಸ್ವ ನಿರೀಕ್ಷಕ ಮಂಜುನಾಥ್ ರವರನ್ನು ಭೇಟಿ ಮಾಡಿ ನಿವೇಶನಕ್ಕೆ ಸಂಬಂಧಿಸಿದ ವರದಿ ನೀಡಲು ಹಲವಾರು ಬಾರಿ ಕೇಳಿಕೊಂಡಿದ್ದು, ಅವರು ಕಳುಹಿಸುತ್ತೇನೆ ಹೋಗು ಎಂದು ನಿರ್ಲಕ್ಷ್ಯದಿಂದ ಹೇಳುತ್ತಿದ್ದರು. ಶ್ರೀ ಮಂಜುನಾಥ್ ಆರ್.ಐ ರವರು ವರದಿಯನ್ನು ನೀಡದೆ ಸತಾಯಿಸುತ್ತಿದ್ದರಿಂದ ಪಿರಾದಿದಾರರು ದಿನಾಂಕ:-06-04-2023 ರಂದು ಸಂಜೆ ಮಹಾನಗರ ಪಾಲಿಕೆ ಹೋಗಿ ಆರ್.ಐ ಮಂಜುನಾಥ್ ರವರನ್ನು ಭೇಟಿ ಮಾಡಿದ್ದು, ಆಗ ಆರ್ ಐರವರು ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಈ ಸಂಭಾಷಣೆಯನ್ನು ವಾಟ್ಸ್ ರೆಕಾರ್ಡ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿರುತ್ತಾರೆ. ಈ ದಿನ ದಿನಾಂಕ:11-04-2023 ರಂದು ಲೋಕಾಯುಕ್ತ ಕಛೇರಿ, ಶಿವಮೊಗ್ಗಕ್ಕೆ ವಾಯ್ಸ್ ರಕಾರ್ಡ್‌ನೊಂದಿಗೆ ಹಾಜರಾಗಿ ಶ್ರೀ ಮಂಜುನಾಥ್, ರಾಜಸ್ವ ನಿರೀಕ್ಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.
ಅದರಂತೆ ಅಪಾದಿತರಾದ ಶ್ರೀ ಮಂಜುನಾಥ ಆರ್. ಬಿನ್ ರಂಗಪ್ಪ, ರಾಜಸ್ವ ನಿರೀಕ್ಷಕರು, ಕಂದಾಯ ವಿಭಾಗ, ಮಹಾನಗರ ಪಾಲಿಕೆ ಕಛೇರಿ, ಶಿವಮೊಗ್ಗ ಕಛೇರಿ ಆವರಣದಲ್ಲಿರುವ ತಾತ್ಕಾಲಿಕವಾಗಿ ನಿರ್ಮಿಸಿರುವ ಎಸ್‌ಎಎಸ್ (ಆಸ್ತಿ ತೆರಿಗೆ ಪಾವತಿ ಸಂಬಂಧ ಚಲನ್ ನೀಡುವ ಕೌಂಟರ್) ಕೊಠಡಿಯಲ್ಲಿ ಪಿರಾದುದಾರರಿಂದ ಲಂಚದ ಹಣ ರೂ 5,000/- ಪಡೆದಿರುತ್ತಾರೆ. ಈ ಸಮಯದಲ್ಲಿ ಟ್ರ್ಯಾಪ್ ಮಾಡಲಾಗಿರುತ್ತದೆ.
ಆಪಾದಿತರನ್ನು ಬಂದಿಸಿ ಮುಂದಿನ ತನಿಖೆಯನ್ನು ಶ್ರೀ ಹೆಚ್. ಎಂ. ಜಗನ್ನಾಥ, ಪೊಲೀಸ್ ನಿರೀಕ್ಷಕರು, ಕ.ಲೋ, ಶಿವಮೊಗ್ಗ ಇವರು ಕೈಗೊಂಡಿದ್ದು ಇರುತ್ತದೆ. ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ಕಛೇರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್. ವಾಸುದೇವರಾಮ ಮತ್ತು ಶ್ರೀ ಉಮೇಶ ಈಶ್ವರ ನಾಯ್ಕ ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಇವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ದಾಖಲಿಸಿ ಅಪಾಧಿತನನ್ನು ಬಂಧಿಸಲಾಗಿರುತ್ತದೆ. ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ಸಿಬ್ಬಂದಿಗಳಾದ ಶ್ರೀ ಪ್ರಸನ್ನ ಸಿ.ಹೆಚ್.ಸಿ, ಶ್ರೀ ಬಿ. ಲೋಕೇಶಪ್ಪ ಸಿ.ಹೆಚ್.ಸಿ. ಶ್ರೀ ವಿ.ಎ ಮಹಂತೇಶ ಸಿ.ಹೆಚ್.ಸಿ. ಶ್ರೀ ಪ್ರಶಾಂತ್ ಕುಮಾರ್ ಸಿ.ಪಿ.ಸಿ. ಶ್ರೀ ರಘುನಾಯ್ಕ ಸಿ.ಪಿ.ಸಿ ಶ್ರೀ ಸುರೇಂದ್ರ ಸಿ.ಪಿ.ಸಿ, ಶ್ರೀ ಅರುಣ್ ಕುಮಾರ್ ಸಿ.ಪಿ.ಸಿ, ಶ್ರೀ ದೇವರಾಜ್, ಸಿ.ಪಿ.ಸಿ, ಶ್ರೀಮತಿ ಪುಟ್ಟಮ್ಮ ಮ.ಪಿ.ಸಿ, ಶ್ರೀಮತಿ ಸಾವಿತ್ರಮ್ಮ, ಮ.ಪಿ.ಸಿ, ಶ್ರೀ ಗಂಗಾಧರ ಎ.ಪಿ.ಸಿ, ಶ್ರೀ ಪ್ರದೀಪ್, ಎ.ಪಿ.ಸಿ ಶ್ರೀ ತರುಣ್ ಕುಮಾರ್ ಎ.ಪಿ.ಸಿ, ಶ್ರೀ ಜಯಂತ್ ಎ.ಪಿ.ಸಿ. ಇವರುಗಳು ಹಾಜರಿದ್ದರು.
Read /ಶಿವಮೊಗ್ಗ ಸಿಟಿಯಲ್ಲಿ Made in Bangalore ಗನ್ ತೋರಿಸ್ತಾ ಹಾರಾಡ್ತಿದ್ದವ ಈತನ ಕಥೆ ಏನಾಯ್ತು ಗೊತ್ತಾ?
Read /ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ ಟೀಂ/ ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?
Read / ಶಿವಮೊಗ್ಗದ ಚೆಕ್ಪೋಸ್ಟ್ಗಳಲ್ಲಿ ಕಾಂಚಾಣ ಸಂಚಾರ/ ಒಂದೇ ದಿನ ಪೊಲೀಸರಿಗೆ ಸಿಕ್ಕ ಕ್ಯಾಶ್ ಎಷ್ಟು ಗೊತ್ತಾ?
Read / ಆರ್ಎಂ ಮಂಜುನಾಥ್ ಗೌಡರ ‘ಕೈ’ ಕಿಮ್ಮನೆ ಗೆಲುವಿನ ಜವಾಬ್ದಾರಿ! ತೀರ್ಥಹಳ್ಳಿಯಲ್ಲಿ ಹೊಸ ಆಟ ಆರಂಭ/ ಏನಂದ್ರು ನಾಯಕರು?
Read / ದೇವರಿಗೆ ಹೂವು ಕೊಯ್ಯಲು ರಸ್ತೆ ದಾಟುತ್ತಿದ್ದಾಗ ನಡೀತು ದುರಂತ
Read / CASE OF HANDI ANNI / ಚೀಲೂರು ಡಬ್ಬಲ್ ಅಟ್ಯಾಕ್, ದಾವಣಗೆರೆ ಎಸ್ಪಿ ಹೇಳಿದರು ನಡೆದ ಸತ್ಯ ಘಟನೆ!
Read / Shivamogga airport ನಲ್ಲಿಯು ನೀತಿ ಸಂಹಿತೆ ಉಲ್ಲಂಘನೆ/ ಬಿಜೆಪಿ ಚಿಹ್ನೆ ಮುಚ್ಚಿ ಎಂದು ಚುನಾವಣಾ ಆಯೋಗಕ್ಕೆ ದೂರು
Read / ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬಿಡುಗಡೆಯಾದ ಹಣವೆಷ್ಟು? ಮೋದಿ ಕಾರ್ಯಕ್ರಮದಲ್ಲಿ ಜನರನ್ನ ಕರೆತರಲು ತಗುಲಿದ ವೆಚ್ಚವೆಷ್ಟು?
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt, firstnews kannada, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News
