ಭದ್ರಾವತಿ ಕೇಸ್​, ಮತ್ತೊಂದು ತೀರ್ಪು ಹೊರಬಿತ್ತು! ಇಬ್ಬರಿಗೆ 2 ವರ್ಷ ಜೈಲು

ಮಹಿಳೆಯ ಮನೆಗೆ ಅತಿಕ್ರಮ ಪ್ರವೇಶ ಮಾಡಿ, ಜಾತಿನಿಂದನೆಗೈದು ಹಲ್ಲೆ ನಡೆಸಿದ್ದ ಪ್ರಕರಣದ ಇಬ್ಬರು ಆರೋಪಿಗಳಿಗೆ ಭದ್ರಾವತಿಯ ನ್ಯಾಯಾಲಯವು 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 62000 ರೂಪಾಯಿಗಳ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಉಮೇಶ್ (49) ಹಾಗೂ ನಂದನ್ (22) ಶಿಕ್ಷೆಗೊಳಗಾದ ಅಪರಾಧಿಗಳಾಗಿದ್ದಾರೆ. ಈ ಇಬ್ಬರು ದಿನಾಂಕ 9/9/2022 ರಂದು ಭದ್ರಾವತಿ ವಾಸಿ ಮಹಿಳೆಯೊಬ್ಬರ ಮನೆಗೆ ತೆರಳಿ ಜಾತಿನಿಂದನೆ ಮಾಡಿದ್ದರು. ಅಲ್ಲದೆ ಜೀವ ಬೆದರಿಕೆ ಹಾಕಿದ್ದರು. ಈ ಕುರಿತು ಭದ್ರಾವತಿಯ ಹೊಸಮನೆ ಠಾಣೆಯ ಎಸ್‌ಸಿ-ಎಸ್‌ಟಿ ಪಿಎ ಕಾಯ್ದೆಯಡಿ ಕೇಸ್ ಆಗಿತ್ತು. ಆನಂತರ ಅಂದಿನ ಭದ್ರಾವತಿ ಎಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಕೇಸ್​ನ ತನಿಖೆ ನಡೆಸಿ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಕೋರ್ಟ್​ನಲ್ಲಿ ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ. ಅವರು ಮಹಿಳೆಯ ಪರವಾಗಿ ವಾದ ಮಾಡಿದ್ದರು, ಭದ್ರಾವತಿಯ ಮಾನ್ಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ವಿಚಾರಣೆಯನ್ನು ಮುಗಿಸಿ ಇಬ್ಬರೂ ಆರೋಪಿಗಳಿಗೆ ತಲಾ 2 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 62000 ರೂಪಾಯಿ ದಂಡ ವಿಧಿಸಿದ್ದಾರೆ. ಇದೇ ವೇಳೆ ದಂಡದ ಮೊತ್ತದಲ್ಲಿ ನೊಂದ ಮಹಿಳೆಯರಿಗೆ ತಲಾ 25000 ರೂಪಾಯಿಗಳನ್ನು ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ.

ಭದ್ರಾವತಿ ಕೇಸ್​, ಮತ್ತೊಂದು ತೀರ್ಪು ಹೊರಬಿತ್ತು!  ಇಬ್ಬರಿಗೆ 2 ವರ್ಷ ಜೈಲು  Two Convicted to 2 Years Rigorous Imprisonment in SC/ST Atrocity Case
ಭದ್ರಾವತಿ ಕೇಸ್​, ಮತ್ತೊಂದು ತೀರ್ಪು ಹೊರಬಿತ್ತು! ಇಬ್ಬರಿಗೆ 2 ವರ್ಷ ಜೈಲು Two Convicted to 2 Years Rigorous Imprisonment in SC/ST Atrocity Case

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw