ಶಿವಮೊಗ್ಗದ ನಿದಿಗೆ ಕೆರೆ ಬಳಿ ಆಕ್ಸಿಡೆಂಟ್/ ಬೆಂಗಳೂರಿಂದ ಸಿಗಂದೂರಿಗೆ ಹೋಗುತ್ತಿದ್ದ ಬಸ್ ಪಲ್ಟಿ

KARNATAKA NEWS/ ONLINE / Malenadu today/ Apr 27, 2023 GOOGLE NEWS


ಶಿವಮೊಗ್ಗ/ ಶಿವಮೊಗ್ಗದ ನಿಧಿಗೆ ಕೆರೆಯ ಬಳಿಯಲ್ಲಿ ಇವತ್ತು ಬೆಳಗಿನ ಜಾವ ಆಕ್ಸಿಡೆಂಟ್ ಸಂಭವಿಸಿದೆ. ಇಲ್ಲಿನ ಕೆರೆಯ ದಂಡೆ ಬಳಿಯಲ್ಲಿ ಖಾಸಗಿ ಬಸ್​ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ ಬೆಂಗಳೂರಿನಿಂದ ಸಿಗಂದೂರಿಗೆ ಹೋಗುತ್ತಿತ್ತು. 

ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಬೆಳಗ್ಗಿನ ಜಾವ  ನಿಧಿಗೆ ಕೆರೆಯ ಬಳಿಯ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಹಲವರಿಗೆ  ಗಾಯಗಳಾಗಿವೆ. ಇವರೆಲ್ಲರೂ ಎರಡು ಬಸ್​ಗಳಲ್ಲಿ ಬೆಂಗಳೂರಿನಿಂದ  ಸಿಗಂದೂರಿಗೆ ಬರುತ್ತಿದ್ರು. ಹೈವೆಯಲ್ಲಿ ರಿಪೇರಿ ಕೆಲಸ ನಡೆಯುತ್ತಿದ್ದು, ಅಲ್ಲಲ್ಲಿ ಡೈವರ್ಷನ್​ ಮಾಡಲಾಗಿದೆ.  ನಸುಕಿನಲ್ಲಿ ಚಾಲಕನಿಗೆ ಈ ಡೈವರ್ಷನ್​ನಲ್ಲಿ ಬಸ್​ ನಿಯಂತ್ರಣಕ್ಕೆ ಆಕ್ಸಿಡೆಂಟ್​ ಆಗಿದೆ ಎನ್ನಲಾಗುತ್ತಿದೆ.

ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಇನ್ನೂ ಘಟನೆಯಲ್ಲಿ ಬಸ್​ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಬಸ್​ನ ಕಿಟಿಕಿ ಗಾಜುಗಳು ಸಂಪೂರ್ಣವಾಗಿ ಜಖಂ ಆಗಿದೆ.  ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. 

ಓದಿ / ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 %  ಉದ್ಯೋಗಾವಕಾಶ/ ವಿವರ ಇಲ್ಲಿದೆ 

 

Malenadutoday.com Social media

 

Leave a Comment