ಶಿವಮೊಗ್ಗದ ಕಾಲೇಜಿನಲ್ಲಿ ರೌಡಿಸಂ! ವಿದ್ಯಾರ್ಥಿಯ ಕಿಡ್ನಾಪ್, ಹಲ್ಲೆ, ಜೀವ ಬೆದರಿಕೆ! ಕೋಟೆ ಪೊಲೀಸ್ ಸ್ಟೇಷನ್ ಕೇಸ್!

SHIVAMOGGA |  Jan 13, 2024  |  ಶಿವಮೊಗ್ಗ ರೌಡಿಸಂ ಸದ್ದಿಲ್ಲದೇ ದೊಡ್ಡದಾಗಿ ಸದ್ದು ಮಾಡ್ತಿದೆ. ಅದರ ಬಗ್ಗೆ ಪೊಲೀಸ್ ಇಲಾಖೆಗೆ ಎಷ್ಟರಮಟ್ಟಿಗೆ ಮಾಹಿತಿ ಇದೆ ಹಾಗೂ ಯಾವ ಹಂತದ ಅಧಿಕಾರಿಗಳವರೆಗೂ ಮಾಹಿತಿ ಇದೆ ಎಂಬುದು ಅಸ್ಪಷ್ಟ.

ಶಿವಮೊಗ್ಗ ರೌಡಿಸಂ

ಈ ನಡುವೆ ಶಿವಮೊಗ್ಗ ರೌಡಿಸಂ ಮೆಟಿರಿಯಲ್​ ಕಾಲೇಜು ಗೇಟಿನೊಳಗೆ ಪ್ರವೇಶ ಮಾಡಿರುವುದು ನಿಜಕ್ಕೂ ಅಪಾಯಕಾರಿ. ದೊಡ್ಡತಲೆಗಳ ಹೆಸರು ಹೇಳಿಕೊಂಡು ಕಾಲೇಜಿನಲ್ಲಿ ಹವಾ ಮೇಂಟೇನ್​ ಮಾಡುವಂತಹ ವಿದ್ಯಾರ್ಥಿಗಳು ನಿಜವಾಗಲು ಕಷ್ಟಪಟ್ಟು ಓದಿಕೊಂಡು ಭವಿಷ್ಯ ಹುಡುಕುವ ವಿದ್ಯಾರ್ಥಿಗಳಿಗೆ ಸಮಸ್ಯೆ ತಂದೊಡ್ಡುವ ಅಪಾಯವಿದೆ. ಇದಕ್ಕೆ ಸಾಕ್ಷಿ ಎಂಬಂತಹ ಪ್ರಕರಣವೊಂದುಶಿವಮೊಗ್ಗ ಕೋಟೆ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಗಿದೆ 

ಕೋಟೆ ಪೊಲೀಸ್ ಸ್ಟೇಷನ್​

ಘಟನೆ ನಡೆದಿದ್ದು ಕೋಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ. ಸ್ಟೂಡೆಂಟ್ಸ್​​ ಆದ್ದರಿಂದ ಇದಕ್ಕಿಂತ ಹೆಚ್ಚು ಮಾಹಿತಿ ಅವರುಗಳ ಭವಿಷ್ಯದ ದೃಷ್ಟಿಯಿಂದ ಗೌಪ್ಯವಾಗಿ ಇಡಲಾಗುತ್ತಿದೆ. ಇಲ್ಲಿನ ಕಾಲೇಜು ಒಂದರಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು, ತನ್ನನ್ನ ರೌಡಿ ಗಿರಾಕಿ ಜೊತೆಗೆ ಗುರುತಿಸಿಕೊಳ್ತಿದ್ದವನೊಬ್ಬ ಕಿಡ್ನ್ಯಾಪ್​ ಮಾಡಿಸಿದ್ದಾನೆ. ಅಲ್ಲದೆ ನಿರ್ಜನ ಪ್ರದೇಶಕ್ಕೆ  ಕರೆದುಕೊಂಡು ಹೋಗಿ ಆತನ ಮೇಲೆ ಹಲ್ಲೆ ಮಾಡಲಾಗಿದೆ.ದೂರಿನಲ್ಲಿ ದಾಖಲಾಗಿರುವ ಪ್ರಕಾರ, ಮಾರಕಾಸ್ತ್ರವೊಂದರ ಹಿಂಬದಿಯಿಂದ ಹೊಡೆದು, ವಿದ್ಯಾರ್ಥಿಯ ಅಕೌಂಟ್​ನಲ್ಲಿದ್ದ ಹಣವನ್ನು ತಮ್ಮ ಅಕೌಂಟ್​ಗೆ ಹಾಕಿಸಿಕೊಳ್ಳಲಾಗಿದೆ. ಇಷ್ಟೆ ಅಲ್ಲದೆ ಪೊಲೀಸರಿಗೆ ದೂರು ಕೊಟ್ಟರೆ, ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. 

ಐಪಿಸಿ ಸೆಕ್ಷನ್​?

ರೌಡಿಯೊಬ್ಬನ ಹೆಸರಿನಲ್ಲಿ ಯುವಕನೊಬ್ಬ ಗುರುತಿಸಿಕೊಂಡಿರುವುದು ಪ್ರಕರಣದಲ್ಲಿ  ಸೂಕ್ಷ್ಮವಾಗಿ ಕಾಣುತ್ತಿದೆ. ಆ ರೌಡಿಯನ್ನ ಪೊಲೀಸರು ಮಟ್ಟ ಹಾಕಬೇಕಿದೆ. ಇಲ್ಲವಾದರೆ ಕಾಲೇಜುಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತವೆ. ಸದ್ಯ ಕೇಸ್​ನಲ್ಲಿ ಸೀರಿಯಸ್ ಆಗಿರುವ ಕೋಟೆ ಪೊಲೀಸ್ ಸ್ಟೇಷನ್​ ಪೊಲೀಸರು IPC 1860 (U/s-364,323,324,384,506,149  ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. 

IPC 1860 (U/s-364,323,324,384,506,149 

ಐಪಿಸಿ ಸೆಕ್ಷನ್ 364: ಯಾರಾದರೂ ಒಬ್ಬ ವ್ಯಕ್ತಿಯನ್ನು ಕೊಲ್ಲುವ ಉದ್ದೇಶದಿಂದ ಅಪಹರಿಸಿದರೆ ಅಥವಾ ಅಪಹರಿಸಿದರೆ, ಅದು ಈ ಸೆಕ್ಷನ್ ಅಡಿಯಲ್ಲಿ ಬರುತ್ತದೆ.

ಐಪಿಸಿ ಸೆಕ್ಷನ್ 323:  ಯಾರಾದರೂ ಉದ್ದೇಶಪೂರ್ವಕವಾಗಿ ಇನ್ನೊಬ್ಬ ವ್ಯಕ್ತಿಗೆ ಹಾನಿ ಮಾಡಿದರೆ, ಮತ್ತು ಕೃತ್ಯವು ಗಂಭೀರ ಗಾಯ ಅಥವಾ ಜೀವಕ್ಕೆ ಅಪಾಯವನ್ನುಂಟುಮಾಡುವಂತಹ ಗಂಭೀರ ವಿಭಾಗಗಳ ಅಡಿಯಲ್ಲಿ ಬರದಿದ್ದರೆ, ಅದು ಈ ಸೆಕ್ಷನ್ ಅಡಿಯಲ್ಲಿ ಬರುತ್ತದೆ.

ಐಪಿಸಿ ಸೆಕ್ಷನ್ 324: ಆಯುಧ ಅಥವಾ ಯಾವುದೇ ಅಪಾಯಕಾರಿ ವಿಧಾನಗಳನ್ನು ಬಳಸಿಕೊಂಡು ಯಾರಾದರೂ ಉದ್ದೇಶಪೂರ್ವಕವಾಗಿ ಇನ್ನೊಬ್ಬ ವ್ಯಕ್ತಿಗೆ ಹಾನಿ ಮಾಡಿದರೆ, ಅದು ಈ ಸೆಕ್ಷನ್ ಅಡಿಯಲ್ಲಿ ಬರುತ್ತದೆ.

ಐಪಿಸಿ ಸೆಕ್ಷನ್ 384: ಈ ಸೆಕ್ಷನ್ ಸುಲಿಗೆ ಅಪರಾಧಕ್ಕೆ ಸಂಬಂಧಿಸಿದೆ. 

ಐಪಿಸಿ ಸೆಕ್ಷನ್ 506: ಒಬ್ಬ ವ್ಯಕ್ತಿಯು ಆ ವ್ಯಕ್ತಿಗೆ ಅಥವಾ ಇತರ ಯಾವುದೇ ವ್ಯಕ್ತಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಇನ್ನೊಬ್ಬರಿಗೆ ಬೆದರಿಕೆ ಹಾಕಿದರೇ ಈ ಸೆಕ್ಷನ್​ ಅನ್ವಯವಾಗುತ್ತದೆ

ಐಪಿಸಿ ಸೆಕ್ಷನ್ 149: ಆರೋಪಿಗಳೆಲ್ಲರ ವಿರುದ್ಧವೂ ಸಾಮಾನ್ಯ ಉದ್ದೇಶ ಹೊಂದಿದ ಆರೋಪ ಮತ್ತು ಕೃತ್ಯವೆಸಗಿದ ಎಲ್ಲಾ ಸದಸ್ಯರನ್ನು ಈ ಸೆಕ್ಷನ್ ಅಡಿಯಲ್ಲಿ ಹೊಣೆಗಾರರನ್ನಾಗಿ ಮಾಡಬಹುದು.

Leave a Comment