ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ (in Shivamogga) 10 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿರುವ ವ್ಯಕ್ತಿಯೊಬ್ಬರು, ತನ್ನ ಪಕ್ಕದ ಮನೆಯ ಬೀಗ ಒಡೆದು ಅತಿಕ್ರಮವಾಗಿ ಪ್ರವೇಶಿಸಿದ್ದಷ್ಟೆ ಅಲ್ಲದೆ ತನ್ನ ಮನೆಯ ಬಾಡಿಗೆಯನ್ನು ನೀಡದೇ ಮನೆ ಮಾಲೀಕನನ್ನೆ ಕೊಲೆ ಮಾಡುವ ಬೆದರಿಕೆ ಹಾಕಿದ ಬಗ್ಗೆ ಕೇಸ್ ವೊಂದು ದಾಖಲಾಗಿದೆ.
ಇಲ್ಲಿನ ನಿವಾಸಿಯೊಬ್ಬರು ತಮ್ಮ ಜೋಡಿ ಮಂಗಳೂರು ಹೆಂಚಿನ ಮನೆಯನ್ನ ವ್ಯಕ್ತಿಯೊಬ್ಬರಿಗೆ ಬಾಡಿಗೆ ನೀಡಿದ್ದರು. 10 ವರ್ಷಗಳಿಂದ ಸರಿಯಾಗಿ ಬಾಡಿಗೆ ಕೊಡದ ಆಸಾಮಿ, ಕೇಳಿದರೇ ಬೆದರಿಕೆ ಹಾಕುತ್ತಿದ್ದರಂಥೆ. ಅಲ್ಲದೆ ಈ ನಡುವೆ ತನ್ನ ಪಕ್ಕದ ಮನೆಯನ್ನ ಸಹ ಅತಿಕ್ರಮ ಮಾಡಿಟ್ಟುಕೊಂಡು ಮನೆ ಮಾಲೀಕರನ್ನ ಹೆದರಿಸುತ್ತಿದ್ದಾರೆ ಎಂಬುದು ಆರೋಪ. ದೊಣ್ಣೆ ಹಿಡಿದುಕೊಂಡು ಹಲ್ಲೆಗೆ ಯತ್ನಿಸಿದ್ದಷ್ಟೆ ಅಲ್ಲದೆ ಏರಿಯಾದಲ್ಲಿ ಹುಷಾರ್ ಎಂದು ಕೊಲೆ ಬೆದರಿಕೆ ಹಾಕುತ್ತಿದ್ಧಾರೆ ಎಂದು ಸಂತ್ರಸ್ತರು ದೂರು ನೀಡಿದ್ದಾರೆ.
ಈ ಸಂಬಂಧ ತಮ್ಮ ಕುಟುಂಬಕ್ಕೂ ರಕ್ಷಣೆ ಕೋರಿದ್ದಾರೆ. ದೂರಿನ ಆಧಾರದಲ್ಲಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 329(4), 352 ಮತ್ತು 351(3) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಶುರುಮಾಡಿದ್ದಾರೆ.
