ಶಿವಮೊಗ್ಗ: ತಾಳಗುಪ್ಪ ಹುಬ್ಬಳ್ಳಿ ರೈಲು ಮಾರ್ಗ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದೇನು

ಕೊನೆಯ ನವೀಕರಣ: 22 ಏಪ್ರಿಲ್ 2026, 6:50 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
Agumbe Tunnel MP Raghavendra Confirms
Agumbe Tunnel MP Raghavendra Confirms

ಶಿವಮೊಗ್ಗ : ತಾಳಗುಪ್ಪ-ಶಿರಸಿ-ಹುಬ್ಬಳ್ಳಿರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಸರ್ವೆಕಾರ್ಯ ನಡೆಯುತ್ತಿದ್ದು, ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಈ ಮಾರ್ಗ ಸೇವಾದೃಷ್ಟಿಯಿಂದ ಅಷ್ಟೊಂದು ಲಾಭದಾಯಕವಲ್ಲದಿದ್ದರೂ ಸರಕು ಸಾಗಾಣಿಕೆಗೆ ಅನುಕೂಲವಾಗುತ್ತದೆ. ಆರ್ಥಿಕವಾಗಿ ಕಾರ್ಯಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆಗೆ ಮನವರಿಕೆ ಮಾಡಿಕೊಟ್ಟು ರೈಲ್ವೆ ಮಾರ್ಗ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಬೀರೂರು-ಶಿವಮೊಗ್ಗ ನಡುವೆ ರೈಲ್ವೆ ದ್ವಿಪಥ ನಿರ್ಮಾಣಕ್ಕೆ ಇನ್ನು ಅನುಮತಿ ಸಿಕ್ಕಿಲ್ಲ ಎಂದರು

ಬೀರೂರಿನಿಂದ ತಾಳಗುಪ್ಪವರೆಗೆ ಉಪ ಮಾರ್ಗವಷ್ಟೇ ಇದೆ ಎಂದ ಅವರು, ದ್ವಿಪಥ ನಿರ್ಮಾಣಕ್ಕೆ ದ್ವಿಪಥ ನಿರ್ಮಾಣದ ಅನುಮತಿಗೆ ರೈಲ್ವೆ ಸಚಿವರ ಜೊತೆ ಚರ್ಚಿಸುವುದಾಗಿ ಹೇಳಿದರು.

ಮಾಚೇನಹಳ್ಳಿ ಹೆದ್ದಾರಿ ವಿಳಂಬಕ್ಕೆ ತಾಂತ್ರಿಕ ಕಾರಣ

ಶಿವಮೊಗ್ಗ-ಭದ್ರಾವತಿ ನಡುವಿನ ಮಾಚೇನಹಳ್ಳಿಯಲ್ಲಿ ಹೆದ್ದಾರಿ ಕಾಮಗಾರಿ ವಿಳಂಬವಾಗುವುದಕ್ಕೆ ಕೆಲವು ತಾಂತ್ರಿಕ ಕಾರಣಗಳಿವೆ. ಮಲವಗೊಪ್ಪ ಕೆಲವರು ಜನರು ಭೂಮಿಬಿಟ್ಟುಕೊಡಲು ನಿರಾಕರಿಸಿದ್ದು ಇದಕ್ಕೆ ಕಾರಣವಾಗುತ್ತಿದೆ. ಮೊದಲನೇ ಹಂತದ ಟೆಂಡರ್ ಕಾಮಗಾರಿ ಮುಗಿದಿದ್ದು ಎರಡನೇ ಹಂತದ ಕಾಮಗಾರಿಯನ್ನು ಇಷ್ಟರಲ್ಲೇ ಆರಂಭಿಸಲಾಗುತ್ತದೆ. ಮಳೆಗಾಲ ಆರಂಭವಾಗುವುದರೊಳಗಾಗಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಅವರು ವಿನಂತಿಸಿದರು.

ಶಿವಮೊಗ್ಗ: ತಾಳಗುಪ್ಪ ಹುಬ್ಬಳ್ಳಿ ರೈಲು ಮಾರ್ಗ, ಹೆದ್ದಾರಿ ಕಾಮಗಾರಿ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದೇನು?
ಶಿವಮೊಗ್ಗ: ತಾಳಗುಪ್ಪ ಹುಬ್ಬಳ್ಳಿ ರೈಲು ಮಾರ್ಗ, ಹೆದ್ದಾರಿ ಕಾಮಗಾರಿ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದೇನು?Shivamogga: MP B.Y. Raghavendra Gives Updates on Talaguppa-Hubballi Railway Line and Highway Projects

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor