MALENADUTODAY.COM | SHIVAMOGGA NEWS
ಶಿವಮೊಗ್ಗ: ಈ ಹಿಂದೆ ಸಂಚಾರಿ ನಿಯಮಗಳ ಉಲ್ಲ೦ಘಿಸಿ ದ೦ಡ ಕಟ್ಟಡ ಬಾಕಿ ಉಳಿಸಿಕೊ೦ಡಿರುವವರಿಗೆ ಅಂತಾನೇ ರಾಜ್ಯ ಸರ್ಕಾರ, ಟ್ರಾಫಿಕ್ ಫೈನ್ನಲ್ಲಿ 50 ಪರ್ಸೆಂಟ್ ರಿಯಾಯಿತಿ ನೀಡಿ ಅದಕ್ಕೆ ಕಾಲಮಿತಿ ಕೊಟ್ಟಿದೆ.
ಫೆಬ್ರವರಿ 11 ರೊಳಗೆ ದಂಡ ಪಾವತಿಸಿದರೆ ಶೇ. 50 ರಷ್ಟು ರಿಯಾಯ್ತಿ ಕಲ್ಪಿಸುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ಮನವಿ ಮೇರೆಗೆ, ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಅದರಂತೆ ಶಿವಮೊಗ್ಗಪೊಲೀಸ್ ಇಲಾಖೆ ಕೂಡ ಕ್ರಮಕೈಗೊಂ ಡಿದೆ. ಈ ಕುರಿತಂತೆ ನಿನ್ನೆ ಶುಕ್ರವಾರ ಪ್ರಕಟಣೆ ಹೊರಡಿಸಿದ್ದು, ದಂಡ ಪಾವತಿಸಲು ಇಚ್ಛಿಸುವವರು ಫೆಬ್ರವರಿ 11 ರೊಳಗೆ ಸಂಚಾರಿ ಪೊಲೀಸ್ ಠಾಣೆಗಳಿಗೆ ತೆರಳಿ ಅಥವಾ ಸಂಚಾರಿ ಠಾಣೆಗಳ ಕರ್ತವ್ಯನಿರತ ಸಿಪಿಐ, ಪಿಎಸ್‌ಐ, ಎಎಸ್‌ಐ ಗಳ ಬಳಿ ದಂಡ ಪಾವತಿಸಿ ಸ್ಥಳದಲ್ಲಿಯೇ ರಶೀದಿ ಪಡೆಯ ಬಹುದಾಗಿದೆ.
traffic fine ಬಾಕಿ ಕಟ್ಟಲು ಸರ್ಕಾರದಿಂದ 50 ಪರ್ಸೆಂಟ್ ಡಿಸ್ಕೌಂಟ್! ಯಾರಿಗೆ ಅವಕಾಶ!? ಎಲ್ಲಿವರೆಗೂ ಅವಕಾಶ
ಬಾಕಿ ಇರುವ ದಂಡ ವೀಕ್ಷಿಸುವ ಮತ್ತು ಪಾವತಿಸುವ ವಿಧಾನ
- ಕರ್ನಾಟಕ ಒನ್ ವೆಬ್‌ಸೈಟ್ ಗೆ ಭೇಟಿ ನೀಡಿ, ವಾಹನದ ನೊಂದಣಿ ಸಂಖ್ಯೆ | ನೋಟೀಸ್ ನಂಬರ್ ಅನ್ನು ನಮೂದಿಸಿ ವಿವರವನ್ನು ಪಡೆದು ಬಾಕಿ ಇರುವ ದಂಡವನ್ನು ಪಾವತಿಸಬಹುದಾಗಿದೆ.
- ಈ ಶಿವಮೊಗ್ಗ ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಬಾಕಿ ಇರುವ ದಂಡವನ್ನು ಪಾವತಿಸಬಹುದಾಗಿದೆ.
- ಶಿವಮೊಗ್ಗ ಪಶ್ಚಿಮ ಸಂಚಾರ ಠಾಣೆಯ ಮೊದಲನೆ ಮಹಡಿಯಲ್ಲಿನ ಟ್ರಾಫಿಕ್ ಆಟೋಮೇಷನ್ ಸೆಂಟರ್ ನಲ್ಲಿಯೂ ಸಹಾ ನಿಮ್ಮ ವಾಹನದ ನೊಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ದಂಡದ ಮೊತ್ತವನ್ನು ಪಾವತಿಸ ಬಹುದಾಗಿರುತ್ತದೆ.
- ಈ ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ನಿಮ್ಮ ವಾಹನದ ನೊಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ಬಾಕಿ ಇರುವ ದಂಡವನ್ನು ಮೊತ್ತವನ್ನು ಪಾವತಿಸ ಬಹುದಾಗಿರುತ್ತದೆ.
- ಸಂಚಾರ ಪೊಲೀಸ್ ಠಾಣೆಗಳ ಕರ್ತವ್ಯ ನಿರತ ಎಎಸ್‌ಐ/ ಪಿಎಸ್‌ಐ /ಸಿಪಿಐರವರ ಬಳಿ ಇರುವ ಟ್ರಾಫಿಕ್ ಸ್ಪಾಟ್ ಫೈನ್ ಡಿವೈಸ್ ಗಳಲ್ಲಿ ಬಾಕಿ ಇರುವ ದಂಡವನ್ನು ಪಾವತಿಸಲು ಅವಕಾಶವಿದ್ದು, ಅವರನ್ನು ಭೇಟಿ ಮಾಡಿ ವಾಹನದ ನೊಂದಣಿ ಸಂಖ್ಯೆಯನ್ನು ಒದಗಿಸಿ ಮಾಹಿತಿ ಪರಿಶೀಲಿಸಿ ಸ್ಥಳದಲ್ಲಿಯೇ ದಂಡದ ಮೊತ್ತವನ್ನು ಪಾವತಿಸಿ ರಶೀದಿಯನ್ನು ಪಡೆಯ ಬಹುದಾಗಿರುತ್ತದೆ.
ಯಾವುದಕ್ಕೆ ಎಷ್ಟು ದಂಡ ? ಎಷ್ಟು ಕಟ್ಟಬೇಕು ಎಂಬ ವಿವರ ಇಲ್ಲಿದೆ ಕ್ಲಿಕ್ ಮಾಡಿ
ದಂಡ ಎಷ್ಟು ಕಟ್ಟಬೇಕು ಎಂದು ಪರಿಶೀಲಿಸಲು ಹಾಗೂ ಆನ್ಲೈನ್ ಲ್ಲಿಯೇ ಹಣ ಕಟ್ಟಲು ಜಾಲತಾಣವಾದ karnatakaone ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೇ ಶಿವಮೊಗ್ಗದಲ್ಲಿ ವಿಧಿಸಲಾಗಿರುವ ದಂಡ ವಿವರ ಸಿಗುತ್ತದೆ. ವೆಹಿಕಲ್ನ ರಿಜಿಸ್ಟೇಷನ್ ನಂಬರ್ ಫಿಲ್ ಮಾಡಿ ಸರ್ಚ್ ಕೊಟ್ಟರೇ, ಮಾಹಿತಿ ಲಭ್ಯವಾಗುತ್ತಿದೆ. ಅದರ ನಂತರ ಅಲ್ಲಿಯೇ ಹಣಕಟ್ಟಬಹುದಾಗಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com