ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು, ತಮ್ಮ ಮುಂದಿನ ಸಿನಿಮಾದ ಟೈಟಲ್ ಅನ್ನು ರಿವೀಲ್ ಮಾಡಿದ್ದಾರೆ. ಧ್ರುವ ಸರ್ಜಾ ವಸುಧೈವ ಕುಟುಂಬಕಂ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಕುರಿತಾಗಿ ಚಿತ್ರತಂಡ ಟೈಟಲ್ ಟೀಸರ್ ಒಂದನ್ನು ರಿಲೀಸ್ ಮಾಡಿದೆ.
ಹೌದು, ಇದೇ ವರ್ಷದಲ್ಲಿ ಧ್ರುವ ಸರ್ಜಾರ ಕೆಡಿ – ದಿ ಡೆವಿಲ್’ ಚಿತ್ರ ಬಿಡುಗಡೆಯಾಗಿ ಸುದ್ದಿ ಮಾಡಿತ್ತು. ಅದಾದ ನಂತರ ಧ್ರುವ ಸರ್ಜಾರ ಮುಂದಿನ ಸಿನಿಮಾ ಯಾವುದಿರಬಹುದೆಂದು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದರು. ಆ ಪ್ರಶ್ನೆಗಳಿಗೆ ಇದೀಗ ತೆರೆಬಿದ್ದಿದ್ದು, ವಸುಧೈವ ಕುಟುಂಬಕಂ ಸಿನಿಮಾದ ಟೈಟಲ್ ಹೊರಬಿದ್ದಿದೆ.
ಹೆಚ್ಚಾಗಿ ಹೊಡಿ-ಬಡಿ ಸಿನಿಮಾದಲ್ಲಿ ನಟಿಸುತ್ತಿದ್ದ ಧ್ರುವ ಸರ್ಜಾ, ಈ ಬಾರಿ ಫ್ಯಾಮಿಲಿ ಆಡಿಯನ್ಸ್ ತಲುಪಲು ಫ್ಯಾಮಿಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪೊಗರು ಸಿನಿಮಾ ಖ್ಯಾತಿಯ ನಂದ ಕಿಶೋರ್ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಅಚ್ಚರಿ ಎಂಬಂತೆ ನಂದ ಸುದೀರ್ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
ಇನ್ನು ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿರುವ ಟೀಸರ್ ವಿಚಾರಕ್ಕೆ ಬರೋದಾದ್ರೆ, 1 ನಿಮಿಷ 55 ಸೆಕೆಂಡ್ ಇರುವ ಟೀಸರ್ನಲ್ಲಿ ಹಳ್ಳಿ ಪ್ರದೇಶದಲ್ಲಿ ಸ್ಟೈಲಿಶ್ ಆಗಿ ಜಾಕೆಟ್ ಹಾಕೊಂಡು ಧ್ರುವ ಸರ್ಜಾ ಸೈಕಲ್ ಮೇಲೇರಿ ರಸ್ತೆಯಲ್ಲಿ ಹೋಗ್ತಾ ಇರ್ತಾರೆ. ಈ ಸಂದರ್ಭದಲ್ಲಿ ಕುಸ್ತಿ ಪ್ರಾಕ್ಟೀಸ್ ಮಾಡ್ತಿರೋ ಕುಸ್ತಿಪಟುಗಳು ಧ್ರುವ ಸರ್ಜಾರನ್ನು ನಿಲ್ಲಿಸಿ ಏ ಹೀರೋ ನೋಡೋಕೆ ಖಡಕ್ ಆಗಿದ್ದೀಯ, ಒಂದ್ ಕೈ ಮಿಲಾಯಿಸ್ತಿಯಾ? ಎಂದು ಕೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ನಟ, ಫ್ಯಾಮಿಲಿ ಆಡಿಯನ್ಸ್ನ ಗೆಲ್ಬೇಕು ಅಂತ ಬಂದಿದ್ದೀನಿ, ಗಲಾಟೆ ಎಲ್ಲಾ ಬ್ಯಾಡ ಬ್ರೋ ಎಂದು ಒಂದು ಮನೆಗೆ ತೆರಳುತ್ತಾರೆ. ಕೊನೆಗೆ ಚಿತ್ರದ ಟೈಟಲ್ ಅನ್ನು ರಿವೀಲ್ ಮಾಡಲಾಗುತ್ತದೆ.
ಇನ್ನು ಟೀಸರ್ ಕ್ವಾಲಿಟಿ ಉತ್ತಮವಾಗಿ ಮೂಡಿಬಂದಿದೆ. ನಟ ಫ್ಯಾಮಿಲಿ ಆಡಿಯನ್ಸ್ನ ಗೆಲ್ಬೇಕು ಅಂತ ಬಂದಿದ್ದೀನಿ, ಗಲಾಟೆ ಎಲ್ಲಾ ಬ್ಯಾಡ ಬ್ರೋ ಎಂದು ಹೇಳುವ ಡೈಲಾಗ್ ನೋಡ್ತಿದ್ದರೆ ಇದೊಂದು ಫ್ಯಾಮಿಲಿ ಓರಿಯಂಟೆಡ್ ಸಿನಿಮಾ ಎಂದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಈ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ನೀಡಿದ್ದು, ಮೈರಾ ಕ್ರಿಯೇಷನ್ಸ್ ಬಂಡವಾಳ ಹೂಡಿದೆ.
