Video Goes Viral / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಬಿಡದಿ ಟೌನ್ಶಿಪ್ ವಿರುದ್ಧ ಜೆಡಿಎಸ್ ಪಾದಯಾತ್ರೆ ನಡೆಸ್ತಿದ್ರೆ, ಬಿಜೆಪಿ ರಾಜ್ಯಾಧ್ಯಕ್ಷ ಪಾದಯಾತ್ರೆಯ ಹತ್ತಿರವೂ ಸುಳಿದಿಲ್ಲ. ವಿವಿಧ ಕಾರ್ಯಕ್ರಮಗಳ ಕಾರಣಕ್ಕಾಗಿ ಅವರು ಪಾದಯಾತ್ರೆಗೆ ಹೋಗಿಲ್ಲ ಎನ್ನಲಾಗುತ್ತಿದೆಯಾದರೂ ಸ್ಟೇಟ್ ಪೇಪರ್ಗಳು ಇದನ್ನ ಬೇರೆಯದ್ದೆ ಆಯಾಮದಲ್ಲಿ ನೋಡುತ್ತಿದೆ. ಇದರ ನಡುವೆ ಮಧು ಬಂಗಾರಪ್ಪ ಹಾಗೂ ವಿಜಯೇಂದ್ರ ನಡೆಸಿದ ಪಿಸುಮಾತಿನ ಸಮಾಲೋಚನೆಯ ವಿಡಿಯೋವೊಂದು ಹೊರಬಿದ್ದಿದ್ದು ವೈರಲ್ ಆಗುತ್ತಿದೆ. ಈ ವಿಡಿಯೋ ಶಿಕಾರಿಪುರದಲ್ಲಿ ನಡೆದ ಪ್ರಗತಿಪರಿಶೀಲನಾ ಸಭೆಯದ್ದಾಗಿದ್ದು, ಇದೀಗ ಚರ್ಚೆ ಹುಟ್ಟುಹಾಕಿದೆ.
ಶಿಕಾರಿಪುರದಲ್ಲಿ ತಾಲ್ಲೂಕು ಮಟ್ಟದ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪರಿಶೀಲನಾ ಸಭೆಗೆ ಮೊದಲು ಸಚಿವ ಮಧು ಬಂಗಾರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಸ್ಥಳೀಯ ಶಾಸಕ ಬಿ.ವೈ. ವಿಜಯೇಂದ್ರ ನಡುವೆ ಈ ಮಾತುಕತೆ ನಡೆದಿದೆ. ಸಭೆಗೆ ಬರುತ್ತಲೇ ಸಚಿವರು ವಿಜಯೇಂದ್ರರವರನ್ನ ಕುರಿತು ಇಂದು ನಿಮ್ಮದೇನೊ ಇರಬೇಕಲ್ಲ. ಪಾದಯಾತ್ರೆ ಏನೋ ಇಟ್ಟುಕೊಂಡಿದ್ದೀರಿ ಇಲ್ಲವಾ?’ ಎಂದು ಪ್ರಶ್ನಿಸಿದ್ರು. ಇದಕ್ಕೆ ಪ್ರತಿಕ್ರಿಯಿಸುವ ವಿಜಯೇಂದ್ರ, ಮಾಡುತ್ತಾ ಇದ್ದಾರೆ ಅದು ಸಿಂಬಾಲಿಕ್ ಮಾತ್ರ, ಅವರೆಲ್ಲ ಪರಿಹಾರ ಪಡೆಯುತ್ತಿದ್ದಾರೆ ಎನ್ನುತ್ತಾರೆ. ಎಷ್ಟು ಪರ್ಸೆಂಟ್ ತೆಗೆದುಕೊಂಡಿದ್ದಾರೆ ಎಂಬಮಧು ಬಂಗಾರಪ್ಪ ಪ್ರಶ್ನೆಗೆ, ‘ನಾನು ಅದನ್ನು ಫಾಲೊ ಮಾಡಿಲ್ಲ. ಆದರೆ, ಎಷ್ಟು ಪರ್ಸೆಂಟ್ ಗೊತ್ತಿಲ್ಲ. ಆದರೆ ಪರಿಹಾರ ಪಡೆಯುತ್ತಿದ್ದಾರೆ ಎಂದು ಹೇಳುತ್ತಾರೆ. ಹಾಗಿದ್ದರೆ ಅದು ವೀಕ್ ಆಗುತ್ತಿದೆಯೇ ಎಂಬ ಮಧು ಬಂಗಾರಪ್ಪ ಪ್ರಶ್ನೆಗೆ ನಿಮಗೆ ಗೊತ್ತಿದೆ. ರಿಯಲ್ ಎಸ್ಟೇಟ್‌ನವರ ವಿಚಾರ ಎನ್ನುತ್ತಾರೆ.
ಈ ಸಂಭಾಷಣೆಯ ವೇಳೆ ಮೈಕ್ ಆನ್ ಇದ್ದ ಕಾರಣ, ಇಬ್ಬರ ಮಾತುಕತೆ ವಿಡಿಯೋ ಆಡಿಯೋ ವೈರಲ್ ಆಗಿದೆ. ಅಲ್ಲದೆ ಕಾಂಗ್ರೆಸಿಗರು ಈ ವಿಡಿಯೋವನ್ನೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
