ಸುದ್ದಿಯ ಸ್ಥಳ: Sagara, Shivamogga, Karnataka
ಇವತ್ತು ಬೆಳಗ್ಗಿನ ತಾಳಗುಪ್ಪ ಟ್ರೈನ್ನಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿಗೆ ಆಮ್ ಆದ್ಮಿ ಪಕ್ಷದ ಮುಖಂಡ , ನಟ ಮುಖ್ಯಮಂತ್ರಿ ಚಂದ್ರುರವರು (#MukhyamantriChandruSpeaks) ಬಂದಿಳಿದಿದ್ದರು. ಶಿರಸಿಗೆ ಹೋಗುತ್ತಿದ್ದ ಅವರು, ಅಲ್ಲಿ ಸ್ಥಳೀಯವಾಗಿ ಮಾತನಾಡ್ತಾ, ಆಮ್ ಆದ್ಮಿ ಪಕ್ಷ ಗುಜರಾತ್ನಲ್ಲಿ ಮಾಡಿದ ಸಾಧನೆಯನ್ನು ವಿವರಿಸಿದರು.
ಇದನ್ನು ಸಹ ಓದಿ : ಸಾಗರ ಪೇಟೆ ಸ್ಟೇಷನ್ನಲ್ಲಿ ನಡೀತು ಈ ವಿಶೇಷ ಕಾರ್ಯಕ್ರಮ
ಆಮ್ ಆದ್ಮಿ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರ ತವರಿನಲ್ಲಿಯೇ ಜನರು ಅಷ್ಟೊಂದು ಪರ್ಸೆಂಟೇಜ್ ವೋಟ್ ಕೊಟ್ಟಿರುವುದು ನಿಜಕ್ಕೂ ಆಮ್ ಆದ್ಮಿ ಪಕ್ಷವನ್ನು ಜನರು ಪರ್ಯಾಯವಾಗಿ ಬೆಂಬಲಿಸುತ್ತಿದ್ದಾರೆ ಎಂದೇ ಅರ್ಥೈಸಬಹುದು. ಅಲ್ಲದೆ ಬಿಜೆಪಿ ವಿರುದ್ಧದ ಅಲೆಯು ಸೃಷ್ಟಿಯಾಗಿದೆ. ಜೀರೋ ಪರ್ಸೆಂಟ್ ಭ್ರಷ್ಟಾಚಾರದ ಮೂಲಕ, ಜನರಿಗೆ ಬೇಕಿರುವ ಮೂಲಸೌಕರ್ಯಗಳನ್ನು ಒದಗಿಸುವುದರ ಮೂಲಕ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿಯು ಉತ್ತಮ ಜನಬೆಂಬಲ ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲಿಯು ಪಕ್ಷವನ್ನು ಸಂಘಟಿಸುವ ಜವಾಬ್ದಾರಿಯನ್ನು ಹೊತ್ತಿದ್ದು, ಆ ದಿಕ್ಕಿನೆಡೆಗೆ ಪ್ರಯತ್ನಗಳು ಯಶಸ್ವಿಯಾಗಿ ಸಾಗತ್ತಿದೆ ಎಂದರು.
ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್ ಆರೋಪವೇನು
ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive
ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್ ಗ್ರೂಪ್ನ ಲಿಂಕ್ಗೆ ಕ್ಲಿಕ್ ಮಾಡಿ : Whatsapp link