ಒಳ್ಳೆಯ ಕೆಲಸ ಮಾಡಿದ್ದೀರಾ! ಬನ್ನಿ! ಸಚಿವ ಭೈರತಿ ಸುರೇಶ್: ಶಾಸಕ ಚನ್ನಬಸಪ್ಪ ಜೊತೆಗಿನ ಮಾತುಕತೆಯ ವಿಡಿಯೋ ನೋಡಿ!

ಹಂಚಿಕೊಳ್ಳಿ
WhatsApp Facebook X Telegram
ಒಳ್ಳೆಯ ಕೆಲಸ ಮಾಡಿದ್ದೀರಾ! ಬನ್ನಿ! ಸಚಿವ ಭೈರತಿ ಸುರೇಶ್: ಶಾಸಕ ಚನ್ನಬಸಪ್ಪ ಜೊತೆಗಿನ ಮಾತುಕತೆಯ ವಿಡಿಯೋ ನೋಡಿ!

ಒಳ್ಳೆಯ ಕೆಲಸ ಮಾಡಿದ್ದೀರಾ! ಬನ್ನಿ! ಸಚಿವ ಭೈರತಿ ಸುರೇಶ್: ಶಾಸಕ ಚನ್ನಬಸಪ್ಪ ಜೊತೆಗಿನ ಮಾತುಕತೆಯ ವಿಡಿಯೋ ನೋಡಿ!

ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ (ಹಂತ-2) ಹಾಗೂ ಎನ್.ಜಿ.ಟಿ. ಅನುದಾನದಡಿ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲು ಇಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ.ಎಸ್. ಸುರೇಶ್ ಅವರು ಆಗಮಿಸಿದ್ದರು.. ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರನ್ನು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ಹೂಗುಚ್ಛ ನೀಡಿ, ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು.

ವಿಶೇಷವೆಂದರೆ, ಸಚಿವರನ್ನು ಸ್ವಾಗತಿಸುವ ಈ ಸಂದರ್ಭದಲ್ಲಿ ನಾಯಕರುಗಳ ನಡುವೆ ನಡೆದ ಆಸಕ್ತಿದಾಯಕ ರಾಜಕೀಯ ಮಾತುಕತೆ ಎಲ್ಲರ ಗಮನ ಸೆಳೆದಿದೆ. ಸಚಿವರನ್ನು ಸ್ವಾಗತಿಸಿದ ಶಾಸಕ ಚನ್ನಬಸಪ್ಪ ಅವರು, “ನೀವು ಒಳ್ಳೆ ಕೆಲಸ ಮಾಡಿದ್ದೀರಿ, ನಮಗೂ ಅದೇ ರೀತಿ ಒಳ್ಳೆ ಕೆಲಸ ನೀವು ಮಾಡಿಕೊಡಬೇಕು” ಎಂದು ನಗುತ್ತಲೇ ಕೇಳಿಕೊಂಡರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದಾಗ, ಶಾಸಕರು “ನೋ ಡಿಸ್ಕ್ರಿಮಿನೇಷನ್ ಸರ್ ” ಎಂದು ಮಾರ್ಮಿಕವಾಗಿ ನುಡಿದರು. ಈ ಮಾತಿಗೆ ಸಚಿವ ಸುರೇಶ್ ಅವರು ಕೂಡ ನಗುಮುಖದಿಂದಲೇ ಪ್ರತಿಕ್ರಿಯಿಸಿ, ಆತ್ಮೀಯತೆ ಮೆರೆದರು.

ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ನಡುವಿನ ಈ ಪ್ರಬುದ್ಧ ಹಾಗೂ ಸೌಹಾರ್ದಯುತ ಸಂಭಾಷಣೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

BS Suresh in Shivamogga, MLA SN Channabasappa, MLC DS Arun, Bommanakatte Development, Mahatma Gandhi Nagar Vikas Yojana, Karnataka Politics, Shivamogga News, Minister BS Suresh, Political Conversation, No Discrimination.#ShivamoggaPolitics #BSSuresh #SNChannabasappa #DSArun #KarnatakaPolitics #NoDiscrimination #DevelopmentPolitics #Bommanakatte #ShivamoggaUpdates #PoliticalCamaraderie #Trend #ViralPolitics

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor