ಹೊಸಪೇಟೆ–ಅರಸೀಕೆರೆ ನಡುವೆ ವಿಶೇಷ ಡೆಮು ರೈಲು ಸೇವೆ ಆರಂಭ!

ಹಂಚಿಕೊಳ್ಳಿ
WhatsApp Facebook X Telegram
ರೈಲು ಪ್ರಯಾಣಿಕರಿಗೆ ಅಗತ್ಯ ಮಾಹಿತಿ ನೀಡುವ ಸಂದರ್ಭದ ಸಾಂದರ್ಭಿಕ ಚಿತ್ರ!

ಮಲೆನಾಡು ಟುಡೆ ಸುದ್ದಿ / ಅಜ್ಜಂಪುರ / ಶಿವಮೊಗ್ಗದಿಂದ ಎರಡು ಹೊಸ ಎಕ್ಸ್ ಪ್ರೆಸ್​ ರೈಲುಗಳು ಸಂಚಾರ ಘೋಷಣೆ ಬೆನ್ನಲ್ಲೆ ಇನ್ನೊಂದು ಗುಡ್ ನ್ಯೂಸ್ ಸಿಕ್ಕಿದೆ (DEMU Train Begins) ಅಜ್ಜಂಪುರ, ಬೀರೂರು, ಕಡೂರು ಹಾಗೂ ದೇವನೂರು ಭಾಗದ ರೈಲು ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿರುವ ನೈಋತ್ಯ ರೈಲ್ವೆ, ಹೊಸಪೇಟೆ ಮತ್ತು ಅರಸೀಕೆರೆ ನಡುವೆ ಕಾಯ್ದಿರಿಸದ ವಿಶೇಷ ಡೆಮು ರೈಲು ಸೇವೆಯನ್ನು ಆರಂಭಿಸಿದೆ.

ನಿತ್ಯದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ವಿಶೇಷ ರೈಲು ಸೇವೆ ಆರಂಭಿಸಲಾಗಿದೆ ಎಂದು ಇಲಾಖೆ ಹೇಳಿಕೊಂಡಿದೆ. ಆ.28ರಿಂದ ಆರಂಭಗೊಂಡಿರುವ ಈ ರೈಲು ನ.27ರವರೆಗೆ ವಾರದಲ್ಲಿ ಐದು ದಿನ ಸಂಚರಿಸಲಿದೆ. ಶನಿವಾರ ಮತ್ತು ಭಾನುವಾರ ರೈಲು ಸಂಚಾರ ಇರುವುದಿಲ್ಲ ಎಂದು ತಿಳಿಸಿದದೆ.

  1. ಉಳಿದಂತೆ ಹೊಸಪೇಟೆಯಿಂದ ಅರಸೀಕೆರೆಗೆ ಸಂಚರಿಸುವ 07343 ಸಂಖ್ಯೆಯ ರೈಲು ಪ್ರತಿದಿನ ಬೆಳಗ್ಗೆ 6.30ಕ್ಕೆ ಹೊಸಪೇಟೆಯಿಂದ ಹೊರಡಲಿದೆ.
  2. ದಾವಣಗೆರೆ ಮತ್ತು ಚಿಕ್ಕಜಾಜೂರು ಮಾರ್ಗವಾಗಿ ಸಂಚರಿಸುವ ರೈಲು ಬೆಳಗ್ಗೆ 11.40ಕ್ಕೆ ಶಿವನಿ, 11.51ಕ್ಕೆ ಅಜ್ಜಂಪುರ, ಮಧ್ಯಾಹ್ನ 12.09ಕ್ಕೆ ಬೀರೂರು, 12.21ಕ್ಕೆ ಕಡೂರು ಹಾಗೂ 12.43ಕ್ಕೆ ದೇವನೂರು ತಲುಪಲಿದೆ. ಬಳಿಕ ಮಧ್ಯಾಹ್ನ 2.20ಕ್ಕೆ ಅರಸೀಕೆರೆ ತಲುಪಲಿದೆ.
  3. ಮರುಪ್ರಯಾಣದಲ್ಲಿ 07344 ಸಂಖ್ಯೆಯ ರೈಲು ಅರಸೀಕೆರೆಯಿಂದ ಮಧ್ಯಾಹ್ನ 2.30ಕ್ಕೆ ಹೊರಡಲಿದೆ. ಮಧ್ಯಾಹ್ನ 2.44ಕ್ಕೆ ದೇವನೂರು, 3ಕ್ಕೆ ಕಡೂರು, 3.10ಕ್ಕೆ ಬೀರೂರು, 3.28ಕ್ಕೆ ಅಜ್ಜಂಪುರ ಹಾಗೂ 3.38ಕ್ಕೆ ಶಿವನಿ ನಿಲ್ದಾಣದ ಮೂಲಕ ಸಂಚರಿಸಿ ರಾತ್ರಿ 9.30ಕ್ಕೆ ಹೊಸಪೇಟೆ ತಲುಪಲಿದೆ.
  4. ಹೊಸಪೇಟೆ–ಅರಸೀಕೆರೆ ನಡುವಿನ ಈ ವಿಶೇಷ ಡೆಮು ರೈಲು ಸೇವೆಯಿಂದ ಅಜ್ಜಂಪುರ, ಬೀರೂರು, ಕಡೂರು ಮತ್ತು ದೇವನೂರು ಭಾಗದ ನಿತ್ಯ ಪ್ರಯಾಣಿಕರಿಗೆ ರೈಲು ಸಂಪರ್ಕದ ಅನುಕೂಲ ದೊರೆಯಲಿದೆ.
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor