SHIVAMOGGA NEWS TODAY

ಶಿವಮೊಗ್ಗ ಬಸ್ಟ್ಯಾಂಡ್​​ನಲ್ಲಿ ಇದೇ ಮೊದಲು, LED ಪರದೆಯಲ್ಲಿ ಬಜೆಟ್ ನೇರ ಪ್ರಸಾರ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ: ಕರ್ನಾಟಕದ ಸಂಸದೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಜನಸಾಮಾನ್ಯರಿಗೆ ರಾಜ್ಯ ಬಜೆಟ್ ತಲುಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಮಂಡಿಸುತ್ತಿರುವ 2026-27ನೇ ಸಾಲಿನ ಆಯವ್ಯಯದ ಭಾಷಣವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ ಮಾಡುತ್ತಿದೆ. 

ಶಿವಮೊಗ್ಗ : ಹೋಳಿ ಹಬ್ಬ & ಶೆಡ್​ ಕೇಸ್! 10 ಮಂದಿ ಅರೆಸ್ಟ್!

ರಾಜ್ಯದ ಆಯ್ದ ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ಎಲ್‌ಇಡಿ ಮತ್ತು ಟಿವಿ ಪರದೆಗಳ ಮೂಲಕ ಈ ಪ್ರಸಾರ ವ್ಯವಸ್ಥೆ ಕಲ್ಪಿಸಲಾಗಿದ್ದು, ಶಿವಮೊಗ್ಗದ ಕೆಎಸ್ಆರ್‌ಟಿಸಿ (KSRTC) ಬಸ್ ನಿಲ್ದಾಣದಲ್ಲಿಯೂ ಇಂದು ಬಜೆಟ್ ನೇರ ಪ್ರಸಾರವನ್ನು ಪ್ರಸಾರ ಮಾಡಲಾಯ್ತು. ನಿಲ್ದಾಣದ ಒಳಭಾಗದಲ್ಲಿ ಜಾಹೀರಾತು ಪ್ರದರ್ಶಿಸುವ ಸುಮಾರು 6 ಬೃಹತ್ ಎಲ್‌ಇಡಿ ಪರದೆಗಳಲ್ಲಿ ಮುಖ್ಯಮಂತ್ರಿಗಳ ಭಾಷಣವನ್ನು  ಸುಮಾರು  11 ಗಂಟೆಯ ವೇಳೆಗ ಬಿತ್ತರಿಸಲಾಯಿತು. 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಬೆಂಗಳೂರಿನ ‘ವೃತ್ತಿ ಮೀಡಿಯಾ ಸಲ್ಯೂಷನ್ಸ್’ ಸಂಸ್ಥೆಯ ಸಹಯೋಗದೊಂದಿಗೆ ಈ ಬೃಹತ್ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ರಾಜ್ಯಾದ್ಯಂತ ಇರುವ ಒಟ್ಟು 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಮಾರ್ಚ್ 6 ರಂದು ಬೆಳಿಗ್ಗೆ 10.15 ರಿಂದಲೇ ಬಜೆಟ್ ಪ್ರಕ್ರಿಯೆಯ ನೇರ ದೃಶ್ಯಾವಳಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಯಿತು. 

ದೂರದ ಊರುಗಳಿಗೆ ಪ್ರಯಾಣ ಬೆಳೆಸುವ ಅವಸರದಲ್ಲಿದ್ದ ಪ್ರಯಾಣಿಕರು ಸಹ, ಕುತೂಹಲದಿಂದ ಕೆಲ ನಿಮಿಷಗಳ ಕಾಲ ನಿಂತು ರಾಜ್ಯದ ಆರ್ಥಿಕ ಭವಿಷ್ಯದ ಆಯವ್ಯಯವನ್ನು ವೀಕ್ಷಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಸಾಮಾನ್ಯ ಜನರಿಗೂ ಬಜೆಟ್‌ನ ಅಂಶಗಳು ಸುಲಭವಾಗಿ ತಲುಪಲಿ ಎಂಬ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

Karnataka Budget Live Streaming at Bus Stands

Karnataka Budget Live Streaming at Bus Stands
Karnataka Budget Live Streaming at Bus Stands

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.