ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

KARNATAKA NEWS/ ONLINE / Malenadu today/ Oct 9, 2023 SHIVAMOGGA NEWS

 

ಪೊಲೀಸ್ ಇಲಾಖೆಗೆ ಸವಾಲಾಗಿದ್ದ ಹಲವು ಪ್ರಕರಣಗಳಿಗೆ ಜೀವ ತುಂಬಿ ಆರೋಪಿಗಳಿಗೆ ಹೆಡೆಮುರಿ ಕಟ್ಟಿದ್ದ ಇನ್ ಸ್ಪೆಕ್ಟರ್ ಅಭಯ್ ಪ್ರಕಾಶ್​ ಗೆ ಅಮಾನತ್ತಿನಂತ ಶಿಕ್ಷೆ ಸರಿಯೇ…ಇದೊಂದು ಪ್ರಕರಣದಲ್ಲಿ ಅವರು ಫೇಲ್ಯೂರ್ ಅಂತಾದ್ರೆ..ಈ ಹಿಂದೆ ಶಿವಮೊಗ್ಗದಲ್ಲಿನ ಘಟನೆಗಳಿಗೆ ಅದೆಷ್ಟು ಅಧಿಕಾರಿ ಸಿಬ್ಬಂದಿಗಳು ತಲೆದಂಡವಾಗಬೇಕಿತ್ತು ಗೊತ್ತಾ? 

 

ಅಭಯ್ ಪ್ರಕಾಶ್…ಹಾಲಿ ಶಿವಮೊಗ್ಗ ಗ್ರಾಮಾಂತರ ಠಾಣೆಯ ಇನ್ ಸ್ಪೆಕ್ಟರ್. ರಾಗಿಗುಡ್ಡ ಶಾಂತಿ ನಗರದ ಈದ್ ಮಿಲಾದ್ ಮೆರವಣಿಗೆಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಆರೋಪದಲ್ಲಿ ಅಮಾನತ್ತುಗೊಂಡ ಅಧಿಕಾರಿ. ಇವರೊಂದಿಗೆ ರಾಗಿಗುಡ್ಡ ಬೀಟ್ ನಲ್ಲಿದ್ದ ಮೂರು ಮಂದಿ ಪೊಲೀಸ್ ಸಿಬ್ಬಂದಿಗಳು ಕೂಡ ಅಮಾನತ್ತುಗೊಂಡಿದ್ದಾರೆ.

ಯಶಸ್ವಿ ಅಧಿಕಾರಿ ಅಭಯ್ ಪ್ರಕಾಶ್​

ರಾಗಿಗುಡ್ಡದ ಘಟನೆ ಅವಲೋಕಿಸಿದರೆ ಇಲ್ಲಿ ಮತೀಯ ಗಲಾಟೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಅಭಯ್ ಪ್ರಕಾಶ್ ಸಾಕಷ್ಟು ಸಂದರ್ಭಗಳಲ್ಲಿ ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಆದ್ರೆ ಈದ್ ಮೆರವಣಿಗೆಯಲ್ಲಿ ನಡೆದ ಗಲಭೆಯಲ್ಲಿ ಅವರ ಕರ್ತವ್ಯ ಲೋಪ ಬೊಟ್ಟು ಮಾಡಿ ತೋರಿಸಿ ಅಮಾನತ್ತುಗೊಳಿಸಿರುವುವುದು ಸರಿಯಾದ ಕ್ರಮವಲ್ಲ ಎಂದು ಇಡೀ ಶಿವಮೊಗ್ಗ ಹೇಳುತ್ತಿದೆ 

ಸಣ್ಣ ಘಟನೆಗೆ ಸಸ್ಪೆಂಡ್ ?

ಈದ್ ಮಿಲಾದ್ ಮೆರವಣಿಗೆಯಲ್ಲಿ ಚಾಕು ಇರಿತವಾಗಿಲ್ಲ..ಕೊಲೆಯಾಗಿಲ್ಲ..ಕೇವಲ ಕಲ್ಲು ತೂರಾಟದಂತ ಸಣ್ಣ ಘಟನೆಯೊಂದು ನಡೆದಿದೆ. ಶಿವಮೊಗ್ಗದ ಇತಿಹಾಸದಲ್ಲಿ ಈ ರೀತಿಯ ಘರ್ಷಣೆಗಳು ವರ್ಷದಲ್ಲಿ ಎರಡು ಮೂರೂ ಸನ್ನಿವೇಶಗಳು ಇದ್ದೇ ಇರುತ್ತವೆ.

ಹಾಗಂತ ಅಧಿಕಾರಿ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡುತ್ತಾ ಹೋದ್ರೆ ಪೊಲೀಸ್ ಠಾಣೆ ಖಾಲಿಯಾಗುತ್ತೆ ಹೊರತು ಹೊರ ಊರುಗಳಿಂದ ಯಾವೊಬ್ಬ ಅಧಿಕಾರಿ ಇಲ್ಲಿಗೆ ವರ್ಗಾವಣೆ ಬಯಸಿ ಬರೋದಿಲ್ಲ. ರಾಗಿಗುಡ್ಡದ ಪ್ರಕರಣದಲ್ಲಿ ನಿಜಕ್ಕೂ ಅಭಯ್ ಪ್ರಕಾಶ್ ಸಪ್ಪೆಂಡ್ ನ್ನು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಸಮರ್ಥಿಸಿಕೊಳ್ಳುವುದಾದರೆ ಮಲೆನಾಡು ಟುಡೆ ರೈಸ್ ಮಾಡುವ  ಪ್ರಶ್ನೆಗಳಿಗೆ ಅವರ ಬಳಿ ಉತ್ತವಿದೆಯಾ? 

2010 ಘಟನೆಯಲ್ಲಿ ನೋ ಸಸ್ಪೆಂಡ್!

2010 ರಲ್ಲಿ ಶಿವಮೊಗ್ಗದಲ್ಲಿ  ಪತ್ರಿಕೆಯೊಂದರಲ್ಲಿ ಆಕ್ಷೇಪಾರ್ಹ ಬರಹ ಪ್ರಕಟವಾಗಿಯೆಂಬ ಕಾರಣಕ್ಕೆ ನಡೆದ ಹಿಂಸಾಚಾರ ಮುಗಿಲು ಮುಟ್ಟಿದಾಗ ಗೋಲಿ ಬಾರ್ ನಡೆದಿತ್ತು. ಘಟನೆಯಲ್ಲಿ ಇಬ್ಬರು ನಾಗರೀಕರು ಸಾವನ್ನಪ್ಪಿದ್ ಇಬ್ಬರು ಚೂರಿ ಇರಿತಕ್ಕೆ ಒಳಗಾಗಿ ಸಾವನ್ನಪ್ಪಿದ್ರು. ಆಗ ಕಾನೂನು ಸುವ್ಯವಸ್ಥೆ ಹಾಳಾಗಿದೆ ಅಂತಾ..ಈ ಠಾಣಾ ವ್ಯಾಪ್ತಿಯ ಯಾವೊಬ್ಬ ಅಧಿಕಾರಿ ಸಿಬ್ಬಂದಿ ಅಮಾನತ್ತುಗೊಂಡಿದ್ದರಾ? 

2015 ರಲ್ಲಿಯು ಅಮಾನತ್ತಿಲ್ಲ

2015 ರಲ್ಲಿ ಸಂಘಟನೆಯ ರ್ಯಾಲಿ ಸಂದರ್ಭದಲ್ಲಿ ಶಿವಪ್ಪ ನಾಯಕ ವತ್ತದ ಬಳಿ ಗಲಾಟೆಯಾದಾಗ ಅದು ಅಕ್ಷರ ಸಹ ಪೊಲೀಸರ ವೈಫಲ್ಯವಾಗಿತ್ತು.ಆ ಹಿಂಸಾಚಾರದಲ್ಲಿ ವಿಶ್ವನಾಥ್​ ಶೆಟ್ಟಿ ಅನ್ನೋ ವ್ಯಕ್ತಿ ಚೂರಿ ಇರಿತಕ್ಕೆ ಒಳಗಾಗಿ ಸಾವನ್ನಪ್ಪಿದ್ರು. ಶಿವಮೊಗ್ಗದಲ್ಲಿ ಗಲಭೆ ಹೆಚ್ಚಾಯ್ತು. ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಆಗ ಘಟನೆಗೆ ಸಂಬಂಧಿಸಿದಂತೆ ಯಾವೊಬ್ಬ ಪೊಲೀಸ್ ಅಧಿಕಾರಿ ಸಿಬ್ಬಂದಿ ಅಮಾನತ್ತುಗೊಳ್ಳಲಿಲ್ಲ.

ಗೊತ್ತಿದ್ದರೂ ಕ್ರಮ ತೆಗೆದುಕೊಳ್ಲಲಿಲ್ಲವಾ?

2018 ರಲ್ಲಿ ಯುವಕ ಜೀವನ್ ಎಂಬಾತನನ್ನು  ಸುಂದರ್ ಅಶ್ರಯದ ಬಳಿ ಕೊಲೆ ಮಾಡಿದರು. ಈ ವಿಷಯ ದೊಡ್ಡಪೇಟೆ ಪೊಲೀಸರಿಗೆ ಮೊದಲೇ ಗೊತ್ತಿತ್ತು. ಹಾಗಂತ ಜೀವನ್ ರಕ್ಷಣೆಗೆ ಪೊಲೀಸರು ಯಾವ ಕ್ರಮ ಕೈಗೊಂಡಿದ್ದರು. ಘಟನೆಯಲ್ಲಿ ಯಾವ ಪೊಲೀಸರಿಗೆ ಸಸ್ಪೆಂಡ್ ಆಯ್ತು.

ಹಿಂದೂ ಹರ್ಷನ ಪ್ರಕರಣ

ಇನ್ನು ಕೊಲೆಯಾದ ಹರ್ಷ ಪ್ರಕರಣ ಅವಲೋಕಿಸುವುದಾದರೆ, ಹರ್ಷಾ ಮತ್ತು ಖಾಸಿಫ್ ಎಂಬುವರ ನಡುವೆ ವೈಯಕ್ತಿಕ ದ್ವೇಷ ಇತ್ತು ಎಂಬುದು ಪೊಲೀಸರಿಗೆ ಸಿಕ್ಕ ಗುಪ್ತವಾರ್ತೆಯಾಗಿತ್ತು. ಎದುರಾಳಿ ಗುಂಪು ಹರ್ಷನನ್ನು ಯಾವ ಸಂದರ್ಭದಲ್ಲಾದರೂ ಕೊಲೆ ಮಾಡುವ ಸಂಚನ್ನು ಅರಿತಿದ್ದ ಪೊಲೀಸರು ಯಾಕೆ ಭೇದಿಸಲಿಲ್ಲ. ಆ ಪ್ರಕರಣದಲ್ಲಿ ಯಾವೊಬ್ಬ ಪೊಲೀಸ್ ಅಧಿಕಾರಿ ಸಿಬ್ಬಂದಿ ತಲೆದಂಡವಾಗಲಿಲ್ಲ.

ಪೊಲೀಸರನ್ನ ತಳ್ಳಾಡಿದರೂ 

ಸಾವರ್ಕರ್ ಭಾವಚಿತ್ರ ತೆರವಿಗೆ ಸಂಬಂಧಿಸಿದಂತೆ ಅಮಿರ್ ಅಹಮ್ಮದ್ ವೃತ್ತದಲ್ಲಿ ಗಲಾಟೆಯಾದ ಸಂದರ್ಭದಲ್ಲಿ ಮುಖಂಡರೊಬ್ಬರು ಶಿವಮೊಗ್ಗ ಸುಟ್ಟು ಹಾಕ್ತಿನಿ ಅಂದಾಗ ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳೇ ಏನು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಘಟನೆಯಲ್ಲಿ ಪೊಲೀಸರನ್ನು ತಳ್ಳಾಡಿದ ಪ್ರಕರಣಕ್ಕೆ ಪೊಲೀಸರು ದೂರು ನೀಡಿದ್ರೂ ಇಲಾಖೆ ನ್ಯಾಯ ಕೊಡಲು ಸಾಧ್ಯವಾಗಲಿಲ್ಲ.. ಆ ಘಟನೆಯಲ್ಲೂ ಕೂಡ ಪೊಲೀಸ್ ವೈಫಲ್ಯ ಹಿರಿಯ ಅಧಿಕಾರಿಗಳಿಗೆ ಕಂಡು ಬರಲಿಲ್ಲ.

ಹುಣಸೋಡು ಸ್ಪೋಟ ಎಲ್ಲಾ ಮಾಯ?

ಇನ್ನು ದೇಶವನ್ನೇ ಬೆಚ್ಚಿಬೀಳಿಸಿದ ಹುಣಸೋಡು ಸ್ಪೋಟ ಪ್ರಕರಣದಲ್ಲಿ ಆರು ಮಂದಿ ಸಜೀವ ದಹನವಾಗಲು ಪೊಲೀಸರು ಕೂಡ ಪರೋಕ್ಷವಾಗಿ ಕಾರಣರಾಗಿದ್ದಾರೆ.ಬಿಲ್ ಇಲ್ಲದೆ ಬಂದ ಮಾಲನ್ನು ಹಿಡಿಯಲು ಹಿಂಬಾಲಿಸಿಕೊಂಡು ಹೋದ ಸಂದರರ್ಭದಲ್ಲಿಯೇ..ತರಾತುರಿಯಲ್ಲಿ ಸ್ಪೋಟಕಗಳನ್ನು ವಿಲೇವಾರಿ ಮಾಡಲು ಹೋದ ಕಾರ್ಮಿಕರು ಸ್ಪೋಟಕ್ಕೆ ತುತ್ತಾಗಿ ಸಾವನ್ನಪ್ಪಿರುವುದು ಸೂರ್ಯ ಚಂದ್ರರಷ್ಟೆ ಸತ್ಯ.

ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ನಡೆದ ಕಲ್ಲುತೂರಾಟದ ಘಟನೆಯಲ್ಲಿ ಕೊಲೆಯಾಗಲಿಲ್ಲ…ಕೇವಲ ಕಲ್ಲು ತೂರಾಟದ ಘಟನೆಗೆ ಶಿವಮೊಗ್ಗ ಗ್ರಾಮಾಂತರ ಠಾಣೆಯ ಅಧಿಕಾರಿಯನ್ನೆ ಅಮಾನತ್ತುಗೊಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವಜನಿತವಾಗಿ ಕೇಳಿ ಬರುತ್ತಿದೆ.ಅಭಯ್ ಪ್ರಕಾಶ್ ಉತ್ತಮ ತನಿಖಾಧಿಕಾರಿ. ಇಲಾಖೆಗೆ ಸವಾಲಾಗಿದ್ದ ಹಲವು ಪ್ರಕರಣಗಳನ್ನು ಭೇದಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. 

ಬಚ್ಚನ್ ನಂತಹ ನಟೋರಿಯಸ್ ರೌಡಿ ಸಿಗ್ನಲ್ ಆಪ್ ಗಳ ಮೂಲಕ ಜೈಲಿನಿಂದಲೇ ಹೊರಗಿನ ಉದ್ಯಮಿಗಳಿಗೆ ಧಮ್ಕಿ ಹಾಕಿ ಹಣ ವಸೂಲಿ ಮಾಡುತ್ತಿದ್ದ. ಬೇಸ್ ಮೊಬೈಲ್ ಸೆಟ್ ನಿಂದ ಐದಾರು ಸೆಟ್ ಗಳ ಮೂಲಕ ತನ್ನ ಸ್ಮಾರ್ಟ್ ಫೋನ್ ಗೆ ಕಾಲ್ ಬರುವಂತೆ ಮಾಡಿಕೊಂಡಿದ್ದ

ಆತ ಜೈಲಿನಿಂದ ಆತ ಧಮ್ಕಿ ಹಾಕುತ್ತಿದ್ರೂ,, ಮೊಬೈಲ್ ಲೊಕೇಶನ್ ಹೊರ ಜಗತ್ತನ್ನು ತೋರಿಸುತ್ತಿತ್ತು. ಈತನ ಕ್ರಿಮಿನಲ್ ಮೈಂಡ್ ಗೇಮ್ ಗೆ ಬ್ರೇಕ್ ಹಾಕಿದ್ದು ಅಭಯ್ ಪ್ರಕಾಶ್. ಅಭಯ್ ಪ್ರಕಾಶ್ ತಂತ್ರಜ್ಞಾನದಲ್ಲಿ ಪಂಟರ್. ತೊದಲು ಮಾತು ಅವರಿಗೆ ಹಿನ್ನಡೆಯಾದ್ರೂ, ಮೌನದಲ್ಲಿಯೇ ಮಾಡುವ ಕಾರ್ಯ ಅವರಿಗೆ ಯಶಸ್ಸನ್ನು ತಂದುಕೊಟ್ಟಿದೆ. ಜೈಲಿನಿಂದ ರಿಲೀಸ್ ಆಗಿದ್ದ ಬಚ್ಚನ್ ಬಾಂಬೆ ಏರ್ ಪೋರ್ಟ್ ನಿಂದ ದುಬೈಗೆ ಹಾರಲು ಸಂಚು ರೂಪಿಸಿದ್ದಾಗ, ಮೊಬೈಲ್ ಕಾಲ್ ಲೊಕೇಷನ್ ನಿಂದಲೇ..ಆರೋಪಿ ಜಾಡು ಪತ್ತೆ ಮಾಡಿದ್ದ ಅಭಯ್,ಏರ್ ಪೋರ್ಟ್ ನಲ್ಲಿಯೇ ಬಚ್ಚನನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ರು. ಅಂದು ಬಚ್ಚನ್ ಬಂಧನವಾಗದೆ ಹೋಗಿದ್ರೆ..ಆತ ಮಲೆನಾಡಿನ ದಾವುದ್ ಇಬ್ರಾಹಿಂ ಆಗಿ ಬೆಳೆಯುತ್ತಿದ್ದ.

ಹರ್ಷ, ಜೀವನ್ ,ಪ್ರೇಮ್  ಸಿಂಗ್ ಹಾಗು ಶಂಕಿತ ಉಗ್ರರ ಜಾಡು ಪತ್ತೆ ಪ್ರಕರಣಗಳಲ್ಲಿ ಅಭಯ್ ಪ್ರಕಾಶ್ ತೆರೆಮರೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇಂತಹ ತನಿಖಾಧಿಕಾರಿಗೆ ರಾಗಿಗುಡ್ಡ ಪ್ರಕರಣದಲ್ಲಿ ಅಮಾನತ್ತುಗೊಳಿಸಿರುವುದು ಒಬ್ಬ ಪ್ರಾಮಾಣಿಕ ಅಧಿಕಾರಿಯ ನೈತಿಕತೆ ಸ್ವಾಭಿಮಾನವನ್ನೇ ಪ್ರಶ್ನಿಸುವಂತೆ ಮಾಡಿದೆ. 


 

ಇನ್ನಷ್ಟು ಸುದ್ದಿಗಳು 

 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ


 

 

Leave a Comment