ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದ ವಿದ್ಯುತ್ ವಿತರಣಾ ಕೇಂದ್ರ, ನಗರ ಉಪವಿಭಾಗ-1ರ ಘಟಕ-2 ವ್ಯಾಪ್ತಿ ಹಾಗೂ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎ.ಎಫ್-11 ಫೀಡರ್‌ನಲ್ಲಿ ದುರಸ್ತಿ ಮತ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 30ರ ಭಾನುವಾರ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Power Cut) ಉಂಟಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಕುರಿತಾಗಿ ವಾರ್ತಾಇಲಾಖೆ ಶಿವಮೊಗ್ಗ ಇವರ ಮೂಲಕ ನೀಡಿರುವ ಪ್ರಕಟಣೆಯಲ್ಲಿ ಆಗಸ್ಟ್ 30 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕೆಂಚಪ್ಪ ಲೇಔಟ್, ಸೂಡಾ ಕಾಂಪ್ಲೆಕ್ಸ್, ದಯಾನಂದ ಪ್ರಿಂಟರ್ಸ್ ಹತ್ತಿರ, ಪೊಲೀಸ್ ಚೌಕಿ, ಆರಾಧ್ಯ ಕಣ್ಣಿನ ಆಸ್ಪತ್ರೆ, ದಾವಣಗೆರೆ ಬೆಣ್ಣೆದೋಸೆ ಹೋಟೆಲ್ ಸುತ್ತಮುತ್ತಲಿನ ಪ್ರದೇಶ, ಸವಿ ಬೇಕರಿ ಎದುರಿನ 100 ಅಡಿ ರಸ್ತೆ, ಕರಿಯಣ್ಣ ಬಿಲ್ಡಿಂಗ್‌ನಿಂದ ಪೊಲೀಸ್ ಚೌಕಿವರೆಗೆ, ಹುಚ್ಚರಾಯ ಕಾಲೋನಿ ಹಾಗೂ ದೇವರಾಜ ಅರಸು ಬಡಾವಣೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದೆ.
ಇನ್ನೂ ಇದರ ಜೊತೆಗೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಾಲರಾಜು ಅರಸು ರಸ್ತೆ ವ್ಯಾಪ್ತಿಯ ಮಹಾವೀರ ಸರ್ಕಲ್‌ನಿಂದ ಗೋಪಿ ಸರ್ಕಲ್‌ವರೆಗೆ, ಪಾರ್ಕ್ ಬಡಾವಣೆ, ನೆಹರೂ ರಸ್ತೆ, ಜಯನಗರ ಪೊಲೀಸ್ ಸ್ಟೇಷನ್ ರಸ್ತೆ, ಡಿಸಿ ಆಫೀಸ್, ಎಂಜಿ ಪ್ಯಾಲೇಸ್, ಮಥುರಾ ಹೋಟೆಲ್ ರಸ್ತೆ ಹಾಗೂ ಬಿಎಸ್‌ಎನ್‌ಎಲ್ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಅಂತಾ ಪ್ರಕಟಿಸಿದೆ.
ದುರಸ್ತಿ ಮತ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತಿರುವುದರಿಂದ ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಮನವಿ ಮಾಡಿದೆ.
