ಶಿವಮೊಗ್ಗದಿಂದ ಮಚಲಿಪಟ್ಟಣಂ, ಗುಂತಕಲ್‌ಗೆ ವಿಶೇಷ ರೈಲು; ಆ.30ರಿಂದ ಸಂಚಾರ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಹಂಚಿಕೊಳ್ಳಿ
WhatsApp Facebook X Telegram
ರೈಲು ಪ್ರಯಾಣಿಕರಿಗೆ ಅಗತ್ಯ ಮಾಹಿತಿ ನೀಡುವ ಸಂದರ್ಭದ ಸಾಂದರ್ಭಿಕ ಚಿತ್ರ!

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರೈಲ್ವೆ ಇಲಾಖೆ ಶಿವಮೊಗ್ಗಕ್ಕೆ ಸಂಬಂಧಿಸಿದಂತೆ ಗುಡ್​ ನ್ಯೂಸ್​ ಒಂದನ್ನ ನೀಡಿದೆ. ದಕ್ಷಿಣ ಕರಾವಳಿ ರೈಲ್ವೆಯು ಮಚಲಿಪಟ್ಟಣಂ–ಶಿವಮೊಗ್ಗ ಟೌನ್–ಮಚಲಿಪಟ್ಟಣಂ ಹಾಗೂ ಶಿವಮೊಗ್ಗ ಟೌನ್–ಗುಂತಕಲ್–ಶಿವಮೊಗ್ಗ ಟೌನ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ನಡೆಸಲು ನಿರ್ಧರಿಸಿದೆ.

ಎರಡೂ ಮಾರ್ಗಗಳಲ್ಲಿ ತಲಾ ಒಂದು ಟ್ರಿಪ್ ವಿಶೇಷ ರೈಲು ಸಂಚರಿಸಲಿದ್ದು, ಶಿವಮೊಗ್ಗ, ಭದ್ರಾವತಿ ಸೇರಿದಂತೆ ಹಲವು ನಿಲ್ದಾಣಗಳ ಪ್ರಯಾಣಿಕರಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ.

ಈ ಸಂಬಂಧ ಮಲೆನಾಡು ಟುಡೆಗೆ ಲಭ್ಯವಾಗಿರವು ರೈಲ್ವೆ ಪ್ರಕಟಣೆಯ ಪ್ರಕಾರ, ಮಚಲಿಪಟ್ಟಣಂ–ಶಿವಮೊಗ್ಗ ಟೌನ್–ಮಚಲಿಪಟ್ಟಣಂ ನಡುವೆ ರೈಲು ಸಂಖ್ಯೆ 07217/07218 ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ.

  • ರೈಲು ಸಂಖ್ಯೆ 07217 ಮಚಲಿಪಟ್ಟಣಂ–ಶಿವಮೊಗ್ಗ ಟೌನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಆಗಸ್ಟ್ 30ರ ಭಾನುವಾರ ಮಧ್ಯಾಹ್ನ 3.55ಕ್ಕೆ ಮಚಲಿಪಟ್ಟಣಂನಿಂದ ಹೊರಡಲಿದೆ. ಮರುದಿನ ಆಗಸ್ಟ್ 31ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ಟೌನ್ ರೈಲು ನಿಲ್ದಾಣ ತಲುಪಲಿದೆ.
  • ಮರುಪ್ರಯಾಣದಲ್ಲಿ ರೈಲು ಸಂಖ್ಯೆ 07218 ಶಿವಮೊಗ್ಗ ಟೌನ್–ಮಚಲಿಪಟ್ಟಣಂ ವಿಶೇಷ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 2ರ ಬುಧವಾರ ಸಂಜೆ 5.40ಕ್ಕೆ ಶಿವಮೊಗ್ಗ ಟೌನ್‌ನಿಂದ ಹೊರಡಲಿದೆ. ಸೆಪ್ಟೆಂಬರ್ 3ರ ಗುರುವಾರ ಮಧ್ಯಾಹ್ನ 3.55ಕ್ಕೆ ಮಚಲಿಪಟ್ಟಣಂ ತಲುಪಲಿದೆ.

ಈ ವಿಶೇಷ ರೈಲು ಎರಡೂ ದಿಕ್ಕಿನಲ್ಲಿ ಗುಡಿವಾಡ ಜಂಕ್ಷನ್, ವಿಜಯವಾಡ ಜಂಕ್ಷನ್, ಕೃಷ್ಣ ಕೆನಾಲ್ ಜಂಕ್ಷನ್, ಗುಂಟೂರು ಜಂಕ್ಷನ್, ನರಸರಾವ್ ಪೇಟೆ, ಡೊಣಕೊಂಡ, ಮಾರ್ಕಾಪುರ ರೋಡ್, ಕಂಬಂ, ಗಿದ್ದಲೂರು, ನಂದ್ಯಾಲ ಜಂಕ್ಷನ್, ಬೇತಂಚೆರ್ಲ, ಡೋಣ ಜಂಕ್ಷನ್, ಗುತ್ತಿ ಜಂಕ್ಷನ್, ಅನಂತಪುರ, ಧರ್ಮವರಂ ಜಂಕ್ಷನ್, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಹಿಂದೂಪುರ, ಯಲಹಂಕ ಜಂಕ್ಷನ್, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು ಜಂಕ್ಷನ್, ತರೀಕೆರೆ ಹಾಗೂ ಭದ್ರಾವತಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

special trains / ಶಿವಮೊಗ್ಗ–ಗುಂತಕಲ್ ನಡುವೆ ಮತ್ತೊಂದು ವಿಶೇಷ ರೈಲು

ಇದರ ಜೊತೆಗೆ ಶಿವಮೊಗ್ಗ ಟೌನ್–ಗುಂತಕಲ್–ಶಿವಮೊಗ್ಗ ಟೌನ್ ನಡುವೆ ರೈಲು ಸಂಖ್ಯೆ 07219/07220 ವಿಶೇಷ ಎಕ್ಸ್‌ಪ್ರೆಸ್ ರೈಲು ಕೂಡ ತಲಾ ಒಂದು ಟ್ರಿಪ್ ಸಂಚರಿಸಲಿದೆ.

  • ರೈಲು ಸಂಖ್ಯೆ 07219 ಶಿವಮೊಗ್ಗ ಟೌನ್–ಗುಂತಕಲ್ ವಿಶೇಷ ಎಕ್ಸ್‌ಪ್ರೆಸ್ ರೈಲು ಆಗಸ್ಟ್ 31ರ ಸೋಮವಾರ ಸಂಜೆ 5.40ಕ್ಕೆ ಶಿವಮೊಗ್ಗ ಟೌನ್‌ನಿಂದ ಹೊರಡಲಿದೆ. ಸೆಪ್ಟೆಂಬರ್ 1ರ ಮಂಗಳವಾರ ಬೆಳಗ್ಗೆ 7 ಗಂಟೆಗೆ ಗುಂತಕಲ್ ತಲುಪಲಿದೆ.
  • ಮರುಪ್ರಯಾಣದಲ್ಲಿ ರೈಲು ಸಂಖ್ಯೆ 07220 ಗುಂತಕಲ್–ಶಿವಮೊಗ್ಗ ಟೌನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 2ರ ಬುಧವಾರ ಬೆಳಗಿನ ಜಾವ 1.45ಕ್ಕೆ ಗುಂತಕಲ್‌ನಿಂದ ಹೊರಡಲಿದೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ಟೌನ್ ತಲುಪಲಿದೆ.
  • ಈ ರೈಲು ಎರಡೂ ದಿಕ್ಕಿನಲ್ಲಿ ಭದ್ರಾವತಿ, ತರೀಕೆರೆ, ಬೀರೂರು ಜಂಕ್ಷನ್, ಅರಸೀಕೆರೆ ಜಂಕ್ಷನ್, ತಿಪಟೂರು, ತುಮಕೂರು, ಯಲಹಂಕ ಜಂಕ್ಷನ್, ಹಿಂದೂಪುರ, ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ, ಧರ್ಮವರಂ ಜಂಕ್ಷನ್, ಅನಂತಪುರ ಹಾಗೂ ಗುತ್ತಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

20 ಬೋಗಿಗಳೊಂದಿಗೆ ವಿಶೇಷ ರೈಲು ಸಂಚಾರ

ಮಚಲಿಪಟ್ಟಣಂ–ಶಿವಮೊಗ್ಗ ಹಾಗೂ ಶಿವಮೊಗ್ಗ–ಗುಂತಕಲ್ ವಿಶೇಷ ರೈಲುಗಳಲ್ಲಿ ವಿವಿಧ ದರ್ಜೆಯ ಒಟ್ಟು 20 ಐಸಿಎಫ್ ಬೋಗಿಗಳ ವ್ಯವಸ್ಥೆ ಇರಲಿದೆ. ಇವುಗಳಲ್ಲಿ 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 2 ಎಸಿ 3-ಟೈರ್, 9 ಸ್ಲೀಪರ್ ಕ್ಲಾಸ್, 5 ಜನರಲ್ ಸೆಕೆಂಡ್ ಕ್ಲಾಸ್ ಹಾಗೂ 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳು ಇರಲಿವೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor