ಶಿವಮೊಗ್ಗದ ಟಿಂಕರಿಂಗ್ ಗ್ಯಾರೇಜ್‌ನಲ್ಲಿ ಸಿಲಿಂಡರ್ ಸ್ಫೋಟ; ಬೆಂಕಿಗೆ ಆಹುತಿಯಾದ ವಸ್ತುಗಳು

ಹಂಚಿಕೊಳ್ಳಿ
WhatsApp Facebook X Telegram
Cylinder Explosion Triggers Fire at Shivamogga Lorry Garage
Cylinder Explosion Triggers Fire at Shivamogga Lorry Garage

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ವಾದಿ-ಎ-ಹುದಾದಲ್ಲಿ, ನಿನ್ನೆ ದಿನ ಅನಾಹುತವೊಂದು ಸಂಭವಿಸಿದೆ. ಇಲ್ಲಿರುವ ಗ್ಯಲಾಕ್ಸಿ ಹಾಲ್ ಎದುರಿನ ಲಾರಿ ಗ್ಯಾರೇಜ್‌ ಒಂದರಲ್ಲಿ ನಿನ್ನೆ ಭಾನುವಾರ ರಾತ್ರಿ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಸಂಭವಿಸಿದೆ ಬೆಂಕಿ ಅವಘಡದದಲ್ಲಿ ಸಾಕಷ್ಟು ಅನಾಹುತವಾಗಿದೆ.ಬೆಂಕಿಯಿಂದಾಗಿ ಗ್ಯಾರೇಜ್‌ನಲ್ಲಿದ್ದ ವಸ್ತುಗಳೆಲ್ಲಾ ಸುಟ್ಟುಹೋಗಿದೆ.

ಗ್ಯಾರೆಜ್​​ನಲ್ಲಿದ್ದ ಲಾರಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಆನಂತರ ಲಾರಿ ನಿಲ್ಲಿಸಿದ್ದ ಪಕ್ಕದಲ್ಲಿಯೇ ಇದ್ದ ಟಿಂಕರಿಂಗ್ ಗ್ಯಾರೇಜ್‌ನಲ್ಲಿದ್ದ ಸಿಲಿಂಡಿರ್​ ಸ್ಫೋಟಗೊಂಡಿದೆ ಎಂದು ಅಗ್ನಿಶಾಮಕ ದಳದ ಪ್ರಾಥಮಿಕ ಪರಿಶೀಲನೆಯಲ್ಲಿ ಗೊತ್ತಾಗಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಏನೂ ಸಹ ಆಗಿಲ್ಲ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಘಟನೆ ದಾಖಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor