SHIVAMOGGA CRIME NEWS TODAY

ಬೊಮ್ಮನಕಟ್ಟೆ ಕೇಸ್​ ಮೂರೇ ದಿನದಲ್ಲಿ ಹಿಡಿದು ಫೋಟೋಗೆ ಪೋಸ್​ ಕೊಟ್ಟ ವಿನೋಬನಗರ ಪೊಲೀಸ್!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Shivamogga Vinobanagara Police / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕಳೆದ ಎರಡು ಮೂರು ತಿಂಗಳಿನಲ್ಲಿ ನಡೆದ ಕಳ್ತನ ಪ್ರಕರಣಗಳು ಕ್ವಿಕ್ ಆಗಿ ಇತ್ಯರ್ಥ ಕಾಣುತ್ತಿದೆ. ಮಾಳೂರು ಮಹಿಷಿ ಮಠದಲ್ಲಿ ನಡೆದಿದ್ದ ಕಳ್ತನ ಕೇಸಲ್ಲಿ ಒಂದೇ ದಿನದಲ್ಲಿ ಆರೋಪಿಯನ್ನ ಹಿಡಿದು ಚಿನ್ನ ಜಪ್ತಿ ಮಾಡಿದ್ದರು ಮಾಳೂರು ಪೊಲೀಸರು! ಅದೇಥರ ಇದೀಗ ಶಿವಮೊಗ್ಗ ವಿನೋಬನಗರ ಪೊಲೀಸರು ಕೂಡ ಕಳ್ತನ ಪ್ರಕರಣವೊಂದನ್ನ ಜಸ್ಟ್​ ಮೂರು ದಿನದಲ್ಲಿ ಬರ್ಕಾಸ್ತ್​ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 6 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಿ ಪೊಲೀಸರೇ ಸ್ಟ್ರಾಂಗ್​ ಗುರು ಅಂತಾ ಮೆಸೇಜ್​ ರವಾನೆ ಮಾಡಿದ್ದಾರೆ.

ವಿನೋಬನಗರ ಪೊಲೀಸ್ ಸ್ಟೇಷನ್ ಕೇಸ್​

ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಗೆ (Shivamogga Vinobanagara Police) ಒಳಪಡುವ ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯ ಡಿ ಬ್ಲಾಕ್‌ನಲ್ಲಿರುವ ಮನೆಯೊಂದರಲ್ಲಿ ದಿನಾಂಕ 12/06/2026 ರಿಂದ 17/06/2026 ರ ನಡುವೆ ಕಳ್ತನ ನಡೆದಿತ್ತು. ಮನೆಯಲ್ಲಿದ್ದ 60.7 ಗ್ರಾಂ ತೂಕದ ಚಿನ್ನದ ಆಭರಣ, 60 ಗ್ರಾಂ ತೂಕದ ಬೆಳ್ಳಿಯ ವಸ್ತು ಹಾಗೂ 5000 ರೂಪಾಯಿ ನಗದು ಕಳುವಾಗಿತ್ತು. ಈ ಸಂಬಂಧ 17/06/2026 ರಂದು ಕೇಸ್ ದಾಖಲಿಸಿದ್ದ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023 ರ ಕಲಂ 331(3), 331(4) ಹಾಗೂ 305 ರ ಅಡಿಯಲ್ಲಿ ಎಫ್​ಐಆರ್ ಮಾಡಿ ತನಿಖೆ ಆರಂಭಿಸಿದ್ದರು.

ಈ ಮಧ್ಯೆ ವಿನೋಬನಗರ ಪೊಲೀಸ್ ಠಾಣೆಯ ನಿರೀಕ್ಷಕ ಸಂತೋಷಕುಮಾರ್ ಡಿ.ಕೆ. ಅವರ ಉಸ್ತುವಾರಿಯಲ್ಲಿ ಪಿಎಸ್‌ಐ ತಿರುಮಲೇಶ್ ಜಿ. ಮತ್ತು ಸಿಬ್ಬಂದಿ ಸಿಪಿಸಿ ರಾಜು ಕೆ.ಆರ್., ಸಿಪಿಸಿ ಮಲ್ಲಪ್ಪ ಎಸ್.ಜಿ., ಸಿಪಿಸಿ ಅರುಣಕುಮಾರ್ ಎನ್.ಕೆ. ಹಾಗೂ ಸಿಪಿಸಿ ಮನುಶಂಕರ ಅವರನ್ನು ಒಳಗೊಂಡ ಟೀಂ ಕೇಸ್ ಮೇಲೆಯೆ ವರ್ಕ್ ಮಾಡಲು ಆರಂಭಿಸಿತು. ಹೀಗೆ ತನಿಖೆ ಆರಂಭಿಸಿದ ಮೂರು ದಿನಗಳಲ್ಲೆ ಟೀಂ ಕಳನನ್ನು ಪತ್ತೆ ಮಾಡಿತ್ತು. ಶಿವಮೊಗ್ಗ ಟೌನ್ ಆಶ್ರಯ ಬಡಾವಣೆಯ ನಿವಾಸಿ 27 ವರ್ಷದ ರವಿ ಅಲಿಯಾಸ್ ಬೆಕ್ಕು, ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ನಿವಾಸಿ 26 ವರ್ಷದ ಗಣೇಶ್ ಅಲಿಯಾಸ್ ಗಣಿ ಎಂಬಿಬ್ಬರು ಆರೋಪಿಗಳನ್ನು ಬಂಧಿಸಿದೆ.

ಆರೋಪಿಗಳಿಂದ ಕಳವು ಮಾಡಲಾಗಿದ್ದ ಅಂದಾಜು 6,00,000 ರೂಪಾಯಿ ಬೆಲೆಬಾಳುವ 51 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ 4,000 ರೂಪಾಯಿ ಮೌಲ್ಯದ 27 ಗ್ರಾಂ ತೂಕದ ಬೆಳ್ಳಿಯ ಕಾಲುಬಳೆ ಸೇರಿದಂತೆ ಒಟ್ಟು 6,04,000 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ