ಅಡಿಕೆ ಚೇಣಿದಾರರಿಗೆ ಆರಗ ಜ್ಞಾನೇಂದ್ರ ಚಹಾಕೂಟ! ಚಾಯ್​ ಪೇ ಚರ್ಚೆಗೆ ಕಾರಣ ಇಲ್ಲಿದೆ

ತೀರ್ಥಹಳ್ಳಿ: ತಾಲೂಕಿನ ಪ್ರಮುಖ ಚೇಣಿದಾರರನ್ನು ಶುಕ್ರವಾರ ಅಂದರೆ ಜೂನ್ 26 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಚಹಾ ಕೂಟಕ್ಕೆ ಆಹ್ವಾನಿಸಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಅಧ್ಯಕ್ಷರಾದ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಎನ್​ಟಿ ರೋಡ್ ವಿಡಿಯೋ ಬೇಸ್​ ಮೇಲೆ ಶಿವಮೊಗ್ಗ ಟ್ರಾಫಿಕ್ ಪೊಲೀಸರ ಕೇಸ್!

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಅನೇಕ ವರ್ಷಗಳಿಂದ ಅಡಿಕೆಗೆ ಸಾಂಪ್ರದಾಯಿಕ ಬಣ್ಣ ಬಳಸದೆ ಕೆಮಿಕಲ್ ಯುಕ್ತ ಕೃತಕ ಬಣ್ಣಗಳನ್ನು ಬಳಸಲಾಗುತ್ತಿದೆ. ಇದನ್ನು ಪರೀಕ್ಷೆಗೆ ಒಳಪಡಿಸಿದಾಗ ಕ್ಯಾನ್ಸರ್ ರೋಗಕಾರಕ ಎಂಬ ಹಣೆಪಟ್ಟಿ ಅಡಿಕೆಗೆ ತಗುಲುತ್ತದೆ. ಇದರಿಂದಾಗಿ ನೈಜವಾಗಿ, ಸಾಂಪ್ರದಾಯಿಕವಾಗಿ ಬಣ್ಣ ಬಳಸುವವರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಲೆನಾಡಿನ ಅನೇಕರು ಅಡಿಕೆ ತೋಟ ಮಾಡುತ್ತಾರೆ ಆದರೆ ಅದನ್ನು ಚೇಣಿದಾರರಿಗೆ ನೀಡುತ್ತಾರೆ. ಅದರಲ್ಲಿ ಕೆಲವು ಚೇಣಿದಾರರು ಅಡಿಕೆಗೆ ಕೃತಕ ಬಣ್ಣವನ್ನು ಬೆರೆಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಈ ಮಹತ್ವದ ಸಭೆಯನ್ನು ಕರೆದಿದ್ದು, ಅಡಿಕೆಗೆ ಯಾವುದೇ ಕಾರಣಕ್ಕೂ ಕೃತಕ ಬಣ್ಣ ಬಳಸಬೇಡಿ ಎಂಬ ಮಾಹಿತಿಯನ್ನು ಚೇಣಿದಾರರಿಗೆ ನೀಡಿ ಜಾಗೃತಿ ಮೂಡಿಸಲಾಗುವುದು ಎಂದರು.

Thirthahalli Meeting Called Over Artificial Color