ಮಧು ಬಂಗಾರಪ್ಪ V/s ಬೇಳೂರು ಗೋಪಾಲಕೃಷ್ಣ! ಏನು ನಡೆಯುತ್ತಿದೆ ಶಿವಮೊಗ್ಗ ಕಾಂಗ್ರೆಸ್​ನಲ್ಲಿ?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Oct 30, 2023 SHIVAMOGGA NEWS

 

SHIVAMAOGGA | ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಬೆನ್ನಲ್ಲಿಯೇ ಅಧಿಕಾರ ಹೆಚ್ಚು ದಿನ ಇರೋದಿಲ್ಲ. ಸರ್ಕಾರ ಬಿದ್ದೋಗುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಬರುತ್ತಿದ್ದಾರೆ. ಬಿಜೆಪಿ ವಲಯದ ಮಾತು ಸಾರ್ವಜನಿಕರಲ್ಲಿ ಅನುಮಾನ ಹಾಗೂ ಆಶ್ಚಯ ರೂಪದಲ್ಲಿ ಚರ್ಚೆಯಾಗುತ್ತಿದೆ. ಈ ಚರ್ಚೆಗೆ ಪೂರಕವಾಗಿ ಕೆಲವು ಅಸಮಾಧಾನಗಳು ಸಹ ಕಾಂಗ್ರೆಸ್​ನಲ್ಲಿ ಪ್ರಕಟಗೊಳ್ಳುತ್ತಿದೆ. 

ಮುಖ್ಯವಾಗಿ ಗಮನಿಸಿದರೇ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಡಿಸಿಎಂ ಡಿಕೆ ಶಿವಕುಮಾರ್ ಹಸ್ತಕ್ಷೇಪದ ಬಗ್ಗೆ ಪರೋಕ್ಷ ಹಾಗೂ ನೇರ ಅಸಮಾಧಾನಗಳನ್ನು ಹೊರಹಾಕಿದ್ದಾರೆ.ಅದರ ಬೆನ್ನಲ್ಲೆ ಶಿವಮೊಗ್ಗದಲ್ಲಿಯು ಅಸಮಾಧಾನ ಹೊಗೆ ಎದ್ದಿದೆ.

ಹೌದು,  ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣರ ನಡುವೆ ಅಂತರಪಟದ ವಾಕ್ಸಮರ ಆರಂಭವಾಗಿದೆ. ಕಳೆದ ಕೆಲ ದಿನಗಳಿಂದಲೂ ಪರಸ್ಪರ ಭೇಟಿಯಾಗದ ಇಬ್ಬರು ಮುಖಂಡರು, ಕಾರ್ಯಕ್ರಮಗಳಿಗೂ ಬೇರೆ ಬೇರೆಯಾಗಿ ಹೋಗಿದ್ದ ಪ್ರಸಂಗ ನಡೆದಿದ್ದವು. ಮೊನ್ನೆ ಬೆಂಗಳೂರಿನಲ್ಲಿ ಹಾಗೂ ನಿನ್ನೆ ಶಿವಮೊಗ್ಗದಲ್ಲಿ ಈ ಅಸಮಾಧಾನ ಸ್ಫೋಟಗೊಂಡಿದೆ. 

ಅಸಮಾಧಾನವನ್ನು ನೇರವಾಗಿಯೇ ಹೊರಹಾಕಿರುವ ಬೇಳೂರು ಗೋಪಾಲಕೃಷ್ಣ ನಾನು ಸಹ ಸಂಸತ್ ಚುನಾವಣೆಯಲ್ಲಿ ಆಕಾಂಕ್ಷಿ ಟಿಕೆಟ್ ಕೊಟ್ಟರೇ ಗೆದ್ದು ತೋರಿಸುತ್ತೇನೆ ಎಂದಿದ್ದಾರೆ. ಅವರ ಆಸ್ಫೋಟದ ಮಾತು, ಕಾಂಗ್ರೆಸ್​ನಲ್ಲಿ ಸರಪಟಾಕಿಯಂತೆ ಸಿಡಿಯುತ್ತಿದೆ. ನಿಜವಾಗಿಯು ಅವರು ಎಂಪಿ ಚುನಾವಣೆಗೆ ನಿಲ್ಲುವ ಇರಾದೆಯಲ್ಲಿ ಇದ್ದರಾ ಇಲ್ಲವಾ ದೀಪಾವಳಿಗೆ ಸ್ಪಷ್ಟವಾಗಬಹುದು. 

ಆದಾಗ್ಯು ಈ ಬಗ್ಗೆ ಅಭಿಲಾಷೆ ವ್ಯಕ್ತಪಡಿಸಿರುವ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ  ಪ್ರತಿಯೊಬ್ಬ ಶಾಸಕರಿಗೂ 20 ತಿಂಗಳು ಅಧಿಕಾರ ಹಂಚಿಕೆ ಮಾಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ನೇರವಾಗಿಯೇ  ಮಾಜಿ ಮುಖ್ಯಮಂತ್ರಿ ಮಕ್ಕಳಿಗೆ ಅಧಿಕಾರ ಕೊಟ್ಬಿಟ್ರೇ ನಾವು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಕೇವಲ ಮಾಜಿ ಮುಖ್ಯಮಂತ್ರಿ ಮಕ್ಕಳಿಗೆ ಮಂತ್ರಿ ಮಕ್ಕಳಿಗೆ ಯಾಕೇ ಅಧಿಕಾರ? ಎಂದೇ ಕೇಳುತ್ತಿರುವ ಅವರು, ನಮಗೂ ಅಧಿಕಾರ ಕೊಡಿ ಎಂದಿದ್ದಾರೆ. ನಾನು ಮೂರು ಸಲ ಶಾಸಕನಾಗಿದ್ದೇನೆ ಎಂದು ತಮ್ಮ ಅರ್ಹತೆಯ ಸರ್ಟಿಫಿಕೆಟ್ ನೀಡುತ್ತಿದ್ದಾರೆ. 

ಮಧು ಬಂಗಾರಪ್ಪ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೋ ಇಲ್ವೋ  ನನಗೆ ಗೊತ್ತಿಲ್ಲ ಎಂದಿರುವ ಬೇಳೂರು ಗೋಪಾಲಕೃಷ್ಣರವರು, ನಮ್ಮನ್ನ ಜಿಲ್ಲಾ ಉಸ್ತುವಾರಿ ಗಳು ಎಲ್ಲೂ ಕರಿಯುತ್ತಿಲ್ಲ ಎಂದು ನೇರವಾಗಿ ಆರೋಪಿಸಿದ್ದಾರೆ. ಯಾರನ್ನ ಇಟ್ಟುಕೊಂಡು ನಾನು ಗೆದ್ದು ಬಂದಿಲ್ಲ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಗೆದ್ದು ಬಂದಿದ್ದೇನೆ. ನನಗೆ ಸರ್ಕಾರದ ಮೇಲೆ ಅಸಮಧಾನ ಇಲ್ಲ. ನಾನು ಸಾಮಾನ್ಯ ವ್ಯಕ್ತಿ ನನ್ನ ಸಾಮಾರ್ಥ್ಯ ಕಸಿದುಕೊಳ್ಳು ಯಾರಿಂದಲೂ ಸಾಧ್ಯ ಇಲ್ಲ.  ನನ್ನ ಗೆಲ್ಲಿಸಿದ್ದು ಮಧು ಬಂಗಾರಪ್ಪ ಅಲ್ಲ ಎಂದಿದ್ದಾರೆ. 

ಇದರ ಜೊತೆಯಲ್ಲಿಯೇ  ಅವರ್ಯಾರೋ ನಿಂತಕೊಳ್ತಾರೆ ಅಂದ್ರೆ ನನಗೆ ಗೊತ್ತಿಲ್ಲ,  ಅವರು ಎಲ್ಲು ಓಡಾಲಿಡಲ್ಲ ಎಂದು ಪರೋಕ್ಷವಾಗಿ  ವ್ಯಂಗ್ಯವಾಡಿರುವ ಬೇಳೂರು ಗೋಪಾಲಕೃಷ್ಣರವರು ಸಂಸದ  ರಾಘವೇಂದ್ರ ಅವರನ್ನು ಯಡಿಯೂರಪ್ಪ ನವರನ್ನು ಎದರಿಸಲು ಬೇಳೂರು ಗೋಪಾಲಕೃಷ್ಣರಿಂದಷ್ಟೆ ಸಾಧ್ಯ ಎಂದಿದ್ದಾರೆ. .

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ನಲ್ಲಿ ಒಂದಷ್ಟು ಆಚೀಚೆ ಆಗಿದೆ ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಆ ವಿಚಾರವ ಇದೀಗ ಬೇಳೂರು ಗೋಪಾಲಕೃಷ್ಣರಿಂದ ಹೊರಕ್ಕೆ ಬಂದಿದೆ. ಆಲ್​ರೈಟ್ ಮುಂದೆ ಎಂದರೇ… ಕಾದು ನೋಡಬೇಕಷ್ಟೆ… 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor