ಬೆಂಗಳೂರು /ಮಲೆನಾಡು ಟುಡೆ ಸುದ್ದಿ / ರಾಜ್ಯ ರಾಜಧಾನಿಯಿಂದ ಶಿವಮೊಗ್ಗದ ಒಂದು ಸುದ್ದಿ ಬಂದಿದೆ. ಶಿವಮೊಗ್ಗದ ಹೊಸಮನೆಯ ವ್ಯಕ್ತಿಯೊಬ್ಬನನ್ನು ಅಲ್ಲಿನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಕರಣ ತೀವ್ರ ಕುತೂಹಲದಲ್ಲಿದೆ. ವಿವರ ಹೀಗಿದೆ.

ಸೈಬರ್ ಬುಲ್ಲಿಯಿಂಗ್ ಬಗ್ಗೆ ಶಿವಮೊಗ್ಗ ಎಸ್ಪಿ ಪೋಸ್ಟ್! ಡಿಜಿಟಲ್ ಕಿರುಕುಳದ ಬಗ್ಗೆ ನಿಮಗೆ ಗೊತ್ತಾ!
ಬೆಂಗಳೂರು ಪೊಲೀಸರಿಂದ ಶಿವಮೊಗ್ಗದ ವ್ಯಕ್ತಿ ಅರೆಸ್ಟ್
ನೂತನ ಮಳಿಗೆಯೊಂದರ ಉದ್ಘಾಟನೆ ಇದೆ. ಅದಕ್ಕೆ ಮಹಿಳೆಯರ ಆತಿಥ್ಯದ ಅಗತ್ಯವಿದೆ ಎಂದು ನಂಬಿಸಿ ಮಹಿಳೆಯೊಬ್ಬರನ್ನು ನಂಬಿಸಿ ಅವರ ಬಳಿಯಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಬಂಧಿತ ಆರೋಪಿಯಿಂದ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನ , ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ..

ಬಂಧಿತ ಆರೋಪಿಯನ್ನು ಶಿವಮೊಗ್ಗದ ಹೊಸಮನೆ ಮೂಲದ ಪ್ರವೀಣ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 318(4) ವಂಚನೆ ಹಾಗೂ ಸೆಕ್ಷನ್ 303(2) ಕಳ್ಳತನ ಪ್ರಕರಣದ ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ನಂಬಿಕೆಯ ಮಾತೇ ಬಂಡವಾಳ!
ಪೊಲೀಸ್ ಮಾಹಿತಿಯ ಪ್ರಕಾರ, ಬೆಂಗಳೂರು ಪ್ರಕಾಶ್ ನಗರದ ನಿವಾಸಿಯೊಬ್ಬರು ಫೆಬ್ರವರಿ 25 ರಂದು ಕಂಪ್ಲೆಂಟ್ ನೀಡಿದ್ದರು. ರಾಜಾಜಿನಗರ ಪೊಲೀಸ್ ಠಾಣೆಯಲ್ಲಿನ ಕೇಸ್ ಅದು. ದೂರುದಾರರ ತಂದೆಯನ್ನು ಭೇಟಿಯಾಗಿದ್ದ ಆರೋಪಿ ತಾನು ಹೊಸ ಅಂಗಡಿ ಉದ್ಘಾಟನೆ ಮಾಡುತ್ತಿದ್ದು, ಈ ಸಮಾರಂಭಕ್ಕೆ ವಿವಾಹಿತ ಮಹಿಳೆಯರ ಉಪಸ್ಥಿತಿಯ ಅಗತ್ಯವಿದೆ ಎಂದು ನಂಬಿಸಿದ್ದ. ಆತನ ಮಾತು ಸತ್ಯವೆಂದು ನಂಬಿದ ಕುಟುಂಬಸ್ಥರು, ದೂರುದಾರರ ತಾಯಿಯನ್ನು ಆರೋಪಿ ಜೊತೆಯಲ್ಲಿ ಕಳುಹಿಸಿಕೊಟ್ಟಿದ್ದರು.
ಶಿವಮೊಗ್ಗ: ಮನೆಗೆ ಕ್ಯೂರಿಂಗ್ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಗಾರೆ ಮೇಸ್ತ್ರಿ ಸಾವು
ಊರೆಲ್ಲಾ ಸುತ್ತಿಸಿ ನಡುದಾರಿಯಲ್ಲಿ ಬಿಟ್ಟು ಹೋದ ಆರೋಪಿ
ಹೀಗೆ ನಂಬಿಸಿ ತನ್ನ ಜೊತೆಗೆ ಮಹಿಳೆಯನ್ನು ಕರೆದೊಯ್ದ ಆರೋಪಿ ಕೆ ಆರ್ ಮಾರುಕಟ್ಟೆ ಕಡೆಗೆ ಆಟೋದಲ್ಲಿ ತೆರಳಿದ್ದಾನೆ. ಆ ನಡುವೆ ಮಹಿಳೆಯ ಬಳಿ ಮಾತನಾಡಿ, ಉದ್ಘಾಟನಾ ಸಮಾರಂಭ ನಡೆಯುವ ಸ್ಥಳದಲ್ಲಿ ಚಿನ್ನ ಹಾಕಿದ್ರೆ ಕಳ್ಳತನ ಆಗಬಹುದು ಹಾಗಾಗಿ ಒಡವೆ ತೆಗೆದು ಹಿಡ್ಕೊಳ್ಳಿ ಎಂದಿದ್ದಾನೆ. ಇದನ್ನ ನಂಬಿದ್ದ ಮಹಿಳೆ ತಮ್ಮ ಕೊರಳಲ್ಲಿದ್ದ ಚಿನ್ನದ ಸರ ಹಾಗೂ ಕೈ ಬೆರಳಿನಲ್ಲಿದ್ದ ಉಂಗುರವನ್ನ ತೆಗೆದು ಆತನ ಕೈಗೆ ಕೊಟ್ಟಿದ್ದರು. ಆಭರಣಗಳನ್ನು ಪಡೆದುಕೊಂಡ ಬಳಿಕ, ಆರೋಪಿ ಮಹಿಳೆಯನ್ನು ಕೆ ಆರ್ ಮಾರುಕಟ್ಟೆಯ ಸಮೀಪ ಇಳಿಸಿ ಎಸ್ಕೇಪ್ ಆಗಿದ್ದ.
ಈ ಸಂಬಂಧ ದಾಖಲಾದ ಕಂಪ್ಲೇಂಟ್ನ್ನ ಸೀರಿಯಸ್ ಆಗಿ ತೆಗೆದುಕೊಂಡ ಪೊಲೀಸರು ಮಾರ್ಚ್ 5 ರಂದು ಆರೋಪಿ ಪ್ರವೀಣ್ನನ್ನು ಕೆಂಪೇಗೌಡ ಬಸ್ ನಿಲ್ದಾಣದ ಸಮೀಪ ಅರೆಸ್ಟ್ ಮಾಡಿದ್ದಾನೆ. ಬಳಿಕ ಆತನ ವಿಚಾರಣೆ ವೇಳೆ ಒಟ್ಟು 116 ಗ್ರಾಂ ತೂಕದ ಚಿನ್ನವನ್ನು ಆತನಿಂದ ಸೀಜ್ ಮಾಡಿದ್ದಾರೆ. 409 ಗ್ರಾಂ ತೂಕದ ಬೆಳ್ಳಿ ವಸ್ತುಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಒಟ್ಟು ರಾಜಾಜಿನಗರ, ಹೆಬ್ಬಾಳ, ರಾಮಮೂರ್ತಿನಗರ, ಸಿಟಿ ಮಾರ್ಕೆಟ್ ಹಾಗೂ ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಐದು ಪ್ರಕರಣ ಸಂಬಂಧ ಈತನ ವಿಚಾರಣೆ ಮುಂದುವರಿದಿದ್ದು, ಸದ್ಯ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸೈಬರ್ ಬುಲ್ಲಿಯಿಂಗ್ ಬಗ್ಗೆ ಶಿವಮೊಗ್ಗ ಎಸ್ಪಿ ಪೋಸ್ಟ್! ಡಿಜಿಟಲ್ ಕಿರುಕುಳದ ಬಗ್ಗೆ ನಿಮಗೆ ಗೊತ್ತಾ!
ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
Shivamogga Man Arrested in Bengaluru for Duping Women of Jewellery who is the 50-year-old man from Shivamogga arrested by Bengaluru police
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.