ನಿಜವಾಗ್ತಿದೆ ಸಿನಿಮಾ ತಾಯಿಗೆ ಕಳಿಸಿದ್ರು ಮಗಳ ಆ ಫೋಟೋ!, ಹಾವು ಅಡ್ಡ ಬಂದು ತೋಟಕ್ಕೆ ನುಗ್ಗಿದ ಬಸ್​! ಇನ್ನಷ್ಟು ಸುದ್ದಿಗಳು

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

shivamogga chikkamagaluru news / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಡೆದ ವಿವಿಧ ಘಟನೆಗಳ ಸಂಕ್ಷಿಪ್ತ ವರದಿಯನ್ನು ನೀಡುವ ಇವತ್ತಿನ ಬೆಳಗಿನ ಸುದ್ದಿ ಯ ವಿವರಗಳು ಹೀಗಿದೆ.

ಅಶ್ಲೀಲ ಫೋಟೋ ಕಳಿಸಿ ಹಣಕ್ಕೆ ಬೇಡಿಕೆ-ದೂರು

ತಾಯಿಯೊಬ್ಬರಿಗೆ ಅವರ ಮಗಳ ಆಶ್ಲೀಲ ಪೋಟೋ ಕಳಿಸಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ತರೀಕೆರೆ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಗ್ರಾಮವೊಂದರಲ್ಲಿನ ನಿವಾಸಿಗೆ ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಆಕೆಯ ಮಗಳ ಅಶ್ಲೀಲ ಫೋಟೋ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣ ದಲ್ಲಿ ಫೋಟೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ರಾತ್ರಿ ವೇಳೆ ಮೊಬೈಲ್ ಕರೆ ಮಾಡಿ ಹಣ ನೀಡುವಂತೆ ಪೀಡಿಸುತ್ತಿದ್ದು, ಇದರಿಂದ ನೊಂದ ಮಹಿಳೆ ಚಿಕ್ಕಮಗಳೂರು ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದಾರೆ. ದೂರು ದಾಖಲಿಸಿ ಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬಸ್​ ನಿಲ್ದಾಣಕ್ಕೆ ಹೊರಟಿದ್ದ ವ್ಯಕ್ತಿ ಸಾವು

ಶಿವಮೊಗ್ಗ / ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಗ್ಗೆ ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಶಿವಮೊಗ್ಗ ತಾಲೂಕಿನ ಹಾಲಲಕ್ಕವಳ್ಳಿ ಗ್ರಾಮದ ನಿವಾಸಿ ಜಗದೀಶ್ (58) ಎಂದು ಗುರುತಿಸಲಾಗಿದೆ. ಹೈದರಾಬಾದ್ ನಗರದಿಂದ ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದಿದ್ದ ತಮ್ಮ ಸಂಬಂಧಿಕರನ್ನು ಮನೆಗೆ ಕರೆದುಕೊಂಡು ಹೋಗಲು ಜಗದೀಶ್ ಅವರು ಬುಧವಾರ ಮುಂಜಾನೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆಯಲ್ಲಿ ಹಾಲಲಕ್ಕವಳ್ಳಿ ಗ್ರಾಮದ ಸಮೀಪ ದುರ್ಘಟನೆ ಸಂಭವಿಸಿದೆ. ಅವರ ಬೈಕ್ ವಾಹನಕ್ಕೆ ಜಿಂಕೆ ಅಡ್ಡಬಂದಿದೆಯೋ ಅಥವಾ ಬೇರೆ ಯಾವುದಾದರೂ ವಾಹನ ಡಿಕ್ಕಿ ಹೊಡೆದಿದೆಯೋ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಅಪಘಾತದ ತೀವ್ರತೆಗೆ ಜಗದೀಶ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಗುರುವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವು ಅಡ್ಡ ಬಂದು ಅವಾಂತರ

ಚಿಕ್ಕಮಗಳೂರು/ ಹಾವೊಂದು ಅಡ್ಡಬಂದಿದ್ದರಿಂದ ಬಸ್​ವೊಂದು ತೋಟಕ್ಕೆ ನುಗ್ಗಿದ ಘಟನೆ ಇಲ್ಲಿ ವರದಿಯಾಗಿದೆ. ರಸ್ತೆ ದಾಟುತ್ತಿದ್ದ ನಾಗರ ಹಾವನ್ನು ಕಂಡು ಬೈಕ್ ಸವಾರ ಏಕಾಏಕಿ ವಾಹನ ನಿಲ್ಲಿಸಿದ ಪರಿಣಾಮ ಹಿಂದೆ ಬರುತ್ತಿದ್ದ ಬಸ್ ಬೈಕ್‌ಗೆ ಡಿಕ್ಕಿಯಾಗಿ ತೋಟಕ್ಕೆ ನುಗ್ಗಿದೆ. ಅಜ್ಜಂಪುರ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ನಾಗರಹಾವುವೊಂದು ರಸ್ತೆ ಮಧ್ಯೆ ಕಾಣಿಸಿಕೊಂಡಿದ್ದರಿಂದ ಬೈಕ್ ಸವಾರ ದಿಢೀರನೆ ಬ್ರೇಕ್ ಹಾಕಿದ್ದಾನೆ. ಅದೇ ವೇಳೆ ಹಿಂದೆಯೇ ಇದ್ದ ಸರ್ಕಾರಿ ಬಸ್​ ಬೈಕ್‌ಗೆ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟದೊಳಗೆ ನುಗ್ಗಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ.

Whatsapp / https://chat.whatsapp.com/JrsZ8He4nN600n0r3tJItz

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor