ಪತ್ನಿ ಕೆಲಸದವಳಲ್ಲ, ಸುಪ್ರೀಂ ಕೋರ್ಟ್​ ನಿಂದ ಮಹತ್ವದ ತೀರ್ಪು, ಏನಿದು ಸುದ್ದಿ 

ಹಂಚಿಕೊಳ್ಳಿ
WhatsApp Facebook X Telegram
SC Status Lost Supreme Court Verdict Wife is Not a Maid 
SC Status Lost Supreme Court Verdict Wife is Not a Maid 

ನವದೆಹಲಿ: ಪತ್ನಿ ಎಂದರೆ ಮನೆಯ ಕೆಲಸದಾಕೆಯಲ್ಲ, ಅವಳು ಜೀವನ ಸಂಗಾತಿ. ಅಡುಗೆ ಮಾಡುವುದು, ಮನೆ ಸ್ವಚ್ಛಗೊಳಿಸುವುದು ಮತ್ತು ಬಟ್ಟೆ ಒಗೆಯುವುದು ಸೇರಿದಂತೆ ಎಲ್ಲಾ ಮನೆಯ ಕೆಲಸದಲ್ಲಿಯೂ ಪತಿಯೂ ಸಮಾನವಾಗಿ ಭಾಗಿಯಾಗಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. 

ಶಿವಮೊಗ್ಗ: ಮನೆಗೆ ಕ್ಯೂರಿಂಗ್ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಗಾರೆ ಮೇಸ್ತ್ರಿ ಸಾವು

ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಈ ಮಾತುಗಳನ್ನು ಹೇಳಿದೆ. ಪತ್ನಿ ಅಡುಗೆ ಮಾಡುತ್ತಿಲ್ಲ ಎಂಬುದು ಕ್ರೌರ್ಯ ಅಥವಾ ಕಿರುಕುಳ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. 

ಘಟನೆಯ ಹಿನ್ನೆಲೆ

2017ರಲ್ಲಿ ವಿವಾಹವಾಗಿದ್ದ ಈ ದಂಪತಿಗಳು 2019ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪತ್ನಿ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಮತ್ತು ಅಡುಗೆ ಮಾಡುತ್ತಿಲ್ಲ ಎಂದು ಆರೋಪಿಸಿ ಪತಿಯು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿತ್ತಾದರೂ, ಹೈಕೋರ್ಟ್ ಅದನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಪತ್ನಿ ಅಡುಗೆ ಮಾಡುತ್ತಿಲ್ಲ ಎಂಬ ವಕೀಲರ ವಾದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಪೀಠವು, ಕಾಲ ಬದಲಾಗಿದೆ, ಮನೆಗೆಲಸ ಕೇವಲ ಹೆಂಡತಿಯ ಜವಾಬ್ದಾರಿಯಲ್ಲ ಎಂದು ಕಿವಿಮಾತು ಹೇಳಿದೆ. ಈ ದಂಪತಿಗಳಿಬ್ಬರೂ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದು, ಇಬ್ಬರನ್ನೂ ಏಪ್ರಿಲ್ 27ಕ್ಕೆ ಖುದ್ದಾಗಿ ಹಾಜರಾಗುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.

Supreme Court Verdict Wife is Not a Maid 

Supreme Court Verdict Wife is Not a Maid 
Supreme Court Verdict Wife is Not a Maid
 
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor