Dangerous Triple Riding / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಾಡ್ಬಾರದು ಮಾಡಿದ್ರೆ, ಆಗಬಾರದು ಆಗುತ್ತೆ ಅಂತಾ ಗೊತ್ತಿರುತ್ತೆ. ಆದರೂ ಅದನ್ನೆ ಕೆಲವರು ಮಾಡುತ್ತಾರೆ. ಸಿಕ್ಕಿಬೀಳ್ತಾರೆ ಸದ್ಯ, ಎನ್.ಟಿ. ರಸ್ತೆಯಲ್ಲಿಯು ಇಂತದ್ದೆ ಕೆಲಸ ಮಾಡೋಕೆ ಹೋಗಿ, ಮೂವರು ಯುವಕರು ಕೇಸ್ ಹಾಕಿಸಿಕೊಂಡಿದ್ದಾರೆ. ಡ್ಯಾಶ್ ಕ್ಯಾಮ್ವೊಂದರ ವಿಡಿಯೋದಿಂದಾಗಿ ಆರೋಪಿಗಳು ಸಿಕ್ಕಿಬಿದ್ದಿದ್ದು, ಪೊಲೀಸರು ಥೇಟ್ ಅವರ ಸ್ಟೈಲ್ನಲ್ಲಿಯೇ ರೀಲ್ಸ್ ಮಾಡಿ, ಎಫ್ಐಆರ್ ಹಾಕಿದ್ದಾರೆ.
ಎನ್ಟಿ ರೋಡಲ್ಲಿ ಕಳೆದ ಜೂನ್ 18 ನೇ ತಾರೀಖು, ವಾಹನಗಳು ಓಡಾಡುವ ಬ್ಯುಸಿ ಟೈಮಲ್ಲಿ ಯುವಕನೊಬ್ಬ ತನ್ನ ಜೊತೆಗೆ ಇನ್ನಿಬ್ಬರನ್ನ ಕೂರಿಸಿಕೊಂಡು ಹಾವು ಹರಿದಾಡಿದಂತೆ ಬೈಕ್ ಓಡಿಸಿದ್ದ. ತಲೆಗೆ ಹೆಲ್ಮೆಟ್ ಇಲ್ಲ, ತ್ರಿಬ್ಬಲ್ ರೈಡಿಂಗ್, (Dangerous Triple Riding) ರೂಲ್ಸ್ ಫಾಲೋಮಾಡಿಲ್ಲ, ಸ್ಪೀಡ್ ಲಿಮಿಟ್ನಲ್ಲಿಲ್ಲ, ಜೊತೆಗೆ ವೀಲ್ಹೀಂಗ್ ಮಾಡುತ್ತಾ, ಎದುರಿಗೆ ಮುಂದಕ್ಕೆ ಹೋಗುತ್ತಿದ್ದವರನ್ನ ಓವರ್ ಟೇಕ್ ಮಾಡಿಕೊಂಡು ಸಾಗಿದ್ದ. ಬೈಕ್ನಲ್ಲಿದ್ದ ಮೂವರಿಗೆ ಯಾವುದರ ನಿಗಾವೂ ಇರದಂತೆ ಕಂಡಿದ್ದ ಸನ್ನಿವೇಶವನ್ನ ಅಲ್ಲಿಯೇ ಬರುತ್ತಿದ್ದ ವಾಹನವೊಂದರ ಡ್ಯಾಶ್ ಕಾಮ್, ಕ್ಯಾಚ್ ಮಾಡಿತ್ತು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲು ಆರಂಭಿಸಿದ ಬೆನ್ನಲ್ಲೆ ಪಶ್ಚಿಮ ಸಂಚಾರಿ ಪೊಲೀಸರು, ಹೀರೋ ಯಾರು ಅಂತಾ ಹುಡುಕಾಟ ಆರಂಭಿಸಿದ್ದರು. ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಓಡಿಸಿದ್ದಷ್ಟೆ ಅಲ್ಲದೆ ವಾಹನ ಸವಾರರಿಗೆ ತೊಂದರೆ ಆಗುವಂತೆ ಚಾಲನೆ ಮಾಡಿದ್ದ ಆರೋಪದ ಪಟ್ಟಿಮಾಡಿಕೊಂಡ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂ 281 ರ ಅನ್ವಯ ಹಾಗೂ 1988 ರ ಭಾರತೀಯ ಮೋಟಾರು ವಾಹನ ಕಾಯ್ದೆಯ (ಐಎಂವಿ) ಕಲಂ 194 ಸಿ ಮತ್ತು 194 ಡಿ ಅಡಿಯಲ್ಲಿ ಕೇಸ್ ಮಾಡಿ ಎಫ್ಐಆರ್ ಬರೆದುಬಿಟ್ಟರು. ಬಳಿಕ ಬೈಕ್ನ್ನ ಹಾಗೂ ಅದನ್ನು ಓಡಿಸಿದವರನ್ನ ಹುಡುಕಿಕೊಂಡು ಸ್ಟೇಷನ್ಗೆ ಕರೆತಂದು ವಿಚಾರಿಸಿಕೊಂಡರು. ಸ್ಟೇಷನ್ ಮುಂದೆ ಫೋಟೋ ಸೇಷನ್ ಜೊತೆ ಮಹಜರ್ ನಡೆಸಿ, ಅದನ್ನ ಸೋಶಿಯಲ್ ಮೀಡಿಯಾದಲ್ಲಿಯು ಪೋಸ್ಟ್ ಮಾಡಿ, ಫೀವ್ ಮಿನಿಟ್ಸ್ ಲೇಟರ್ ಹೆಸರಿನ ರೀಲ್ಸ್ ಹರಿಬಿಟ್ಟಿದ್ದಾರೆ.
ಸದ್ಯ ಪೊಲೀಸರ ರೀಲ್ಸ್ ಬೈಕ್ ಓಡಿಸಿದವರಿಗಿಂತ ಸ್ಪೀಡಾಗಿ ವೈರಲ್ ಆಗುತ್ತಿದೆ. ಮೇಲಾಗಿ ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ತಂದೊಡ್ಡುವ ಇಂತಹ ಬೇಜವಾಬ್ದಾರಿ ಕೃತ್ಯಗಳ ವಿರುದ್ಧ ಮುಂದೆಯೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂಬ ಟ್ರಾಫಿಕ್ ಪೊಲೀಸರ ಜಾಗೃತಿಯ ಪ್ರಕಟಣೆಯು ವೀಲ್ಹೀಂಗ್ ಪೀಪಲ್ಸ್ಗೆ ವಾರ್ನಿಂಗ್ ಕೊಡುತ್ತಿದೆ.
ನಿಮ್ಮ ವಾಟ್ಸಾಪ್ಗೆ ಸುದ್ದಿ ಕಳುಹಿಸಲು ಕ್ಲಿಕ್ ಮಾಡಿ ಗ್ರೂಪ್ಗೆ ಜಾಯಿನ್ ಆಗಿ : Whatsapp / https://chat.whatsapp.com/JrsZ8He4nN600n0r3tJItz
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
