SHIMOGA NEWS LIVE

ಥೈಲ್ಯಾಂಡ್ ವರ್ಲ್ಡ್ ಮಾಸ್ಟರ್ಸ್ ಸ್ವಿಮ್ಮಿಂಗ್​ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಶಿವಮೊಗ್ಗದ ಪಶುವೈದ್ಯ! ಯಾರು ನೋಡಿ ವಿಶ್ ಮಾಡಿ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿಕಾರಿಪುರ: ಸಾಧನೆಗೆ ವಯಸ್ಸು ಅಡ್ಡಿಯಲ್ಲ, ಗೆಲುವಿಗೆ ಸೋಲು ಬಾದಿತವಲ್ಲ ಅಂತಾ ಹೇಳುತ್ತಿರುತ್ತಾರೆ. ನಮ್ಮ ಊರಿನ ಡಾಕ್ಟರ್​ ಒಬ್ಬರು ಅದನ್ನಮಾಡಿ ಸೈ ಎನಿಸಿದ್ದಾರೆ. ವಿಶೇಷ ಅಂದರೆ ಈ ಡಾಕ್ಟರು ಇಡೀ ಶಿವಮೊಗ್ಗ ಜಿಲ್ಲೆಗೆ ಪರಿಚಯಸ್ಥರು.

ಹೌದು ಪಶುವೈದ್ಯ ಡಾ.ರವಿ ಎಂ, ಥೈಲ್ಯಾಂಡ್‌ನ ಶ್ರೀರಾಚಾದಲ್ಲಿ ಏಪ್ರಿಲ್ 17 ರಿಂದ 19 ರವರೆಗೆ ನಡೆದ ವರ್ಲ್ಡ್ ಮಾಸ್ಟರ್ಸ್ ಸ್ವಿಮ್ಮಿಂಗ್​ ಚಿನ್ನದ ಪದಕ ಗೆದ್ದಿದ್ದಾರೆ.

ಥೈಲ್ಯಾಂಡ್ ವರ್ಲ್ಡ್ ಮಾಸ್ಟರ್ಸ್ ಸ್ವಿಮ್ಮಿಂಗ್​ ಸ್ಪರ್ಧೆ

ಪಶು ವೈದ್ಯ ರವಿ ಎಂ 50 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ , 50 ಮೀಟರ್ ಬಟರ್‌ಫ್ಲೈ ಸ್ಟ್ರೋಕ್‌ನಲ್ಲಿ 11 ಸ್ಪರ್ಧಿಗಳನ್ನು ಹಿಂದಿಕ್ಕಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, 100 ಮೀಟರ್ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ 13 ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ನೀಡಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.

ಮೂಕ ಪ್ರಾಣಿಗಳಿಗೆ ಪದಕ ಸಮರ್ಪಣೆ

ತಮ್ಮ ಈ ಯಶಸ್ಸಿನ ಕುರಿತು ಹರ್ಷ ವ್ಯಕ್ತಪಡಿಸಿರುವ ಡಾ ರವಿ, ನನ್ನ ಈ ಕನಸು ನನಸಾಗಿರುವುದು ಜೀವನದ ಹೆಮ್ಮೆಯ ಕ್ಷಣ. ನಾನು ಗೆದ್ದಿರುವ ಈ ಎರಡು ಪದಕಗಳನ್ನು ಮೂಕ ಪ್ರಾಣಿಗಳಿಗೆ ಹಾಗೂ ಅವುಗಳ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿರುವ ರಾಜ್ಯದ ಸಮಸ್ತ ಪಶುವೈದ್ಯ ಮಿತ್ರರಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ಅರ್ಪಿಸುತ್ತಿದ್ದೇನೆ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

ಗಣ್ಯರ ಸಹಕಾರಕ್ಕೆ ಕೃತಜ್ಞತೆ

ತಮ್ಮ ಸಾಧನೆಯ ಹಾದಿಯಲ್ಲಿ ಬೆನ್ನೆಲುಬಾಗಿ ನಿಂತ ಪತ್ನಿ ಲೀನಾ, ಪುತ್ರರಾದ ಸಮರ್ಥ ಮತ್ತು ಆರುಷ್ ಹಾಗೂ ಕುಟುಂಬಸ್ಥರನ್ನು ಸ್ಮರಿಸಿದ್ದಾರೆ. ವಿಶೇಷವಾಗಿ ಇಲಾಖೆಯ ಕಾರ್ಯದರ್ಶಿಗಳು, ಆಯುಕ್ತರಾದ ಶಿಲ್ಪಾ ನಾಗ್ (ಸರ್ಕಾರದ ಅನುಮತಿ ಪಡೆಯಲು ವಿಶೇಷ ಸಹಕಾರ ನೀಡಿದವರು), ನಿರ್ದೇಶಕರಾದ ಡಾ. ಶ್ರೀನಿವಾಸ್, ಶಿವಮೊಗ್ಗ ಉಪ ನಿರ್ದೇಶಕರಾದ ಡಾ. ಬಾಬುರತ್ನ, ಶಿಕಾರಿಪುರ ತಾಲ್ಲೂಕಿನ ಎಲ್ಲಾ ಪಶುವೈದ್ಯರು, ಸಿಬ್ಬಂದಿ ಹಾಗೂ ತರಬೇತುದಾರರಾದ ಸಂಗಮೇಶ್ ಪಾರಶೆಟ್ಟಿ ಮತ್ತು ರಮೇಶ್ ಪಾರಶೆಟ್ಟಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಥೈಲ್ಯಾಂಡ್ ವರ್ಲ್ಡ್ ಮಾಸ್ಟರ್ಸ್ ಸ್ವಿಮ್ಮಿಂಗ್​ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಶಿವಮೊಗ್ಗದ ಪಶುವೈದ್ಯ! ಯಾರು ನೋಡಿ Thailand World Masters Swimming Shikaripura Veterinarian Wins Gold and Silver Medals
ಥೈಲ್ಯಾಂಡ್ ವರ್ಲ್ಡ್ ಮಾಸ್ಟರ್ಸ್ ಸ್ವಿಮ್ಮಿಂಗ್​ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಶಿವಮೊಗ್ಗದ ಪಶುವೈದ್ಯ! ಯಾರು ನೋಡಿ Thailand World Masters Swimming Shikaripura Veterinarian Wins Gold and Silver Medals

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ