ಸೂಡೂರು ಪೋಸ್ಟ್ ಬಳಿ ಮಹೀಂದ್ರ ಕಾರು ಮೂರು ಪಲ್ಟಿ! ಹರಕೆ ಕುರಿ ಸಲ್ಲಿಸಿ ವಾಪಸ್ ಆಗುವಾಗ ಘಟನೆ ! ಓರ್ವ ಸಾವು

ಹಂಚಿಕೊಳ್ಳಿ
WhatsApp Facebook X Telegram

SHIVAMOGGA |  Jan 13, 2024  |  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಸಮೀಪ ನಿನ್ನೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಓರ್ವರು ನಿಧನರಾಗಿದ್ದಾರೆ ಎಂಬ ವರದಿ ಲಭ್ಯವಾಗಿದೆ. 

ಸೂಡೂರು ಅರಣ್ಯ ಪ್ರದೇಶ

ರಿಪ್ಪನ್​ಪೇಟೆ ಸಮೀಪ ಸಿಗುವ ಸೂಡೂರು ಅರಣ್ಯ ಪ್ರದೇಶದ ಬಳಿ ಬರುವ ಟರ್ನಿಂಗ್  ನಲ್ಲಿ ಮಹೀಂದ್ರಾ  ಕಂಪನಿಗೆ ಸೇರಿದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. 

ಮಹೀಂದ್ರಾ XYLO ಕಾರು

ಮಹೀಂದ್ರಾ XYLO ಕಾರು ಸೂಡೂರು ಪೋಸ್ಟ್  ಬಳಿಯಲ್ಲಿ  ಚಾಲಕನ ನಿಯಂತ್ರಣ ತಪ್ಪಿ ಮೂರು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಐವರ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದವು. ಅವರನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ  ಗೆ ದಾಖಲಿಸಲು ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ಓರ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.. 

ರಿಪ್ಪನ್​ ಪೇಟೆ ಪೊಲೀಸ್ ಸ್ಟೇಷನ್

ಮೃತರು ಭದ್ರಾವತಿ  ತಾಲ್ಲೂಕಿನ ಬಿಳಕಿ ಯವರು ಎಂದು ತಿಳಿದುಬಂದಿದೆ. ಇವರು ಕೆಂಚನಾಲ ದಲ್ಲಿರುವ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಹೋಗಿ ಹರಕೆ ಕುರಿ ಸಲ್ಲಿಸಿ ವಾಪಸ್ ಆಗುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ಸದ್ಯ ಘಟನೆ ಸಂಬಂಧ ರಿಪ್ಪನ್​ ಪೇಟೆ ಪೊಲೀಸ್ ಸ್ಟೇಷನ್​ ನಲ್ಲಿ ಕೇಸ್ ದಾಖಲಾಗಿದೆ 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor