ಶಿವಮೊಗ್ಗ : ಸಿಎಂ ಸಿದ್ದಾರಮಯ್ಯ ಇಂದು 2026- 27 ನೇ ಸಾಲಿನ ತಮ್ಮ ದಾಖಲೆಯ 17 ನೇ ಬಜೆಟ್ನ್ನು ಮಂಡಿಸಿದರು. ಓಟ್ಟು ಬಜೆಟ್ ಮೊತ್ತ 4,48,004 ಕೋಟಿ ರೂಪಾಯಿಯಾಗಿದ್ದು, ಇದರಲ್ಲಿ ಶಿಕ್ಷಣ ಹಾಗೂ ಕೃಷಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ, ಇದರ ನಡುವೆ ಶಿವಮೊಗ್ಗ ಜಿಲ್ಲೆ ಈ ಬಾರಿ ಬಜೆಟ್‌ನಲ್ಲಿ ಏನು ಸಿಕ್ಕಿರಬಹುದು ಎಂಬ ಕುತೂಹಲ ಸಾಮಾನ್ಯವಾಗಿ ಜನರಿಗೆ ಇದ್ದೇ ಇರುತ್ತದೆ, ಅದರ ಸಂಪೂರ್ಣ ವಿಚಾರವನ್ನು ತಿಳಿದುಕೊಳ್ಳಲು ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.
ಶಿವಮೊಗ್ಗ ಬಸ್ಟ್ಯಾಂಡ್ನಲ್ಲಿ ಇದೇ ಮೊದಲು, LED ಪರದೆಯಲ್ಲಿ ಬಜೆಟ್ ನೇರ ಪ್ರಸಾರ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿಯವರ ಗೌರವಾರ್ಥವಾಗಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ನೂತನ ಅಧ್ಯಯನ ಪೀಠವನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ. ಅಲ್ಲದೆ, ಜಿಲ್ಲೆಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗಾಗಿ ಹೆಚ್ಚಿನ ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ.
ಜಿಲ್ಲೆಯ ವಾಯುಯಾನ ಕ್ಷೇತ್ರಕ್ಕೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಫೈಟ್ ಟ್ರೈನಿಂಗ್ ಕೇಂದ್ರದ ಸ್ಥಾಪನೆ ಮತ್ತು ಪಿಪಿಪಿ ಮಾದರಿಯಲ್ಲಿ ವಿಮಾನಗಳ ತಯಾರಿಕೆ ಅಥವಾ ಜೋಡಣಾ ಘಟಕವನ್ನು ಆರಂಭಿಸಲು ಬಜೆಟ್‌ನಲ್ಲಿ ಪ್ರಸ್ತಾವಿಸಲಾಗಿದೆ. ಭದ್ರಾವತಿಯ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಇಎಸ್ಐ ಆಸ್ಪತ್ರೆಯನ್ನು ಆಧುನಿಕ ಸೌಲಭ್ಯಗಳೊಂದಿಗೆ ಉನ್ನತೀಕರಿಸಲು ತೀರ್ಮಾನಿಸಲಾಗಿದ್ದು, ಇದರಿಂದ ಕಾರ್ಮಿಕ ವರ್ಗಕ್ಕೆ ಹೆಚ್ಚಿನ ವೈದ್ಯಕೀಯ ನೆರವು ಸಿಗಲಿದೆ.
ಮಲೆನಾಡು ಭಾಗದ ಗ್ರಾಮೀಣ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ಕಾಲುಸಂಕಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದ್ದು, ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ತಾಳಗುಪ್ಪ ಹೊಳೆಗೆ ಬ್ಯಾರೇಜ್ ಹಾಗೂ ಸೀಗೆಹಳ್ಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ.
Karnataka Budget Top Projects Funds for smg


