ಕುರಿ ಶೆಡ್​ ನಿರ್ಮಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ. ಆರೋಪಿ ವಶಕ್ಕೆ

ಹಂಚಿಕೊಳ್ಳಿ
WhatsApp Facebook X Telegram
Soraba Police Arrest Fraudster Who Cheated Farmer
Soraba Police Arrest Fraudster Who Cheated Farmer

ಶಿವಮೊಗ್ಗ:  ಕುರಿ ಶೆಡ್ ನಿರ್ಮಿಸಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಸೊರಬ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. 

ಶಿವಮೊಗ್ಗ : ವರ್ಷದ ಬಹುದೊಡ್ಡ ಬೆಂಕಿ ಅವಘಡ,12 ಗಂಟೆಗಳ ಕಾರ್ಯಾಚರಣೆ ಹೇಗಿತ್ತು?

Soraba Police ಘಟನೆ ವಿವರ

ಸೊರಬ ತಾಲೂಕಿನ ಇಂಡಿಹಳ್ಳಿ ಗ್ರಾಮದ ಅಣ್ಣಪ್ಪ ಜೆ ಎಂಬುವವರಿಂದ ಕುರಿ ಶೆಡ್ ಕಟ್ಟಿಕೊಡುವ ಭರವಸೆ ನೀಡಿ 5,50,000 ರೂಪಾಯಿಗಳನ್ನು ಪಡೆದು ಮೋಸ ಮಾಡಲಾಗಿತ್ತು. ಈ ಸಂಬಂಧ ಮೇ 26, 2026 ರಂದು ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.ಪ್ರಕರಣದ ಬೆನ್ನತ್ತಿದ ಸೊರಬ ಪೊಲೀಸ್ ತಂಡವು ಹನಗವಾಡಿ ಗ್ರಾಮದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಿತು. ವಿಚಾರಣೆ ನಡೆಸಿದಾಗ ಆತ ಸಾಗರ ತಾಲೂಕಿನ ಕೊರ್ಲಿಕೊಪ್ಪ ಗ್ರಾಮದಚೌಡಪ್ಪ (38) ಎಂದು ತಿಳಿದುಬಂದಿದ್ದು, ಈತನನ್ನು ಬಂಧಿಸಿಲಾಗಿತ್ತು. 

ಬಂಧಿತನಿಂದ ಆರೋಪಿಯನ್ನುತನಿಖೆಗೆ ಒಳಪಡಿಸಿದ ಪೊಲೀಸರು, ಆತ ದೂರುದಾರರಿಗೆ ವಂಚಿಸಿದ್ದ 5,50,000 ರೂಪಾಯಿಗಳ ಪೈಕಿ ಬರೋಬ್ಬರಿ 5,20,000 ರೂಪಾಯಿ ನಗದನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ. ರೈತನಿಗೆ ವಂಚಿಸಿದ ಆರೋಪಿಯನ್ನು ಕೆಲವೇ ದಿನಗಳಲ್ಲಿ ಬಂಧಿಸಿ, ಹಣವನ್ನು ಜಪ್ತಿ ಮಾಡುವಲ್ಲಿ ಸೊರಬ ಪೊಲೀಸರು ಯಶಸ್ವಿಯಾಗಿದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor