ದೊಡ್ಡಪೇಟೆಯಲ್ಲಿ ಒಂದೆ ಸಲಕ್ಕೆ 100 ಮೊಬೈಲ್​ ಹುಡುಕಿಕೊಟ್ಟ ಪೊಲೀಸರು!

ಹಂಚಿಕೊಳ್ಳಿ
WhatsApp Facebook X Telegram
Shivamogga Police Return 100 Lost Mobiles SP Nikhil B
Shivamogga Police Return 100 Lost Mobiles SP Nikhil B

Police Return 100 Lost Mobiles / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕಳೆದು ಹೋದ ಮೊಬೈಲ್​ ಸಿಗೋದಕ್ಕೂ ಒಂಥರ ಲಕ್ ಬೇಕು. ಅಂತಹ ಲಕ್​ ಇವತ್ತು 100 ಜನರಿಗೆ ಸಿಕ್ಕಿತ್ತು. ಅದು ಕೂಡ ಶಿವಮೊಗ್ಗ ದೊಡ್ಡಪೇಟೆ ಭಾಗದವರಿಗೆ ಈ ಲಕ್​ ಒಲಿದಿತ್ತು. ಕಳೆದುಕೊಂಡ ಮೊಬೈಲ್​ಗಳನ್ನ ಪೊಲೀಸರೇ ಹುಡುಕಿ, ವಾಪಸ್​ ಕೊಡಿಸಿದ್ರು. ಹೌದು,
ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲಿ ಕಳುವಾಗಿ 100 ಮೊಬೈಲ್​ಗಳನ್ನ ಸ್ವತಃ ಎಸ್​ಪಿ ನಿಖಿಲ್ ಬಿ, ಅದರ ಮಾಲೀಕರಿಗೆ ವಾಪಸ್ ಕೊಡಿಸಿದರು.

ದೊಡ್ಡಪೇಟೆಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸಂದರ್ಶಕರ ಕೊಠಡಿಯನ್ನು ಉದ್ಘಾಟಿಸಿದ ಎಸ್.ಪಿ. ನಿಖಿಲ್ ಬಿ. ಬಳಿಕ ಸಿಇಐಆರ್ ಪೋರ್ಟಲ್ ಬಳಸಿ ಪತ್ತೆಮಾಡಲಾದ 100 ಮೊಬೈಲ್ ಫೋನ್‍ಗಳನ್ನು ವಾರಸುದಾರರಿಗೆ ಹಿಂತಿರುಗಿಸಿದ್ರು.

ಆನಂತರ ಮಾತನಾಡಿದ ಎಸ್.ಪಿ. ಬಿ.ನಿಖಿಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕರ ಆದೇಶದಂತೆ ಸಂದರ್ಶಕರ ಕೊಠಡಿಯನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಇದರಿಂದ ದೂರುದಾರರಿಗೆ ಅನುಕೂಲವಾಗಲಿದೆ ಎಂದರು.

ಮಾತು ಮುಂದುವರಿಸಿ, ಜನವರಿ 2026ರಿಂದ ಇದೂವರೆಗೆ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಇದುವರೆಗೆ 1000ಕ್ಕೂ ಹೆಚ್ಚು ಮೊಬೈಲ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಾರಸುದಾರರಿಗೆ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದ್ರು. ಕೇವಲ ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಸುಮಾರು 100 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದು ಇಂದು ಕಳೆದುಕೊಂಡು ವಾರಸುದಾರರಿಗೆ ಮೊಬೈಲ್‍ಗಳನ್ನು ನೀಡಿದ್ದೇವೆ ಎಂದರು. ಮೊಬೈಲ್ ಕಳೆದುಕೊಂಡ ಸಾರ್ವಜನಿಕರು ಸಿಇಐಆರ್ ಪೋರ್ಟಲ್ ಮೂಲಕ ತಮ್ಮ ಮನೆಯಿಂದಲೇ ದೂರು ದಾಖಲಿಸಬಹುದು. ಅದು ಸಿಕ್ಕಿದಾಗ ಸಂಬಂಧಪಟ್ಟ ಠಾಣೆಯಿಂದಲೇ ಅವರಿಗೆ ಮೇಸೇಜ್ ಬರುತ್ತದೆ. ಇದೊಂದು ದೊಡ್ಡ ಸಾಧನೆಯಾಗಿದೆ. ಸಾವಿರಾರು ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗಿದೆ ಅಂತಾ ತಿಳಿಸಿದ್ರು.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor